"Raj Cup Season-6" Jersey Launch : Producer Ashwini Puneeth Rajkumar Saath

“ರಾಜ್ ಕಪ್ ಸೀಸನ್-6” ಜರ್ಸಿ ಬಿಡುಗಡೆ : ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಾಥ್ - CineNewsKannada.com

“ರಾಜ್ ಕಪ್ ಸೀಸನ್-6” ಜರ್ಸಿ ಬಿಡುಗಡೆ : ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಾಥ್

ಡಾ.ರಾಜ್ ಕಪ್ ಸೀಸನ್6ಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಚಂದನವನದ ತಾರೆಯರು ತಯಾರಿ ಆರಂಭಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಸ್ಮಾರಣಾರ್ಥವಾಗಿ ರಾಜ್ ಕಪ್ ಆಯೋಜಿಸಲಾಗಿದೆ. ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಜರ್ಸಿ ಬಿಡುಗಡೆ ಮಾಡಲಾಗಿದ್ದು, ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಾರ್ಯಕ್ರಮಕ್ಕೆ ಸಾಥ್ ಕೊಟ್ಟಿದ್ದು ವಿಶೇಷ.

ಈ ಬಾರಿಯ ಡಾ.ರಾಜ್ ಕಪ್ ಸೀಸನ್ 6 ನವೆಂಬರ್ 28 ರಿಂದ ಡಿಸೆಂಬರ್ 10ರ ವರೆಗೆ ನಡೆಯಲಿದೆ. ವಿಶ್ವದ ಹಲವು ಭಾಗಗಳಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ನವೆಂಬರ್ 28 ಮತ್ತು 29 ಶ್ರೀಲಂಕಾ, ಡಿಸೆಂಬರ್ 1 ಮತ್ತು 2 ಮಲೇಷಿಯಾ, ಡಿಸೆಂಬರ್ 3 ಮತ್ತು 4ಕ್ಕೆ ಸಿಂಗಾಪುರ್, ಡಿಸೆಂಬರ್ 7 ಮತ್ತು 8ಕ್ಕೆ ಮಸ್ಕತ್ ನಲ್ಲಿ ಲೀಗ್ ಮ್ಯಾಚ್ ನಡೆಯಲಿವೆ. ರಾಜ್ ಕಪ್ ಫೈನಲ್ ಪಂದ್ಯ ಕರ್ನಾಟಕದಲ್ಲಿ ನಡೆಯಲಿವೆ.

ಆಯೋಜಕ ರಾಜೇಶ್ ಬ್ರಹ್ಮಾವರ ಮಾತನಾಡಿ ರಾಜ್ ಕಪ್ ಆರನೇ ಸೀಸನ್ ವಿದೇಶದಲ್ಲಿ ಮಾಡ್ತಾ ಇರುವುದು ನನಗೆ ಕಷ್ಟವಾಗುತ್ತಿಲ್ಲ. ಉತ್ತಮ ಕ್ಯಾಪ್ಟನ್ಸ್, ಓನರ್ ಹಾಗೂ ಫ್ಲೇಯರ್ಸ್ ಸಿಕ್ಕಿದ್ದಾರೆ. ಯಾರದ್ದೂ ಟರ್ಚರ್ ಇಲ್ಲ. ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದೆ. ಓನರ್ ಬಂದ್ಮೇಲೆ ಅವರೇ ಟೀಂ ರೆಡಿ ಮಾಡುತ್ತಿದ್ದಾರೆ. ಮುಂದಿನ ವರ್ಷ ಎಷ್ಟು ದೇಶಗಳಲ್ಲಿ ಮಾಡುತ್ತೇನೆ ಗೊತ್ತಿಲ್ಲ. ದುಬೈನಲ್ಲಿ ಲೈವ್ ಸಿಗಲ್ಲ ಎಂದಿದ್ದರು. ಟ್ರೇ ಮಾಡಿ ಮಾಡಿ ಪರ್ಮಿಷನ್ ತೆಗೆದುಕೊಂಡು ಬಂದಿದ್ದೇವೆ ಎಂದರು.

ಡಾ. ರಾಜ್ ಕಪ್ ಸೀಸನ್ 6 ನಲ್ಲಿ 12 ತಂಡಗಳು

ಈ ಬಾರಿಯ ಡಾ. ರಾಜ್ ಕಪ್ ಸೀಸನ್ 6 ನಲ್ಲಿ ಒಟ್ಟು 12 ತಂಡಗಳು ಭಾಗಿಯಾಗಲಿದ್ದು, 27 ಪಂದ್ಯಗಳು ನಡೆಯಲಿದೆ.

  1. ಸಮೃದ್ದಿ ಫೈಟರ್ಸ್ ತಂಡ- ಓನರ್ ಮಂಜುನಾಥ್
  2. DX ಮ್ಯಾಕ್ಸ್ ಲೈನ್ಸ್ ತಂಡ- ಓನರ್ ದಯಾನಂದ್
  3. ರಾಮನಗರ ರಾಕರ್ಸ್ ತಂಡ- ಓನರ್ ಮಹೇಶ್ ಗೌಡ
  4. ELV ಲಯನ್ ಕಿಂಗ್ಸ್ ತಂಡ – ಓನರ್ ಪುರುಷೋತ್ತಮ್ ಭಾಸ್ಕರ್
  5. AVR ಟಸ್ಕರ್ಸ್ ತಂಡ – ಓನರ್ ಅರವಿಂದ್ ರೆಡ್ಡಿ
  6. KKR ಕಿಂಗ್ಸ್ ತಂಡ – ಓನರ್ ಲಕ್ಷ್ಮೀ ಕಾಂತ್ ರೆಡ್ಡಿ
  7. 7.Rabit ರೇಸರ್ಸ್ ತಂಡ- ಓನರ್ ಅರು ಗೌಡ
  8. ಮಯೂರ ರಾಯಲ್ಸ್ ತಂಡ- ಓನರ್ ಸೆಂಥಿಲ್
  9. ರಾಯಲ್ ಕಿಂಗ್ಸ್ ತಂಡ- ಓನರ್ ಶ್ರೀರಾಮ್ ಮತ್ತು ಮುಖೇಶ್
  10. ಕ್ರಿಕೆಟ್ ನಕ್ಷತ್ರ ತಂಡ- ಓನರ್ ನಕ್ಷತ್ರ ಮಂಜು
  11. ಅಶು ಸೂರ್ಯ ಸೂಪರ್ ಸ್ಟಾರ್ ತಂಡ- ಓನರ್ ರಂಜಿತ್ ಪಯಾಜ್ ಖಾನ್
  12. ರುಚಿರಾ ರೇಂಜರ್ಸ್ ತಂಡ- ಓನರ್ ರಾಮ್

ರಾಜ್ ಕಪ್ ಸೀಸನ್ 6ಕ್ಕೆ ಸಿನಿತಾರೆಯರ ಬೆಂಬಲ

ರಾಜ್ ಕಪ್ ಸೀಸನ್ 6ರಲ್ಲಿ ನಟರಾದ ಡಾಲಿ ಧನಂಜಯ್, ಅನಿರುದ್ದ್, ಡಾರ್ಲಿಂಗ್ ಕೃಷ್ಣ , ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ವಶಿಷ್ಠ ಸಿಂಹ, ಪ್ರಜ್ವಲ್, ಕೋಮಲ್, ಶ್ರೀನಗರ ಕಿಟ್ಟಿ, ರಾಜುಗೌಡ ನೇತೃತ್ವದ ತಂಡಗಳು ಪಂದ್ಯದಲ್ಲಿ ಪಾಲ್ಗೊಳ್ಳಲಿವೆ. ಡಾ,ರಾಜ್ ಕಪ್ ಗಾಗಿ ಆನಂದ್ ಆಡಿಯೋ ಹೊಸ ಹೆಜ್ಜೆ ಇಟ್ಟಿದ್ದು, ಈ ಪಂದ್ಯಾವಳಿಗಾಗಿ ಸ್ಪೋರ್ಟ್ ಯೂಟ್ಯೂಬ್ ಪ್ರಾರಂಭ ಮಾಡ್ತಿದ್ದು, ಲೈವ್ ಮ್ಯಾಚ್‍ಗಳನ್ನು ಯೂಟ್ಯೂಬ್‍ನಲ್ಲಿ ನೋಡಬಹುದು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin