ದೊಡ್ಮನೆಯ ಮತ್ತೊಂದು ಕುಡಿ ಆಗಮನ
“ಯುವ”ನಾಗಿ ಯುವರಾಜ್ ಕುಮಾರ್ ಪ್ರವೇಶ

ಕನ್ನಡ ನಾಡಿಗೆ ಹಾಗು ರಾಷ್ಟ್ರಕ್ಕೆ ಸತತ ಸದಬಿರುಚಿಯ ಹಾಗು ದಾಖಲೆ ನಿರ್ಮಿಸಿದಂತಹ ಚಲನಚಿತ್ರ ನಿರ್ಮಿಸುತ್ತಾ ಬಂದಿರುವ ಹೊಂಬಾಳೆ ಫಿಲ್ಮ್ಸ್ ವತಿಯಿಂದ ಮತ್ತೊಂದು ಹೆಮ್ಮೆಯ ಚಿತ್ರ ಸಮರ್ಪಣೆ “ಯುವ”.
ಚಿತ್ರರಂಗಕ್ಕೆ ತಮ್ಮ ಮೌಲ್ಯಾದಾರಿತ ಆಲೋಚನೆಗಳು ಹಾಗು ಮನೋರಂಜನೆ ತುಂಬಿದ ಚಿತ್ರಕತೆಗಳಿಂದ ಒಂದರ ಹಿಂದೆ ಮತ್ತೊಂದು ದಾಖಲೆ ನಿರ್ಮಿಸಿದ ಚಲನಚಿತ್ರಗಳನ್ನು ನೀಡಿದ ಸಂತೋಷ್ ಆನಂದ್‌ರಾಮ್ ರವರ ಐದನೆಯ ಬಹು ನಿರೀಕ್ಷಿತ ಚಿತ್ರ “ಯುವ”. ಹೊಂಬಾಳೆ ಫಿಲ್ಮ್ಸ್ ಹಾಗು ಸಂತೋಷ್ ಆನಂದ್‌ರಾಮ್ ರವರ ಕಾಂಬಿನೇಶನ್ ನ ಗೆಲುವಿನ ಓಟಕ್ಕೆ ಈ ಚಿತ್ರ ನಾಲ್ಕನೇ ಸೇರ್ಪಡೆ.
ಕನ್ನಡದ ಸಾಂಸ್ಕೃತಿಕ ರಾಯಭಾರಿ ಎಂಬ ಅನ್ವರ್ಥನಾಮ ಇರುವ ಮೇರು ನಟ ಪದ್ಮಭೂಷಣ ಡಾ. ರಾಜಕುಮಾರ್ ರವರ ಕುಟುಂಬದಿಂದ ಈ ನಾಡಿಗೆ ಹಾಗು ಕನ್ನಡ ಚಿತ್ರರಂಗಕ್ಕೆ ಹಲವಾರು ಕೊಡುಗೆಗಳು ದಶಕಗಳಿಂದ ನಮ್ಮ ರಾಜ್ಯಕ್ಕೆ ದೊರೆತಿದೆ. ಡಾ .ಪಾರ್ವತ್ತಮ್ಮ ರಾಜಕುಮಾರ್ ರ ಆದಿಯಾಗಿ, ಡಾ.ಶಿವರಾಜಕುಮಾರ್ , ರಾಘವೇಂದ್ರ ರಾಜಕುಮಾರ್ ಹಾಗು ಡಾ. ಪುನೀತ್ ರಾಜಕುಮಾರ್ ಕಲಾ ಸೇವೆಯಲ್ಲಿ ಅಂದಿನಿಂದಲೂ ಮೊದಲ ಸಾಲಿನಲ್ಲಿ ಇರುತ್ತಾರೆ . ಇಂತಹ ಜವಾಬ್ದಾರಿಯುತ ಕಲಾ ಕುಟುಂಬದಿಂದ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕೊಡುಗೆ ಯುವರಾಜಕುಮಾರ್.
ಯುವರಾಜಕುಮಾರ್ ಅವರ ಮೊದಲ ಚಿತ್ರದ ಶೀರ್ಷಿಕೆ ಅನಾವರಣ ಹಾಗು ಚಿತ್ರದ ಮುಹೂರ್ತ ಇಂದು ಬೆಂಗಳೂರು ನಗರದ ಹೋಟೆಲ್ ಲಲಿತ್ ಅಶೋಕದಲ್ಲಿ ವಿಜೃಂಭಣೆಯಿಂದ ಜರುಗಿದೆ.

ಈ ಭವ್ಯ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕರಾದ ವಿಜಯ್ ಕಿರಗಂದೂರ್, ನಿರ್ದೇಶಕ ಸಂತೋಷ್ ಆನಂದ್‌ರಾಮ್, ನಟ ಯುವರಾಜಕುಮಾರ್, ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್, ಛಾಯಾಗ್ರಾಹಕ ಶ್ರೀಶ ಕೂದುವಳ್ಳಿ, ಹಾಗು ಚಿತ್ರದ ಇತರೆ ತಾಂತ್ರಿಕ ವಿಭಾಗದವರು ಹಾಗು ಡಾ. ರಾಜ್ ಕುಟುಂಬದ ಅನೇಕ ಗಣ್ಯರು ಹಿತೈಷಿಗಳು ಪಾಲ್ಗೊಂಡಿದ್ದರು. ಚಿತ್ರದ ಉಳಿದ ತಾರಾಗಣದ ಆಯ್ಕೆ ಪ್ರಗತಿಯಲ್ಲಿದೆ.
ಈ ಸಮಾರಂಭದಲ್ಲಿ ಚಿತ್ರದ ಮೊದಲ ಕ್ಲಾಪ್ ಅನ್ನು ಶ್ರೀಮತಿ ಶೈಲಜಾ ವಿಜಯ್ ಕಿರಗಂದೂರ್ ಮಾಡಿದರೆ, ಕ್ಯಾಮೆರಾ ಚಾಲನೆ ನೀಡಿದ್ದು ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್. ಚಿತ್ರದ ಮೊದಲ ಶಾಟ್ ಗೆ ಆಕ್ಷನ್ ಕಟ್ ಹೇಳಿದವರು ಡಾ .ಶಿವರಾಜಕುಮಾರ್.
ಯುವ ಡಿಸೆಂಬರ್-2023 2-ಡಿಸೆಂಬರ್- 22 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ