“ಕಬ್ಜ” ಚಿತ್ರದ ಯಶಸ್ಸು
ಭಾವುಕರಾದ ಆರ್.ಚಂದ್ರು
“ಕಬ್ಜ” ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ. ಆರ್. ಚಂದ್ರು ಮುಖದಲ್ಲಿ ನಗುವಿನ ಮಂದಹಾಸ ಮನೆ ಮಾಡಿದೆ. ಚಿತ್ರ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಚಿತ್ರದ ಯಶಸ್ಸಿನ ಬಗ್ಗೆ ಹೇಳಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಆರ್.ಚಂದ್ರು ಭಾವುಕರಾದವರು. ಕಣ್ಣಲ್ಲಿ ತಮಗೆ ಅರಿವಿಲ್ಲದೆ ನೀರು ಜಿನುಗಿ ಬಂತು. ಒಂದು ಕ್ಷಣ ಮಾತು ಬಾರದೆ ಮೌನವಾಗಿಬಿಟ್ಟರು.
ಒಮ್ಮೆ ಸುದಾರಿಸಿಕೊಂಡು ಮಾತು ಮುಂದುವರಿಸಿದ ಚಂದ್ರು, ಕಬ್ಜ ಚಿತ್ರ ಮಾಡಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ.. ಎರಡು ಕೊರೋನಾ ಲಾಕ್ ಡೌನ್, ಮಳೆಯಿಂದ ದೊಡ್ಡ ಮಟ್ಟದ ಸೆಟ್ ಮಳೆಗೆ ಕುಸಿದುಬಿದ್ದಾಗ ನಿರ್ಮಾಪಕನಾಗಿ ಹತಾಶನಾಗಿದ್ದೆ. ಚಿತ್ರೀಕರಣದ ಮೂರು ವರ್ಷದ ಅವಧಿಯಲ್ಲಿ ಡಸ್ಟ್‍ನಲ್ಲಿ ಉಸಿರಾಡಿದ್ದೇವೆ. ಇಂತಹ ಸಮಯದಲ್ಲಿ ಮುಂದೇನು ಮಾಡುವುದು ಎನ್ನುವ ಆತಂಕ ಮನೆ ಮಾಡಿತ್ತು. ಹಲವು ಬಾರಿ ಎದುರಿಸಿದ ಪಟ್ಟ ಕಷ್ಟ ಒಂದಲ್ಲ ಎರಡಲ್ಲ, ಆದರೂ ಛಲ ಬಿಡದೆ ಚಿತ್ರ ಮಾಡಿದೆ.ಯಶಸ್ಸು ಸಿಕ್ಕಿದೆ.
ಇದರ ಹಿಂದೆ ನೋವಿದೆ. ನನಗೆ ನೋವಾದಾಗ ಕಾರಿನ ಚಾಲಕನನ್ನು ಕೆಳಗೆ ಇಳಿಸಿ ಅತ್ತಿದ್ದೇನೆ. ನನ್ನ ಕಷ್ಟ ನನಗೆ ಮಾತ್ರ ಗೊತ್ತು. ಯಾರ ಬಳಿಯೂ ಹೇಳಿಕೊಳ್ಳುವ ಹಾಗಿರಲಿಲ್ಲ. ಇಂದು ಅಸಾಧ್ಯವಾದುದನ್ನು ಮಾಡಿ ತೋರಿಸಿದ್ದೇನೆ ಎನ್ನುವ ಗೆಲುವು ಒಂದೆಡೆಯಾದರೆ ಸಾಧಿಸಿದ ಹುಮ್ಮಸ್ಸು ಧನ್ಯತಾ ಭಾವ ಚಂದ್ರು ಕಣ್ಣಲ್ಲಿ ಜಿನುಗುತ್ತಿದ್ದ ಹನಿಗಳ ನಡುವೆಯೂ ಎದ್ದು ಕಾಣುತ್ತಿತ್ತು.
ಪತ್ರಿಕಾ ಗೋಷ್ಠಿಯಲ್ಲಿ ಚಂದ್ರು ಅವರು ಪಟ್ಟ ಕಷ್ಟ, ಗೆಲುವಿನ ಸಂಭ್ರಮ, ಕಬ್ಜ ಈ ಮಟ್ಟಕ್ಕೆ ಯಶಸ್ಸು ಕಾಣಲು ಮಂಜುನಾಥ್ ಮೌರ್ಯ ಸೇರಿದಂತೆ ಇಡೀ ನಿರ್ದೇಶಕ ತಂಡ ಬೆನ್ನೆಲುಬಾಗಿ ನಿಂತ ಕ್ಷಣಗಳನ್ನು ನೆನೆಪು ಮಾಡಿಕೊಂಡು ಕೃತಜ್ಞತೆ ಅರ್ಪಿಸಿದರು.
• ಕನ್ನಡದ ಡೈರೆಕ್ಟರಾ? ವದ್ದಮ್ಮಾ…..ಕಥೆ ಕೇಳಲು ಹಿಂದೇಟು
“ಕೃಷ್ಣಮ್ಮ ಕಲಿಪಿಂದಿ” ಚಿತ್ರ ತೆಲುಗಿನಲ್ಲಿ ಮಾಡಿದಾಗ ಅದ್ದೂರಿಯಾಗಿ ಮಾಡೇಕು ಎಂದು ಕನಸು ಕಟ್ಟಿಕೊಂಡಿದ್ದೆ. ಆದರೆ 3 ಕೋಟಿಯ ಕಡಿಮೆ ಬಜೆಟ್‍ನಲ್ಲಿ ಚಿತ್ರವನ್ನು ನಿರ್ದೇಶನ ಮಾಡುವ ಅವಕಾಶ ಮಾತ್ರ ಸಿಕ್ಕಿತ್ತು. ಆದರೂ. ರಾಜಸ್ತಾನ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಜೊತೆಗೆ ನಿರ್ದೇಶನಕ್ಕೆ ಪ್ರಶಸ್ತಿಯೂ ಬಂತು.
ಅಲ್ಲು ಅರ್ಜುನ್‍ಗೆ ಚಿತ್ರ ಮಾಡಬೇಕು ಎಂದು ಬಯಸಿದ್ದೆ. ಕಥೆ ಹೇಳಲು ಮುಂದಾದಾಗ ಕನ್ನಡದ ಡೈರೆಕ್ಟರಾ? ವದ್ದಮ್ಮಾ,,, ಎನ್ನುವ ರೀತಿ ನೋಡಿದರೆ ಅದೇ ಹಠದಿಂದ ಪ್ಯಾನ್ ಇಂಡಿಯಾ ಚಿತ್ರ ಮಾಡಬೇಕು ಎಂದು ನಿರ್ದರಿಸಿದೆ. ಆಗ ನನಗೆ ದೇವರಾಗಿ ಬಂದು ಸಾಥ್ ನೀಡಿದವರು ನಟ ಉಪೇಂದ್ರ. ಜೊತೆಗೆ ನಿರ್ಮಾಣದ ಪ್ರತಿಯೊಂದು ವಿಷಯದಲ್ಲಿ ಸಲಹೆಗಾರನಾಗಿ, ಆಪ್ತನಾಗಿ, ಸಹೋದರನಾಗಿ ಬೆನ್ನೆಲುಬಾಗಿ ನಿಂತವರು ಕೆ.ಪಿ ಶ್ರೀಕಾಂತ್ ನಿಜಕ್ಕೂ ಎಷ್ಟು ಧನ್ಯವಾದ ಹೇಳಿದರೂ ಸಾಲದು.
ಕನ್ನಡದ ಡೈರೆಕ್ಟರಾ ಎಂದು ಅಸಡ್ಡೆಯಿಂದ ಮಾತನಾಡಿದ್ದ ತೆಲುಗು ಮಂದಿಗೆ ಕಬ್ಜ ಚಿತ್ರವನ್ನು ತೆಲುಗಿನಲ್ಲಿ 600ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿದ್ದೇವೆ. ಸಿನಿಮಾ ಹಾಕಿ ಆ ಮೇಲೆ ದುಡ್ಡು ಕೊಡಿ ಎನ್ನಲಿಲ್ಲ. ಅವರೇ ದುಡ್ಡುಕೊಟ್ಟು ಸಿನಿಮಾ ಖರೀದಿ ಮಾಡಿದ್ದಾರೆ. ಇದು ಕನ್ನಡದ ನಿರ್ದೇಶಕರ ತಾಕತ್ತು ಎಂದರು ಆರ್. ಚಂದ್ರು.
• ಹಿಂದಿಯಲ್ಲಿ 1800 ಚಿತ್ರಮಂದಿರಗಳಲ್ಲಿ ಬಿಡುಗಡೆ
ಕಬ್ಜ ಚಿತ್ರವನ್ನು ಹಿಂದಿ ಭಾಷೆಯಲ್ಲಿ ಬರೋಬ್ಬರಿ 1800 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದೇವೆ. ಸಿನಿಮಾ ನೋಡಿದ ವಿತರಕರು ಚಿತ್ರ ಬಿಡುಗಡೆ ಮಾಡಿದ್ದಾರೆ. ಸಾಧನೆ ಮಾಡಲು ಪ್ರಯತ್ನ ಪಟ್ಟರೆ ಯಾವುದು ಕಷ್ಟವಲ್ಲ. ಅದಕ್ಕೆ ಕಬ್ಜ ಚಿತ್ರವೇ ಸಾಕ್ಷಿ.
• ಮಾರ್ಟಿನ್ ಬರ್ತಾ ಇದೆ ಅದಕ್ಕೂ ಯಶಸ್ಸು ಸಿಗಲಿ
ಕನ್ನಡ ಡೈರೆಕ್ಟರಾ ಎಂದು ಅಸಡ್ಡೆಯಿಂದ ನೋಡುವ ತೆಲುಗು ಮಂದಿಗೆ ಕಬ್ಜ ಚಿತ್ರದ ಮೂಲಕ ಉತ್ತರ ನೀಡಿದ್ದೇನೆ. ನನ್ನ ಸಿನಿಮಾ ಮಾತ್ರವಲ್ಲ. ಮುಂದೆ ದೃವ ಸರ್ಜಾ ಅವರ ಮಾರ್ಟಿನ್ ಕೂಡ ಬರುತ್ತದೆ. ಆ ಚಿತ್ರ ಗೆಲ್ಲಲಿ. ಕನ್ನಡದ ಚಿತ್ರರಂಗದ ನಿರ್ದೇಶಕ ತಾಕತ್ತು ಇಡೀ ಭಾರತೀಯ ಚಿತ್ರರಂಗಕ್ಕೆ ಗೊತ್ತಾಗಬೇಕು ಎಂದರು ಆರ್. ಚಂದ್ರು.
• ವಿವಿಧ ದೇಶಗಳಲ್ಲಿ ಯಶಸ್ವಿ ಪ್ರದರ್ಶನ
ಆಸ್ಟ್ರೇಲಿಯಾಮ ಮಸ್ಕಟ್, ಸೌಧಿ ಅರೇಬಿಯಾ ಸೇರಿದಂತೆ ಜಗತ್ತಿನ 50ಕ್ಕೂ ಅಧಿಕ ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು ಎಲ್ಲೆಡೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಇನ್ನೂ ಕೆಲವು ಮಂದಿ ಚಿತ್ರ ಬಿಡುಗಡೆಗೆ ಮುಂದೆ ಬಂದಿದ್ದಾರೆ. ಕಬ್ಜದ ತಾಕತ್ತು ಇದು ಎಂದರು
• ಸೆಟ್‍ಗೆ ಪುನೀತ್ ರಾಜ್ ಕುಮಾರ್ ಬಂದಾಗಲೇ ಗೆದ್ದಿದ್ದೆ.
ಕಬ್ಜ ಚಿತ್ರದ ಚಿತ್ರೀಕರಣದ ಸೆಟ್‍ಗೆ ಬಂದಿದ್ದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಏನು ಚಂದ್ರು ಹಾಲಿವುಡ್ ರೇಂಜ್‍ಗೆ ಸಿನಿಮಾ ತೆಗೆಯುತ್ತಿದ್ದೀಯಾ ಎಂದಾಗಲೇ ನಾನು ಅಂದೇ ಗೆದ್ದಿದೆ. ಇದರ ಜೊತೆಗೆ
ಒಟಿಟಿ,ಸ್ಯಾಟಲೈಟ್ ಹಕ್ಕು ಮಾರಾಟವಾದಾಗಲೇಇನ್ನಷ್ಟು ಗೆದ್ದಿದ್ದೆ. ಆಗಲೇ ಸಕ್ಸಸ್ ಆಸಚರಿಸಬೇಕಾಗಿತ್ತು. ಹಾಕಿದ ಹಣ ಚಿತ್ರ ಬಿಡುಗಡೆಗೆ ಮುನ್ನವೇ ತೆಗೆದಯಕೊಂಡಿದ್ದೇನೆ.
• ಗೆಲುವು ಉಪೇಂದ್ರ ಅವರಿಗೆ ಸಲ್ಲಬೇಕು
ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತೇನೆ ಎಂದಾಗ ಹಿಂದು ಮುಂದು ನೋಡದೆ ಸಿನಿಮಾ ಮಾಡು ಎಂದು ಬೆನ್ನಿಗೆ ನಿಂತ ಉಪೇಂದ್ರ ಸರ್ ಗೆ ಚಿತ್ರದ ಗೆಲುವು ಸಲ್ಲಬೇಕು. ಚಿತ್ರದ ಸನ್ನಿವೇಶಗಳನ್ನು ತೋರಿಸಿ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಬೇಕು ಎಂದಾಗ ಒಕೆ ಎಂದ ಸುದೀಪ್ ಸಾರ್ ಅವರಿಗೆ, ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಬೇಕು ಎಂದಾಗ ಕೆ.ಪಿ ಶ್ರೀಕಾಂತ್ ಸಾರ್ ಶಿವಣ್ಣ ಅವರ ಜೊತೆ ಮಾತನಾಡಿ ಅವರು ಚಿತ್ರದಲ್ಲಿ ನಟಿಸಿರು. ಈ ಮೂರು ಮಂದಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕೋ ತಿಳಿಯುತ್ತಿಲ್ಲ ಎಂದರು ಆರ್. ಚಂದ್ರು.
• ಕಬ್ಜ ಯಶಸ್ಸು ಇಡೀ ತಂಡದ ಗೆಲುವು
ಕಬ್ಜ ಚಿತ್ರ ಯಶಸ್ಸು ಕಂಡಿದೆ. ಅದರ ಸಂಪೂರ್ಣ ಶ್ರೇಯ ನಿರ್ದೇಶಕ ತಂಡದ ಮಂಜುನಾಥ್ ಮೌರ್ಯ, ಸೇರಿದಂತೆ ಇಡೀ ತಂಡಕ್ಕೆ ಸಲ್ಲಬೇಕು. ಮಂಜು, ಊಟ ತಿಂಡಿ, ನಿದ್ದೆ ಇಲ್ಲದೆ ಹತ್ತಾರು ದಿನ ಚಿತ್ರಕ್ಕಾಗಿ ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಅವರ ಪರಿಶ್ರಮ ಚಿತ್ರ ಅಂದುಕೊಂಡ ಸಮಯದಕ್ಕೆ ತೆರೆಗೆ ತರಲು ಸಾಧ್ಯವಾಯಿತು. ಅದೇ ರೀತಿ ಉಳಿದ ನಿರ್ದೇಶಕ ತಂಡ ಕೂಡ ಸಹಕಾರ ನೀಡಿತು. ಕಬ್ಜ ಚಿತ್ರದ ಯಶಸ್ಸು ಇಡೀ ತಂಡ ಯಶಸ್ಸು ಎಂದು ಹೇಳುವ ಮೂಲಕ ನಿರ್ಮಾಪಕರೂ ಆಗಿರುವ ನಿರ್ದೇಶಕ ಆರ್. ಚಂದ್ರು ತಂಡಕ್ಕೆ ಗೆಲುವಿನ ಶ್ರೇಯ ನೀಡಿ, ದೊಡ್ಡತನ ಮೆರೆದರು.
• ಯಾರು ಏನೇ ಅಂದುಕೊಳ್ಳಲಿ ಕೆಜಿಎಫ್ ನನಗೆ ಮಾದರಿ
ಕಥೆ ಹೇಳಲು ಅವಕಾಶ ನೀಡದ ತೆಲುಗು ಮಂದಿ ಮುಂದೆ ದೊಡ್ಡ ಹಿಟ್ ಸಿನಿಮಾ ನೀಡಿದ ಕೆಜಿಎಫ್ ನನಗೆ ಮಾದರಿ. ನಿಮ್ಮ ಸಿನಿಮಾ ವೇಳೆ ಬೇರೊಂದು ಸಿನಿಮಾ ಯಾಕೆ ಹೇಳ್ತೀರಾ ಎಂದು ಹಲವು ಕೇಳಿದುಂಟು. ಕೆಜಿಎಫ್ ಕನ್ನಡದ ತಾಕತ್ತನ್ನು ತೋರಿಸಿದ ಚಿತ್ರ ಆದಾದ ನಂತರ ಕಬ್ಜ ಆ ಕೆಲಸ ಮಾಡಿದೆ ಇದು ಹೆಮ್ಮೆಯ ವಿಷಯ ಎಂದರು. ಆರ್. ಚಂದ್ರು.
• ಜೀನಿಯಸ್ ಸಕ್ಸಸ್ : ಉಪೇಂದ್ರ
ನಿರ್ದೇಶಕರೂ ಆಗಿರುವ ನಿರ್ಮಾಪಕ ಆರ್.ಚಂದ್ರು ಮಾತನಾಡುವಾಗ ಭಾವೋದ್ವೇಗಕ್ಕೆ ಒಳಗಾಗಿದ್ದನ್ನು ಕಂಡ ನಟ ಉಪೇಂದ್ರ ವೇದಿಕೆ ಮೇಲೆ ಏರಿ ಚಂದ್ರು ಅವರನ್ನು ಸಮಾಧಾನ ಮಾಡುವ ಯತ್ನ ನಡೆಸಿದರು.
ಚಂದ್ರು ಭಾವ ಪರವಶವಾಗಿದ್ದಾರೆ. ಇತ್ತೀಚೆಗೆ ನಾವು ಸಕ್ಸಸ್ ಕೇಳುತ್ತಿದ್ದೇವೆ. ಇದು ಜೀನಿಯಸ್ ಸಕ್ಸಸ್. ಮೊದಲ ಚಂದ್ರು ನಮ್ಮ ಬಳಿ ಬಂದಾಗ ಕೈಕಟ್ಟಿ ನಿಂತಿರುತ್ತಾರೆ.ಆ ನಂತರ ಅವರ ಬಳಿ ಕೈಕಟ್ಟಿ ನಿಲ್ಲುವಂತೆ ಮಾಡುವ ಚಾಕಚಕತ್ಯತೆ ಮತ್ತು ಮೋಡಿ ಅವರಲ್ಲಿದೆ. ಅದು ಅವರ ದೊಡ್ಡ ಗುಣ ಎಂದು ಚಂದ್ರು ಮುಖದಲ್ಲಿ ನಗು ತರಿಸಿದರು ಉಪೇಂದ್ರ.
ಕಬ್ಜದಿಂದ ಸಾಕಷ್ಟು ದುಡ್ಡು ಮಾಡಿದ್ದೇನೆ ಎಂದು ಚಂದ್ರ ಹೇಳಿದ್ದಾರೆ. ಇದೀಗ ಕಬ್ಜ -2 ಮಾಡುವ ಜವಾಬ್ದಾರಿ ಚಂದ್ರು ಅವರ ಮೇಲಿದೆ. ಈಗ ಗಳಿಸಿರುವ ಹಣಕ್ಕೆ ಎರಡು ಪಟ್ಟು ಭಾಗ-2ರಕ್ಕೆ ಹಾಕಿ ಚಿತ್ರ ಮಾಡಲಿ ಮತ್ತಷ್ಟು ಮಂದಿಗೆ ಕೆಲಸ ಸಿಗಲಿ.ಚಂದ್ರು ಮತ್ತು ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು ನಟ ಉಪೇಂದ್ರ.
• ಚಂದ್ರು ರಕ್ತ ಮತ್ತು ಬೆವರು ಸುರಿಸಿದ್ದಾರೆ: ಕೆ.ಪಿ ಶ್ರೀಕಾಂತ್
ಕಬ್ಜ ಚಿತ್ರಕ್ಕಾಗಿ ಆರ್.ಚಂದ್ರು ರಕ್ತ ಮತ್ತು ಬೆವರು ಸುರಿಸಿದ್ದಾರೆ. ಅವರ ಬೆವರಿನ ಫಲ ಕಬ್ಜ ಚಿತ್ರದ ಯಶಸ್ಸು. ಅದಕ್ಕೆ ಈಗ ಬೆಲೆ ಸಿಕ್ಕಿದೆ. ಸುಮ್ಮನೆ ಯಾವುದೇ ಲೆಕ್ಕ ಹೇಳುವುದಿಲ್ಲ. ಮುಂದಿನ ಶುಕ್ರವಾರ ಪಕ್ಕಾ ಲೆಕ್ಕ ತಿಳಿಸುತ್ತೇವೆ. ಚಂದ್ರು ಜೊತೆ ಮಂಜು ಬೆನ್ನೆಲುಬಾಗಿ ಕೆಲಸ ಮಾಡಿದ್ದಾರೆ. ರಾತ್ರಿ ಹಗಲು ನಿದ್ದೆ ಮಾದೆ ಶ್ರಮ ಹಾಕಿದ್ದಾರೆ. ಕೋರೊನಾ ಸಂಕಷ್ಟದ ಕಾಲದಲ್ಲಿ ಚಿತ್ರದ ಮಾರುಕಟ್ಟೆ ಬಗ್ಗೆ ಮಾತನಾಡಲು ಆರ್.ಚಂದ್ರು ಮತ್ತು ನಾವು ಮುಂಬೈಗೆ ಹೋಗಿದ್ದವು ಎಂದರು ಕೆ.ಪಿ ಶ್ರೀಕಾಂತ್.
• ತಲೆ ಗುಂಡು ಹೊಡಿಸಿ ನಟಿಸಿದ್ದೇನೆ: ನೀನಾಸಂ ಅಶ್ವಥ್
ನಟ ನೀನಾಸಂ ಅಶ್ವಥ್ ಮಾತನಾಡಿ ಉಪೇಂದ್ರ ಜೊತೆ ಕೆಲಸ ಮಾಡುವ ಬಿಕ್ಷೆಯನ್ನು ಚಂದ್ರು ನೀಡಿದ್ದಾರೆ. ಪಾತ್ರಕ್ಕಾಗಿ ತಲೆ ಬೋಳಿಸಿಕೊಳ್ಳಬೇಕು ಎಂದರು. ಏಳೆಂಟು ಸಿನಿಮಾ ಇವೆ ಏನು ಮಾಡೋದು ಅಂದಾಗ ಮುಂಬೈನಿಂದ 75 ಸಾವಿರ ಕೊಟ್ಟು ವಿಗ್ ಮಾಡಿಸುವುದಾಗಿ ಹೇಳಿದರು. ಇದುವರೆಗೂ ನನ್ನ ಚಿತ್ರಗಳಿಗೆ ನಾನೇ ಹಣ ಖರ್ಚು ಮಾಡುತ್ತಿದ್ದೆ. ಈಗ ಕಬ್ಜ ಚಿತ್ರದಲ್ಲಿ ನನಗಾಗಿ ಖರ್ಚು ಮಾಡುತ್ತೇನೆ ಎಂದಾಗ ಚಂದ್ರು ಅವರ ಸಮರ್ಪಣಾ ಭಾವ ನೋಡಿ ಇಲ್ಲ. ಸಾರ್ ಬೋಡಾ ಮಾಡಿಸಿಕೊಳ್ಳುತ್ತೇನೆ ಎಂದು ತಲೆ ಗುಂಡು ಹೊಡೆಸಿಕೊಂಡಿದ್ದೇನೆ ಎಂದರು ಹಿರಿಯ ಕಲಾವಿದ ನೀನಾಸಂ ಅಶ್ವಥ್.
ನಾನು ಹಳ್ಳಿ ಹುಡುಗ. ಚಂದ್ರು ಕೂಡ ಹಳ್ಳಿ ಹುಡುಗ, ಅವರ ಸಾಧನೆ ನೋಡಿ ಹೆಮ್ಮೆ ಆಗಿದೆ . ಅವರ ಜೊತೆ ಮಾತನಾಡುವಾಗ ಕಣ್ಣಲ್ಲಿ ನೀರು ಬಂತು ಎಂದರು ನೀನಾಸಂ ಅಶ್ವಥ್.
ಕಬ್ಜ ಚಿತ್ರದಲ್ಲಿ ಅದ್ಬುತ ಪಾತ್ರ ಸೃಷ್ಠಿ ಮಾಡಿದ್ದಾರೆ. ಎರಡನೇ ಭಾಗದಲ್ಲಿ ನನ್ನ ಪಾತ್ರವೂ ಬರಬಹುದು ಕಾದು ನೋಡೋಣ. ಅದ್ಬುತ ಚಿತ್ರ ನೀಡಿದಕ್ಕಾಗಿ ಚಂದ್ರುಗೆ ಅಭಿನಂದನೆ ಎಂದರು.
• ಕಬ್ಜ -2 ನಲ್ಲಿ ಹುಡುಗಿ ಪಾತ್ರ ಕೊಡಿ;ಶೋಭಾ ರಾಘವೇಂದ್ರ
ಹಿರಿಯ ಕಲಾವಿದೆ ಶೋಭಾ ರಾಘವೇಂದ್ರ, ಅವರು ಕಬ್ಜ-2 ಚಿತ್ರದಲ್ಲಿ ಹುಡುಗಿಯ ಪಾತ್ರ ಕೊಡಿ, ಕಬ್ಜ-3 ರಲ್ಲಿ ಬೇಕಾದರೆ ಅಜ್ಜಿ ಪಾತ್ರ ಕೊಡಿ ಎಂದು ನಿರ್ದೇಶಕ ಚಂದ್ರು ಅವರಿಗೆ ಮನವಿ ಮಾಡಿದರು. ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದೇ ಒಂದು ಪುಣ್ಯ. ಚಂದ್ರು ಗೆಲ್ಲುಬೇಕು ಎಂದು ಮೊದಲಿನಿಂದಲೂ ಬಯಸಿದ್ದೆ. ಅದೇ ರೀರಿ ಕಬ್ಜ ಚಿತ್ರ ಗೆದ್ದಿದೆ ಎಂದರು.
• ಒಳ್ಳೆಯ ಅವಕಾಶಕ್ಕೆ ಕೃತಜ್ಞತೆ: ಕಿನ್ನಾಳ್ ರಾಜ್
ಕಬ್ಜ ಚಿತ್ರದಲ್ಲಿ ನಮಾಮಿ ಗಂಗೆ ಹಾಡು ಬರೆಯಲು ಅವಕಾಶ ಮಾಡಿಕೊಟ್ಟ ನಿರ್ದೇಶಕ ಚಂದ್ರು ಅವರಿಗೆ ಋಣಿ. ಚಿತ್ರ ಗೆದ್ದಿರುವುದಕ್ಕೆ ಇಡೀ ತಂಡಕ್ಕೆ ಅಭಿನಂದನೆ ಎಂದರು ಹಾಡು ಬರೆದಿರುವ ಕಿನ್ನಾಳ್ ರಾಜ್.
ಚಿತ್ರದಲ್ಲಿ ನಟಿಸಿರುವ ಬಿ.ಸುರೇಶ್, ಕಾಮರಾಜ್, ಕೋಟೆ ಪ್ರಭಾಕರ್ ಸೇರಿದಂತೆ ತಂಡ ಗೆಲುವಿನ ಖುಷಿ ಹಂಚಿಕೊಂಡಿತು. ವಿತರಕ ಮೋಹನ್ ಎಲ್ಲೆಡೆ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಡುತ್ತಿದೆ ಎಂದು ಖುಷಿ ಹಂಚಿಕೊಂಡರು. ಸಾಹಸ ನಿರ್ದೇಶಖ ಚೇತನ್ ಡಿಸೋಜ ಖುಷಿ ಹಂಚಿಕೊಂಡರು.
ಇದೇ ವೇಳೆ ಕಬ್ಜ ಚಿತ್ರದ ಯಶಸ್ಸಿಗಾಗಿ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿಕೊಂಡಿತು.