ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರ್ ಗೆ ಲೈಕ್ ಆದ “ಲೈಕಾ”

ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರ್ ಒಂದಷ್ಟು ಬಿಡುವಿನ ನಂತರ ಸಿನಿಮಾ ಒಪ್ಪಿಕೊಂಡಿದ್ದಾರೆ. ರೈಡರ್ ಚಿತ್ರದ ಬಳಿಕ ರಾಜಕೀಯದ ಕಡೆಗೆ ಗಮನ ಹರಿಸಿದ್ದರು.ಇದೀಗ ಮರಳಿ ಚಿತ್ರರಂಗದ ಕಡೆ ಗಮನ ಹರಿಸಿದ್ದಾರೆ.

ದಕ್ಷಿಣ ಭಾರತ ಪ್ರಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್, ನಿಖಿಲ್ ಕುಮಾರ ಸ್ವಾಮಿ ಅವರಿಗೆ ಚಿತ್ರ ನಿರ್ಮಾಣ ಮಾಡುತ್ತದೆ ಎನ್ನುವ ಮಾತುಗಳು ಬಹು ಹಿಂದಿನಿಂದಲೂ ಕೇಳಿ ಬರುತ್ತಿದ್ದವು. ಇದೀಗ ಆ ಘಳಿಗೆ ಬಂದೇ ಬಿಟ್ಟಿದೆ.
ಇದೇ 23 ರಂದು ಅಂದರೆ ನಾಳೆ, ನಿಖಿಲ್ ಕುಮಾರ ಸ್ವಾಮಿ ಅವರ ಹೊಸ ಚಿತ್ರದ ಮುಹೂರ್ತ ನಡೆಯಲಿದೆ. ಈಗಾಗಲೇ ತಿಳಿದಿರುವುದಂತೆ ಲೈಕಾ ಪ್ರೊಡಕ್ಷನ್ ಚಿತ್ರ ನಿರ್ಮಾಣ ಮಾಡುತ್ತಿದ್ದು, ಚಿತ್ರದ ನಿರ್ದೇಶಕ ಯಾರು, ಕಲಾವಿದರು ತಂತ್ರಜ್ಞರು ಯಾರು ಎನ್ನುವುದು ನಾಳೆ ಅನಾವರಣಗೊಳ್ಳಲಿದೆ.

ಲೈಕಾ ಪ್ರೊಡಕ್ಷನ್ ಅಂದ ಮೇಲೆ ಅದು ಪ್ಯಾನ್ ಇಂಡಿಯಾ ಚಿತ್ರವೇ ಆಗಿರಲಿದೆ, ಎಲ್ಲದಕ್ಕೂ ನಾಳೆ ಉತ್ತರ ಸಿಗಲಿದೆ. ರೈಡರ್ ಚಿತ್ರದ ನಂತರ ನಿಖಿಲ್ ಸಿನಿಮಾ ಸೆಟ್ಟೇರುತ್ತಿರುವುದರಿಂದ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಲೈಕಾ ಸಂಸ್ಥೆ ಯಶಸ್ವಿ ಚಿತ್ರ ನಿರ್ಮಾಣ ಮಾಡಿದ ಹಿರಿಮೆ ತನ್ನದಾಗಿಸಿಕೊಂಡಿದೆ. ಅದರಲ್ಲಿಯೂ ಕತ್ತಿ, 2.0, ವಡಾ ಚೆನೈ , ದರ್ಬಾರ್,ಪಿಎಸ್-1, ಪಿಎಸ್-1 ಡಾನ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸದ್ಯ ಇಂಡಿಯನ್ 2, ಲಾಲ್ ಸಲಾಂ, ಚಂದ್ರಮುಖಿ-2, ಚಿತ್ರಗಳನ್ನ ನಿರ್ಮಾಣ ಮಾಡುತ್ತಿರೋ ಲೈಕಾ ಸಂಸ್ಥೆ ಈಗ ಇದೀಗ ನಿಖಿಲ್ ಕುಮಾರಸ್ವಾಮಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಲು ಮುಂದಾಗಿದೆ.
ನಾಳೆ ಬೆಂಗಳೂರಿನಲ್ಲಿ ಅದ್ದೂರಿ ಮಹೂರ್ತ ಸಮಾರಂಭ ನಡೆಯಲಿದ್ದು ಗಣ್ಯಾತಿ ಗಣ್ಯರು ಭಾಗಿಯಾಗಲಿದ್ದಾರೆ.
ಕಮಲ್ ಹಾಸನ್ , ವಿಕ್ರಂ, ಅಜಿತ್, ರಜಿನಿಕಾಂತ್ , ವಿಜಯ್ ರಂತಹ ಸೂಪರ್ ಸ್ಟಾರ್ ಚಿತ್ರಗಳಿಗೆ ಬಂಡವಾಳ ಹಾಕಿರೋ ಸಂಸ್ಥೆ ಲೈಕಾ ನಿಖಿಲ್ ಕುಮಾರ ಸ್ವಾಮಿ ಅವರ ಮೇಲೂ ಬಂಡವಾಳ ಹೂಡುತ್ತಿದೆ. ಲೈಕಾ ಮೊದಲ ಕನ್ನಡ ಸಿನಿಮಾಗೆ ಯಾರಾಗಲಿದ್ದಾರೆ ನಿರ್ದೇಶಕ ಎನ್ನುವ ಕುತೂಹಲ ಕೆರಳಿಸಿದೆಬಹುಕೋಟಿ ವೆಚ್ಚದ ಚಿತ್ರಕ್ಕೇ ಆಕ್ಷನ್ ಕಟ್ ಹೇಳ್ತಾರಾ ಸ್ಟಾರ್ ಡೈರೆಕ್ಟರ್ ಅಥವಾ ಹೊಸಬರಾ ಎನ್ನುವ ಎಲ್ಲಾ ಕುತೂಹಲಗಳಿಗೆ ನಾಳೆ ಉತ್ತರ ಸಿಗಲಿದೆ.