Much awaited film 'Kotee' trailer released: Dolly Dhananjaya in a different role

ಬಹುನಿರೀಕ್ಷಿತ ಚಿತ್ರ ‘ಕೋಟಿ’ ಟ್ರೇಲರ್ ಬಿಡುಗಡೆ: ವಿಭಿನ್ನ ಪಾತ್ರದಲ್ಲಿ ಡಾಲಿ ಧನಂಜಯ - CineNewsKannada.com

ಬಹುನಿರೀಕ್ಷಿತ ಚಿತ್ರ ‘ಕೋಟಿ’ ಟ್ರೇಲರ್ ಬಿಡುಗಡೆ: ವಿಭಿನ್ನ ಪಾತ್ರದಲ್ಲಿ ಡಾಲಿ ಧನಂಜಯ

ಡಾಲಿ ಧನಂಜಯ ಅವರ ಬಹುನಿರೀಕ್ಷಿತ ಚಿತ್ರ “ಕೋಟಿ” ಚಿತ್ರ ಇದೇ 14 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಇದಕ್ಕೂ ಮುನ್ನ ಚಿತ್ರ ಟ್ರೈಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಧನಂಜಯ್ ‘ಕೋಟಿ’ ಎಂಬ ಒಬ್ಬ ಸಾಮಾನ್ಯ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂಪಾಯಿ ದುಡಿದು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ. ಕೋಟಿಯ ಈ ಪಯಣದ ಕಥಾಹಂದರ ಹೊಂದಿರುವ ಜೂನ್ 14ಕ್ಕೆ ಬಿಡುಗಡೆಯಾಗಲಿದೆ.

ಧನಂಜಯ ಅವರ ಸಾಮಾನ್ಯ ವ್ಯಕ್ತಿಯ ಗೆಟಪ್, ರಮೇಶ್ ಇಂದಿರಾ ಅವರ ನಟೋರಿಯಸ್ ವಿಲನ್ ಪಾತ್ರ, ತಾರಾ ಅವರ ತಾಯಿಯ ಪಾತ್ರ, ಕ್ವಾಲಿಟಿ ವಿಶುವಲ್ಸ್, ಮತ್ತೆ ಮತ್ತೆ ಕೇಳಬೇಕೆನಿಸುವ ಹಿನ್ನೆಲೆ ಸಂಗೀತ, ಹುಲಿವೇಷ ಇವೆಲ್ಲವು ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ನೆರೆದಿದ್ದವರ ಗಮನ ಸೆಳೆದವು.

ಪರಮ್ ಆಕ್ಷನ್ ಕಟ್ ಹೇಳಿರುವ ಸಿನಿಮಾದಲ್ಲಿ ಡಾಲಿ ಧನಂಜಯ, ಮೋಕ್ಷಾ ನಾಯಕ,ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಪರಮ್, ಕೋಟಿ ಕಾಡುವ ಸಿನಿಮಾ,ಕೆಆರ್ ಜಿ ಸ್ಟುಡಿಯೋ ವತಿಯಿಂದ ಸಿನಿಮಾ ತೆರೆಗೆ ಬರುತ್ತಿದೆ. ಟೀಸರ್ ಬಿಡುಗಡೆಯಾಗಿತ್ತು. ಇದೀಗ ಟ್ರೈಲರ್ ಬಿಡುಗಡೆಯಾಗಿ ಗಮನ ಸೆಳೆದಿದೆ ಎಂದರು

ಜನರ ತೀರ್ಪಿಗೆ ಎದುರು ನೋಡಿತ್ತಿದ್ದೇನೆ, ಸಿಂಕ್ ಸೌಂಡ್‍ನಲ್ಲಿ ಮಾಡಿರುವ ಕೆಲವೇ ಸಿನಿಮಾಗಳಲ್ಲಿ ಇದೂ ಕೂಡ ಒಂದು, ಸಿನಿಮಾ ಮಿಕ್ಸಿಂಗ್ ಆಗುವಾದ ಸಿನಿಮಾ ನೋಡಿ ಭರವಸೆ ಮೂಡಿದೆ. ಎಕ್ಸೈಮೆಂಟ್‍ನಿಂದ ಮೂಡಿ ಬಂದಿದೆ. ಡಾಲಿ – ತಾರಮ್ಮ, ಡಾಲಿ- ಸಾಹುಕಾರ ನಡುವೆ ಪಾತ್ರ ಚೆನ್ನಾಗಿ ಮೂಡಿ ಬಂದಿದೆ. ಹೃದಯಕ್ಕೆ ತಟ್ಟಲಿದ ಎನ್ನುವ ನಂಬಿಕೆ ಇದೆ ಎಂದರು

ಡಾಲಿ ಧನಂಜಯ ಮಾತನಾಡಿ “ಇದೊಂದು ಮಿಡಲ್ ಕ್ಲಾಸ್ ಸಾಮಾನ್ಯ ವ್ಯಕ್ತಿಯ ಕತೆ. ಇದು ಎಲ್ಲರಿಗೂ ಕನೆಕ್ಟ್ ಆಗುವ ಪ್ಯಾಮಿಲಿ ಎಂಟರ್ಟೈನರ್” .ಮಧ್ಯಮ ವರ್ಗದ ಕುಟುಂಬದ ಕಥೆಗಳು ಜನರ ಮನಸ್ಸು ಸದಾ ಮುಟ್ಟಲಿವೆ. ಅದನ್ನು ಡಾ. ರಾಜ್ ಕುಮಾರ್, ವಿಷ್ಟುವರ್ದನ್ ಸೇರಿದಂತೆ ಹಿರಿಯ ನಟರ ಸಿನಿಮಾಗಳೇ ಇದಕ್ಕೆ ತಾಜಾ ಉದಾಹರಣೆ. ಈ ಹಿನ್ನೆಲೆಯಲ್ಲಿ ಅದೇ ರೀತಿಯ ಪಾತ್ರ ಮಾಡಿದ್ದೇನೆ. ಕೋಟಿ ಚಿತ್ರದ ಪಾತ್ರ ಮತ್ತು ಕಥೆ ಕಾಡುವ ಕಥೆ ಒಳಗೊಂಡಿದೆ ಎಲ್ಲರಿಗೂ ಇಷ್ಟವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

ನಟಿ ಮೋಕ್ಷಾ ಮಾತನಾಡಿ, ಚಿತ್ರ ಬಿಡುಗಡೆಯಾದ ನಂತರ ಜನರ ಮನಸ್ಸು ಕದಿಯುತ್ತೇನೆ. ವಿಭಿನ್ನವಾದ ಚಿತ್ರ, ಒಳ್ಳೆಯ ಸಿನಿಮಾ ಮಾಡಲು ತಂಡ ಕೂಡ ಮುಖ್ಯ,

ಹಿರಿಯ ನಟಿ ತಾರಾ ಅನುರಾಧ ಮಾತನಾಡಿ, ನಿರ್ದೇಶಕ ಪರಮ್ ಸಣ್ಣ ಭಾವನೆಗಳನ್ನು ತೆಗೆಸಿದ್ದಾರೆ. ನಿರ್ದೇಶಕರಲ್ಲಿ ಹಠವಿದೆ. ಚಿತ್ರ ಬಿಡುಗಡೆಯಾದ ಮೇಲೆ ಮೆಚ್ಚು ಕೊಳ್ಳುತ್ತೋರ, ನಟ ಧನಂಜು ಜೊತೆ ಮೂರನೇ ಚಿತ್ರ ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಒಂದೇ ರೀತಿ ಯಾವುದೇ ವ್ಯತ್ಯಾಸ ಕಾಣದು ಎಂದರು.

ವಿತಕರ ಕೆಆರ್ ಜಿಯ ಕಾರ್ತಿಕ್ ಗೌಡ ಮಾತನಾಡಿ , ರತ್ನನ್ ಪ್ರಪಂಚ ಚಿತ್ರದಿಂದ ಇಲ್ಲಿಯ ತನಕ ಐದು ವರ್ಷದ ಜರ್ನಿ , ಹತ್ತು ವರ್ಷದ ಕಿರುತೆರೆಯ ಜರ್ನಿಯನ್ನು ಒಂದೇ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಕಮರ್ಷಿಯಲ್ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. 2.5 ಗಂಟೆ ಸಿನಿಮಾವನ್ನು ಪ್ರೇಕ್ಷಕರ ಅಲುಗಾಡಂತೆ ಮಾಡಿದ್ದಾರೆ ನಿರ್ದೇಶಕರು,ಅರ್ಧ ಗಂಟೆಯ ಸಿನಿಮಾ ನೋಡಿ ವಿತರಣೆ ಮಾಡಲು ಮುಂದಾಗಿದ್ದಾಗಿ ಅವರು ತಿಳಿಸಿದ್ದಾರೆ.

ಪೃಥ್ವಿ ಶಾಮನೂರು, ಅಭಿ, ತನುಜಾ ಚಿತ್ರದ ಪಾತ್ರ ಬಗ್ಗೆ ಮಾಹಿತಿ ಹಂಚಿಕೊಂಡರು

ಅಪ್ಪಟ ಕನ್ನಡ ಮಣ್ಣಿನ ಕತೆಯಾದ ಕೋಟಿ ಈಗಾಗಲೇ ಟೀಸರ್ ಮತ್ತು ಹಾಡುಗಳ ಮುಖಾಂತರ ಸದ್ದು ಮಾಡುತ್ತಿದೆ. ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೆ ಕಂಗೆಟ್ಟಿರುವ ಕನ್ನಡ ಇಂಡಸ್ಟ್ರಿಗೆ ‘ಕೋಟಿ’ ಗೆಲ್ಲುವ ಭರವಸೆಯಾಗಿ ಕಂಡಿದೆ.

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿಂ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‍ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.

ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಅವರು ಬರೆದು ನಿರ್ದೇಶಿಸಿದ್ದಾರೆ. ಕೋಟಿ ಜೂನ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin