Sensor appreciates Vyshampayana Teera

“ವೈಶಂಪಾಯನ ತೀರ” ಸೆನ್ಸಾರ್ ನಿಂದ ಮೆಚ್ಚುಗೆ - CineNewsKannada.com

“ವೈಶಂಪಾಯನ ತೀರ” ಸೆನ್ಸಾರ್ ನಿಂದ ಮೆಚ್ಚುಗೆ

ಸ್ವರಸಂಗಮ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಆರ್. ಸುರೇಶಬಾಬು ನಿರ್ಮಿಸಿ, ಮಲೆನಾಡ ಸುಪ್ರಸಿದ್ಧ ರಂಗಕರ್ಮಿ ರಮೇಶಬೇಗಾರ್ ನಿರ್ದೇಶಿಸಿರುವ “ವೈಶಂಪಾಯನ ತೀರ…” ಸಿನಿಮಾದ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ಮತ್ತು ಮ್ಯೂಟ್ಸ್ ಇಲ್ಲದೆ ಎಲ್ಲರೂ ನೋಡಬಹುದಾದ ಸಿನಿಮಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

ಪ್ರಸಿದ್ಧ ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಸಣ್ಣಕತೆ ಆಧರಿಸಿರುವ ಈ ಸಿನಿಮಾದಲ್ಲಿ ಯಕ್ಷಗಾನದ ಹಿನ್ನೆಲೆಯಲ್ಲಿ ಪ್ರಕೃತಿ ಮತ್ತು ಪುರುಷನ ಸಂಬಂಧವನ್ನು ವಿಭಿನ್ನವಾದ ಕುತೂಹಲಕರ ಧಾಟಿಯಲ್ಲಿ ನಿರೂಪಿಸಲಾಗಿದೆ. ಸಂಪೂರ್ಣವಾಗಿ ಮಲೆನಾಡ ಭಾಷೆ, ಜನಜೀವನ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಈ ಚಿತ್ರದಲ್ಲಿ ಬಳಸಿಕೊಂಡಿದ್ದು ಶೃಂಗೇರಿ ಪರಿಸರದ ಹತ್ತಾರು ರಂಗಕಲಾವಿದರು ಹಿರಿತೆರೆಗೆ ಬಣ್ಣ ಹಚ್ಚಿದ್ದಾರೆ.
ಪ್ರಮೋದ್ ಶೆಟ್ಟಿಯವರು ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದ ನಾಯಕಿ ವೈಜಯಂತಿ ಅಡಿಗ. ಉಳಿದಂತೆ ರವೀಶ್ ಹೆಗಡೆ, ಪ್ರಸನ್ನ ಶೆಟ್ಟಿಗಾರ್,ರಮೇಶ್‌ಭಟ್, ಬಾಬು ಹಿರಣ್ಣಯ್ಯ, ರಮೇಶ್ ಪಂಡಿತ್, ಗುರುರಾಜ ಹೊಸಕೋಟೆ, ಶೃಂಗೇರಿ ರಾಮಣ್ಣ, ರವಿಕುಮಾರ್ ಮೊದಲಾದವರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶ್ವವಿಖ್ಯಾತಿಯ ರಂಗಭೂಮಿ ಹಾಸ್ಯ ಕಲಾವಿದರಾದ ಕುಂದಾಪುರದ ಕುಳ್ಳಪ್ಪು ಸಹೋದರರಾದ ಸತೀಶ್‌ಪೈ ಮತ್ತು ಸಂತೋಷ್‌ಪೈ ಇದೇ ಮೊದಲ ಬಾರಿ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.
ಶ್ರೀನಿಧಿ ಕೊಪ್ಪ – ಹಿನ್ನೆಲೆ ಸಂಗೀತ, ಶಶಿರ-ಛಾಯಾಗ್ರಹಣ, ಅವಿನಾಶ್-ಸಂಕಲನ ಈ ಚಿತ್ರಕ್ಕಿದೆ. ಜನವರಿ ತಿಂಗಳ ಮೊದಲ ವಾರದಲ್ಲಿ ರಾಜ್ಯಾದ್ಯಂತ ಚಿತ್ರ ತೆರೆ ಕಾಣಲಿದೆ.

admin

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin