Motion poster, first look release for actor Pramodshetty's birthday

ನಟ ಪ್ರಮೋದ್‍ಶೆಟ್ಟಿ ಹುಟ್ಟುಹಬ್ಬಕ್ಕೆ ಮೋಷನ್ ಪೋಸ್ಟರ್ , ಫಸ್ಟ್ ಲುಕ್ ಬಿಡುಗಡೆ - CineNewsKannada.com

ನಟ ಪ್ರಮೋದ್‍ಶೆಟ್ಟಿ ಹುಟ್ಟುಹಬ್ಬಕ್ಕೆ ಮೋಷನ್ ಪೋಸ್ಟರ್ , ಫಸ್ಟ್ ಲುಕ್ ಬಿಡುಗಡೆ

ಕರಾವಳಿಯಿಂದ ಕನ್ನಡ ಚಿತ್ರರಂಗಕ್ಕೆ ಬರುತ್ತಿರುವ ಪ್ರತಿಭೆಗಳ ಸಂಖ್ಯೆ ದೊಡ್ಡದಿದೆ. ಅದರಲ್ಲಿಯೂ ಶೆಟ್ಟರ ಗ್ಯಾಂಗ್‍ನಲ್ಲಿ ಗುರುತಿಸಿಕೊಂಡಿರು ಪ್ರಮೋದ್‍ಶೆಟ್ಟಿ ಅವರು “ಶಭಾಷ್ ಬಡ್ನಿ ಮಗ್ನೆ” ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ನಟ ಪ್ರಮೋದ್ ಶೆಟ್ಟಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರದ ಮೋಷನ್ ಪೋಸ್ಟರ್ ಹಾಗು ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲಾಗಿದ್ದು ಚಿತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು ಶೆಟ್ಟರ ಗ್ಯಾಂಗ್‍ನಿಂದ ಮತ್ತೊಬ್ಬ ನಾಯಕ ಚಿತ್ರರಂಗದಲ್ಲಿ ಅಬ್ಬರಿ ಆರ್ಭಟಿಸಲು ಸಜ್ಜಾಗಿದ್ಧಾರೆ.

ಕಿಶನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರಕಾಶ್ ನಿರ್ಮಾಣ ಮಾಡುತ್ತಿರುವ ‘ಶಭಾಷ್ ಬಡ್ಡಿಮಗ್ನೆ’ ಚಿತ್ರದಲ್ಲಿ ಪ್ರಮೋಸ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ( ಆಗಸ್ಟ್ 31) ಹುಟ್ಟುಹಬ್ಬ ಇರುವ ಕಾರಣ, ಕಾಣಿಕೆ ನೀಡುವ ಸಲುವಾಗಿ ತಂಡ ಸಿನಿಮಾದ ಮೋಷನ್ ಪೋಸ್ಟರ್ ಹಾಗೂ ಫಸ್ಟ್ ಲುಕ್‍ನ್ನು ರಕ್ಷಿತ್‍ಶೆಟ್ಟಿ ಅವರಿಂದ ಬಿಡುಗಡೆ ಮಾಡಿಸಿದ್ದಾರೆ.

ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಬಿ.ಎಸ್.ರಾಜಶೇಖರ್ ಅವರಿಂದ ಚಿತ್ರದ ಮಾಹಿತಿ ಪಡೆದುಕೊಂಡು ಗೆಳೆಯನನ್ನು “ಶಭಾಷ್ ಬಡ್ಡಿಮಗ್ನೆ “ಅಂತ ರಕ್ಷಿತ್‍ಶೆಟ್ಟಿ ಕೊಂಡಾಡಿ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ನಿರ್ಮಾಪಕ ಪ್ರಕಾಶ್, ನಾಯಕಿ ಆದ್ಯಪ್ರಿಯಾ ಹಾಜರಿದ್ದರು.

ಶೀರ್ಷಿಕೆ ಅನಾವರಣಗೊಂಡಿದ್ದ ಆರಂಭದಿಂದಲೇ ಸಂಚಲನವನ್ನು ಸೃಷ್ಟಿ ಮಾಡಿದ್ದು, ಸಂಪೂರ್ಣ ಮಾತಿನ ಭಾಗದ ಚಿತ್ರೀಕರಣ ಮತ್ತು ಒಂದು ಹಾಡನ್ನು ಚಿಕ್ಕಮಗಳೂರಿನ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಸೆರೆ ಹಿಡಿಯಲಾಗಿದೆ.

ಸಾಮ್ರಾಟ್‍ಶೆಟ್ಟಿ, ಕಾವ್ಯ ರಮೇಶ್ ಮತ್ತೊಂದು ಯುವ ಜೋಡಿಗಳಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶಂಕರ್‍ಅಶ್ವಥ್, ಪ್ರಕಾಶ್‍ತುಮ್ಮಿನಾಡು, ಮೂಗುಸುರೇಶ್, ರಮೇಶ್‍ರೈ ಕುಕ್ಕವಳ್ಳಿ, ರವಿತೇಜ, ಮಿತ್ರಾ, ಈಶ್ವರ್ ಶೆಟ್ಟಿ, ಸುಧಾಮಣಿ, ಶೋಭಾಶೆಟ್ಟಿ, ಸವಿತಾ, ದರ್ಶನ್‍ಶೆಟ್ಟಿ, ಶೋಭಾಧನಂಜಯ್,ಗೀತಾವಸಂತ್ ಮುಂತಾದವರು ನಟಿಸಿದ್ದಾರೆ.

ಎಸ್.ಜೆ.ಸಂಜಯ್ ಸಹಕಾರ ನಿರ್ದೇಶಕ, ಅಣಜಿನಾಗರಾಜ್ ಛಾಯಾಗ್ರಹಣ, ಎಸ್.ಪಿ.ಭೂಪತಿ ಸಂಗೀತ, ಶ್ರೀನಿವಾಸ್‍ಕಲಾಲ್ ಸಂಕಲನವಿದೆ. ಮುಂದಿನ ದಿನಗಳಲ್ಲಿ ಒಂದೊಂದಾಗಿ ಆಶ್ಚರ್ಯಗಳನ್ನು ಕೊಡುತ್ತಾ, ನವೆಂಬರ್ ವೇಳೆಗೆ ಅಭಿಮಾನಿಗಳಿಗೆ ಭರಪೂರ ಮನರಂಜನೆಯ ರಸದೌತಣ ನೀಡಲು ಸಜ್ಜಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin