“ಮಿಸ್ಟರ್ ನಟ್ವರ್ ಲಾಲ್ ” ಚಿತ್ರದ ಟ್ರೈಲರ್ ಬಿಡುಗಡೆ: ಪೆಬ್ರವರಿ 23ಕ್ಕೆ ಚಿತ್ರ ತೆರೆಗೆ
ತನುಷ್ ಸಿನಿಮಾಸ್ ಲಾಂಛನದಲ್ಲಿ ತನುಷ್ ಶಿವಣ್ಣ ನಿರ್ಮಿಸಿ, ನಾಯಕನಾಗಿ ನಟಿಸಿರುವ ಹಾಗೂ ವಿ.ಲವ ನಿರ್ದೇಶನದ “ಒಡಿ ನಟ್ವರ್ ಲಾಲ್” ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.
ಕುಣಿಗಲ್ ಶಾಸಕರಾದ ಡಾ.ರಂಗನಾಥ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ನಿರ್ಮಾಪಕರಾದ ಭಾ.ಮ.ಹರೀಶ್, ಶಿಲ್ಪ ಶ್ರೀನಿವಾಸ್, ಟಿ.ಪಿ.ಸಿದ್ದರಾಜು, ಚಿಂಗಾರಿ ಮಹದೇವ್, ಕುಶಾಲ್, ಭಾ.ಮ.ಗಿರೀಶ್, ವಿತರಕರ ವಲಯದ ಅಧ್ಯಕ್ಷರಾದ ವೆಂಕಟೇಶ್, ನಿರ್ದೇಶಕ ಹಾಗೂ ಗೀತರಚನೆಕಾರ ಬಹದ್ದೂರ್ ಚೇತನ್ ಮುಂತಾದವರು ಸಮಾರಂಭಕ್ಕೆ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.
ನಿರ್ದೇಶಕ ವಿ.ಲವ ಮಾತನಾಡಿ ಇದೊಂದು ಕ್ರೈಂ ಥ್ರಿಲ್ಲರ್, ಆಕ್ಷನ್ ಚಿತ್ರ. ಬೆಂಗಳೂರಿನಲ್ಲಿ ನಡೆದ ನೈಜಘಟನೆ ಈ ಚಿತ್ರಕ್ಕೆ ಸ್ಪೂರ್ತಿ. ತನುಷ್ ಶಿವಣ್ಣ ಈ ಚಿತ್ರದ ನಾಯಕ. ಸೋನಾಲ್ ಮೊಂತೆರೊ ನಾಯಕಿ. ನಾಗಭೂಷಣ, ಕಾಕ್ರೋಜ್ ಸುಧಿ, ಯಶ್ ಶೆಟ್ಟಿ, ರಾಜೇಶ್ ನಟರಂಗ, ರಘು ರಾಮನಕೊಪ್ಪ, ಹರಿಣಿ ಶ್ರೀಕಾಂತ್, ಸುಂದರರಾಜ್, ಕಾಂತರಾಜು ಕಡ್ಡಿಪುಡಿ, ಸುಜಯ್ ಶಾಸ್ತ್ರಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಧರ್ಮವಿಶ್ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ಟ್ರೇಲರ್ ನಲ್ಲಿ ಈ ಚಿತ್ರದ ಎರಡನೇ ಭಾಗ ಬರುವ ಸುಳಿವು ಕೂಡ ನೀಡಿದ್ದೇವೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪೆÇ್ರೀತ್ಸಾಹವಿರಲಿ ಎಂದರು.
ನಾಯಕ ಹಾಗೂ ನಿರ್ಮಾಪಕ ತನುಷ್ ಶಿವಣ್ಣ ಮಾತನಾಡಿ ಮಿಸ್ಟರ್ ನಟ್ವರ್ ಲಾಲ್”, ನಾನು ನಾಯಕನಾಗಿ ನಟಿಸಿರುವ ನಾಲ್ಕನೇ ಚಿತ್ರ. ನಾನು ಎಂಟು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ವಿಶೇಷ. ನಿರ್ಮಾಣ ಕೂಡ ನನ್ನದೆ. ಒಂದು ಹಂತದಲ್ಲಿ ಹಣದ ಸಮಸ್ಯೆಯಿಂದಾಗಿ ಸಿನಿಮಾ ನಿಲಿಸಿ ಬಿಡೋಣ ಅಂದುಕೊಂಡೆ. ಆದರೆ ನಾನು ನಂಬಿರುವ ಅಮ್ಮನವರ ದಯೆಯಿಂದ ಅನೇಕ ಸ್ನೇಹಿತರು ನನ್ನ ಸಹಾಯಕ್ಕೆ ಬಂದರು. ಅವರೆಲ್ಲರ ಸಹಾಯ ಹಾಗೂ ನನ್ನ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಇದೇ 23 ಬಿಡುಗಡೆಯಾಗುತ್ತಿದೆ ಎಂದರು
ನಂದಿನಿ ಎಂಬುದು ನನ್ನ ಪಾತ್ರದ ಹೆಸರು ಎಂದು ನಾಯಕಿ ಸೋನಾಲ್ ಮೊಂತೆರೊ ತಿಳಿಸಿದರು. ಚಿತ್ರದಲ್ಲಿ ಅಭಿನಯಿಸಿರುವ ಹರಣಿ ಶ್ರೀಕಾಂತ್, ರಘು ರಮಣಕೊಪ್ಪ, ಕಾಕ್ರೋಜ್ ಸುಧೀ, ವಿಜಯ್ ಚೆಂಡೂರ್ ಹಾಗೂ ಛಾಯಾಗ್ರಾಹಕ ವಿಲಿಯಂ ಡೇವಿಡ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
ಈಗಾಗಲೇ ಈ ಚಿತ್ರದ ಟೀಸರ್ ಹಾಗೂ ಹಾಡುಗಳು ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಟ್ರೇಲರ್ ಕೂಡ ಸಖತಾಗಿದೆ. ನಾನು ಎರಡು ಹಾಡುಗಳನ್ನು ಬರೆದಿದ್ದೇನೆ ಎಂದರು ಬಹದ್ದೂರ್ ಚೇತನ್.