ಈವಾರ ಪ್ರೇಮಿಗಳ ಮೊದಲ ಮಿಡಿತ
ಫ್ಯಾಮಿಲಿ, ಲವ್, ಸೆಂಟಿಮೆಂಟ್ ಹೀಗೆ ಎಂಟರ್ ಟೈನ್ ಮೆಂಟ್ ಪ್ಯಾಕೇಜ್ ಒಳಗೊಂಡ ವಿಭಿನ್ನ ಕಥಾಹಂದರ ಹೊಂದಿದ ಚಿತ್ರ ಮೊದಲಮಿಡಿತ ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಹಲವಾರು ವರ್ಷಗಳ ಕಾಲ ಮಾದ್ಯಮದಲ್ಲಿ ಕೆಲಸ ಮಾಡಿದ್ದ ಹರಿಚೇತ್ ಕಥೆ, ಚಿತ್ರಕಥೆ ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನದ ಜೊತೆ ಸಂಗೀತ ಸಂಯೋಜನೆ ಮಾಡಿರುವ ಈ ಚಿತ್ರದಲ್ಲಿ ನಿಮೀಶ್ ಸಾಗರ್ ಹಾಗೂ ರಶ್ಮಿತ ರೋಜ ಯುವಜೋಡಿಗಳಾಗಿ ಕಾಣಿಸಿಕೊಂಡಿದ್ದಾರೆ.
ತಮ್ಮ ಪ್ರಥಮ ಪ್ರಯತ್ನದ ಕುರಿತಂತೆ ಮಾತನಾಡಿದ ನಿರ್ದೇಶಕ ಹರಿಚೇತ್, ಒಂದೇ ನೋಟದಲ್ಲಿ ಲವ್ ಆಗುತ್ತಾ ಅಂತ ಚಿತ್ರದ ಮೂಲಕ ಹೇಳುತ್ತಿದ್ದೇನೆ. ಇಡೀ ಕುಟುಂಬ ಯಾವುದೇ ಮುಜುಗರವಿಲ್ಲದೆ ಕುಳಿತು ನೋಡುವಂಥ ಚಿತ್ರವಿದು. ನಿರ್ಮಾಪಕರಾದ ಕೃಷ್ಣಪ್ಪ ಗುಂಡಸಂದ್ರ, ಗಟ್ಟಹಳ್ಳಿ ವಿಶ್ವನಾಥ್ ಅವರುಗಳು ನನ್ನ ಜೊತೆ ಕೈಜೋಡಿಸಿದ್ದಾರೆ. ದೊಡ್ಡಬಳ್ಳಾಪುರ, ಬೆಂಗಳೂರು, ಚಿಕ್ಕಮಗಳೂರು, ಹಾಸನ
ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ನಾಲ್ಕು ಆ್ಯಕ್ಷನ್ ಜೊತೆಗೆ, ನಾಲ್ಕು ಸುಂದರ ಹಾಡುಗಳಿದ್ದು, ಮನ ಮಿಡಿಯುವ ಪ್ರೇಮಕಥೆ, ತಂದೆ ಮಗನ ಬಾಂಧ್ಯವ್ಯ, ತಾಯಿ ಮಗನ ಕಥೆ ನಮ್ಮ ಚಿತ್ರದ ಹೈಲೈಟ್ ಎಂದರು.
ನಾಯಕಿ ರಶ್ಮಿತಾ ರೋಜಾ ಮಾತನಾಡಿ ಫ್ಯಾಮಿಲಿ ಆಡಿಯನ್ಸ್ ಇಷ್ಟಪಡುವಂಥ ಕಥೆ, ಯುವಜನಾಂಗಕ್ಕೆ ಹತ್ತಿರವಾಗ ಕಂಟೆಂಟ್ ನಮ್ಮ ಚಿತ್ರದಲ್ಲಿದೆ. ಪ್ರಿಯಾ ಎಂಬ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದರು. ನಾಯಕ ನಿಮೀಶ್ ಸಾಗರ್ ಮಾತನಾಡಿ, ನನ್ನ ಪಾತ್ರದ ಹೆಸರು ರಾಹುಲ್. ತನ್ನ ಪ್ರೀತಿ ಉಳಿಸಿಕೊಳ್ಳಲು ಸತತ ಹೋರಾಟ ನಡೆಸಿ, ಕೊನೆಗೆ ಆ ಹೋರಾಟದಲ್ಲಿ ಗೆಲ್ತಾನಾ ಇಲ್ವಾ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್ ಎಂದು ಹೇಳಿದರು. ನಾಗಾಭರಣ ಅವರು ನಾಯಕಿಯ ತಂದೆಯಾಗಿ, ರಾಮಕೃಷ್ಣ, ಸಂಗೀತ ನಾಯಕನ ತಂದೆ, ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ತಬಲಾನಾಣಿ, ಕಿಲ್ಲರ್ ವೆಂಕಟೆಶ್, ಕೆಂಪೇಗೌಡ, ಅರವಿಂದರಾವ್, ಭಾಸ್ಕರ ಶೆಟ್ಟಿ ಮುಂತಾದವರು ಉಳಿದ ತಾರಾಗಣದಲ್ಲಿದ್ದಾರೆ. ರಮೇಶ್ ಅವರ ಛಾಯಾಗ್ರಹಣ, ರಾಮ್ ಶೆಟ್ಟಿ ಪವನ್ ಅವರ ಸಂಕಲನ, ಕನಕರಾಜ್ ಅವರ ಕಲಾನಿರ್ದೇಶನವಿದೆ.