ದಶಕದ ಬಳಿಕ ಹೆಣ್ಣು ಮಗು ಬರ ಮಾಡಿ ಕೊಂಡ ರಾಮ್ ಚರಣ್ ತೇಜಾ-ಉಪಾಸನಾ ದಂಪತಿ
ತೆಲುಗು ಚಿತ್ರರಂಗದ ಮೆಘಾ ಸ್ಟಾರ್ ಚಿರಂಜೀವಿ ಅವರ ಪುತ್ರ ರಾಮ್ ಚರಣ್ ತೇಜಾ ಮತ್ತು ಉಪಾಸನಾ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 2012ರಲ್ಲಿ ಮದುವೆಯಾಗಿದ್ದರು. ಇದೀಗ ಈ ದಂಪತಿ ಚೊಚ್ಚಲ ಮಗು ಬರಮಾಡಿಕೊಂಡಿದ್ದಾರೆ,
ರಾಮ್ ಚರಣ್ ಮತ್ತು ಉಪಾಸನಾ ಕಮಿನೇನಿ ಅವರ ಮದುವೆಯಾದ 10 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.ಹೈದರಾಬಾದ್‍ನ ಅಪೊಲೋ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಉಪಾಸನಾ ಕಮಿನೇನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರಾಮ್ ಚರಣ್ ತೇಜಾ ಮತ್ತು ಉಪಾಸನಾ ಕೊನಿಡೇಲಾ ಅವರು ಚೊಚ್ಚಲ ಮುಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ಮೆಘಾ ಸ್ಟಾರ್ ಚಿರಂಜೀವಿ ಕುಟುಂಬದ ಸದಸ್ಯರು ಸಂತಸ ಮನೆ ಮಾಡಿದೆ.