“ಗುನು ಗುನುಗು” ಹಾಡು ಬಿಡುಗಡೆ ಮಾಡಿದ ನಟ ಗೋಲ್ಡನ್ ಸ್ಟಾರ್ ಗಣೇಶ್
ಸಿಂಪಲ್ ಸುನಿ ಮತ್ತು ವಿನಯ್ ರಾಜ್ ಕುಮಾರ್ ಜೋಡಿಯ ಬಹು ನಿರೀಕ್ಷಿತ ಚಿತ್ರ ” ಒಂದು ಸರಳ ಪ್ರೇಮಕಥೆ” ಚಿತ್ರ ಫೆಬ್ರವರಿ 8 ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಚಿತ್ರ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಚಿತ್ರದ ” ಗುನು ಗುನುಗು ” ಹಾಡನ್ನು ನಟ ಗೋಲ್ಡನ್ ಸ್ಟಾರ್ ಗಣೇಶ್ ಹಾಡು ಬಿಡುಗಡೆ ಮಾಡಿ ಚಿತ್ರ ಮತ್ತು ತಂಡಕ್ಕೆ ಶುಭ ಹಾರೈಸಿದರು.
ಈ ವೇಳೆ ಮಾತಿಗಿಳಿದ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ನಿರ್ಮಾಪಕ ರಮೇಶ್ ಅವರು ಸಿನಿಮಾ ಸೋತರೂ ಪರವಾಗಿಲ್ಲ. ನಮ್ಮಿಬ್ಬರ ಸಂಭಂದ ಚೆನ್ನಾಗಿರಬೇಕು ಎಂದರು. ಇದರಿಂದ ನನ್ನ ಮೇಲಿನ ಅರ್ಧ ಭಾಗದ ಜವಾಬ್ದಾರಿ ಕಡಿಮೆಯಾಗಿದೆ. ನಾಯಕಿಯರಿಬ್ಬರೂ ಚೆನ್ನಾಗಿ ಮಾಡಿದ್ದಾರೆ. ನಟ ವಿನಯ್ ರಾಜ್ ಕುಮಾರ್ ಸರಳ ವ್ಯಕ್ತಿ. ಅವರ ಸಹಕಾರ ಮರೆಯಲಾಗದ್ದು ಅವಕಾಶ ನೀಡಿದರೆ ಅವರೊಂದಿಗೆ ಮತ್ತೆ ಮತ್ತೆ ಸಿನಿಮಾ ಮಾಡಲಾಗುವುದು . ವಿನಯ್ ಸಾರ್ ನಡತೆ ನನ್ನ ಫನ್ನಿ ರೀತಿ ಇದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರು.
ನಟ ವಿನಯ್ ರಾಜ್ ಕುಮಾರ್ ಮಾತನಾಡಿ, ಚಿಕ್ಕ ಪೇಟೆಯಲ್ಲಿ ಸೀರೆ ಮಾಡುವ ಕುಟುಂಬದ ಕಥೆಯನ್ನು ನಿರ್ದೇಶಕರು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ಅತಿಶಯ್ ಎನ್ನುವ ಪಾತ್ರ ಎನ್ನುವ ಪಾತ್ರ ಎಂದರು.
ನಟಿ ಮಲ್ಲಿಕಾ ಸಿಂಗ್, ಮಾತನಾಡಿ ಚಿತ್ರ ಚೆನ್ನಾಗಿ ಮೂಡಿ ಬಂದಿದೆ.ಕನ್ನಡದಲ್ಲಿ ಒಳ್ಳೆಯ ಪಾತ್ರಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದರೆ ಮತ್ತೊಬ್ಬ ಮತ್ತೊಬ್ವ ನಟಿ ಸಾದಿಷ್ಟ. ಪತ್ರಕರ್ತೆಯ ಪಾತ್ರ ಚೆನ್ನಾಗಿ ಬಂದಿದೆ ಎಂದರು
ನಿರ್ಮಾಪಕ ಮೈಸೂರು ರಮೇಶ್ ಮಾತನಾಡಿ, 65 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ನಿರ್ದೇಶಕ ಸುನಿ ಸಿಂಪಲ್ ಅಲ್ಲ. ರಾಕ್ಷಸ ರೀತಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಸಂಗೀತ ನಿರ್ದೇಶಕ ವೀರ ಸಮರ್ಥ್ , ಸುನಿ ಜೊತೆ ಕೆಲಸ ಮಾಡುವ ಆಸೆ ಈ ಚಿತ್ರದ ಮೂಲಕ ಈಡೇರಿದೆ. ಸಾದಾರಣ ವ್ಯಕ್ತಿಯ ಜೀವನದಲ್ಲಿ ನಡೆಯುವ ಘಟನೆ ಚಿತ್ರದ ಕಥಾ ವಸ್ತು ಇರಲಿದೆ. ಚಿತ್ರದಲ್ಲಿ 8 ಹಾಡು ಮತ್ತು ಮೂರು ಬಿಟ್ ಸೇರಿದಂತೆ 11 ಹಾಡುಗಳಿವೆ. ಚಿತ್ರದಲ್ಲಿ ಕೆಲಸ ಮಾಡಿದ್ದು ನನ್ನ ಲಕ್ ಎಂದು ಮಾಹಿತಿ ಹಂಚಿಕೊಂಡರು.
ನಟ ಗಣೇಶ್ ಮಾತನಾಡಿ, ನಿರ್ದೇಶಕ ಸುನಿ ಅವರ ಬರವಣಿಗೆಗೆ ನಾನು ದೊಡ್ಡ ಅಭಿಮಾನಿ ನಾನು. ಚಿತ್ರಕ್ಕೆ ಒಳ್ಳೆಯದಾಗಲಿ ಎಂದರು.
ಡಾ. ರಾಜ್ ಕುಮಾರ್ ಅವರ ಕುಟುಂಬದ ಕುಡಿ ವಿನಿಯ್ ರಾಜ್ ಕುಮಾರ್ ಮತ್ತು ಅವರ ತಂಡಕ್ಕೆ ಒಳಿತಾಗಬೇಕು. ಸಿಂಪಲ್ ಎನ್ನುವ ಪದ ಸುನಿಗಿಂತ ವಿನಯ್ ರಾಜ್ ಕುಮಾರ್ ಅವರಿಗೆ ಹೊಂದಿಕೆ ಆಗುತ್ತೆ. ಇದೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು