The second song from the film "Powder" is released
“ಪೌಡರ್” ಚಿತ್ರದ ಎರಡನೇ ಗೀತೆ ಬಿಡುಗಡೆ
ಕೆ.ಆರ್.ಜಿ.ಸ್ಟೂಡಿಯೋಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ನ ಪ್ರಮುಖ ಮತ್ತು ಪ್ರಥಮ ಸಹಯೋಗವಾದ “ಪೌಡರ್” ಚಿತ್ರ ತನ್ನ ಎರಡನೇ ಹಾಡು ಬಿಡುಗಡೆಯಾಗಿದೆ
ಈ ಚಿತ್ರದ ಮೊದಲನೇ ಗೀತೆ “ಮಿಷನ್ ಘಮ ಘಮ” ಎಲ್ಲೆಡೆ ಸದ್ದು ಮಾಡಿತ್ತು. ಈ ನಿಟ್ಟಿನಲ್ಲಿ ಚಿತ್ರ ತಂಡ ಎರಡನೆ ಗೀತೆಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
ಈ ಹಾಡಿಗೆ ವಾಸುಕಿ ವೈಭವ್ ರಾಗ ಸಂಯೋಜನೆ ಮಾಡಿದ್ದು, ಖ್ಯಾತ ಗಾಯಕ ಆಂಟೊನಿ ದಾಸನ್ ಹಾಡಿದ್ದಾರೆ.
“ಪೌಡರ್” ಒಂದು ಹಾಸ್ಯಭರಿತ ಚಿತ್ರವಾಗಿದ್ದು, ಇದನ್ನು ಜನಾರ್ದನ್ ಚಿಕ್ಕಣ್ಣ ನಿರ್ದೇಶಿಸಿರುತ್ತಾರೆ. ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು ಮತ್ತು ಇನ್ನಿತರರು ನಟಿಸಿರುವ ಈ ಚಿತ್ರವನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್. ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ. “ಪೌಡರ್” ಇದೇ ಆಗಸ್ಟ್ 15ಕ್ಕೆ ತೆರೆ ಕಾಣಲಿದೆ.