ಕನ್ನಡಕ್ಕೊಬ್ಬ “ಸಮರ್ಥ” ನಟನಾಗಬಲ್ಲ ಸಮರ್ಜಿತ್ : “ಗೌರಿ” ಮನಮಿಡಿಯುವ ಕಥನ
ಚಿತ್ರ: ಗೌರಿ
ನಿರ್ದೇಶನ, ನಿರ್ಮಾಣ : ಇಂದ್ರಜಿತ್ ಲಂಕೇಶ್
ತಾರಾಗಣ: ಸಮರ್ಜಿತ್ ಲಂಕೇಶ್, ಸಾನ್ಯಾ ಅಯ್ಯರ್, ಸಿಹಿಕಹಿ ಚಂದ್ರು, ಸಂಪತ್ ಮೈತ್ರೇಯಾ, ಮಾಲತಿ ,ಸುಚೇಂದ್ರ ಪ್ರಸಾದ್,ನೀನಾಸಂ ಅಶ್ವಥ್, ಚಂದುಗೌಡ, ಪ್ರಿಯಾಂಕ ಉಪೇಂದ್ರ, ಅಕುಲ್ ಬಾಲಾಜಿ,ಮಂಜು ಪಾವಗಡ ಮತ್ತಿತರರು
ರೇಟಿಂಗ್ : *** 3.5 / 5
ಕನ್ನಡಕ್ಕೆ ಹೊಸ ಹೊಸ ಪ್ರತಿಭೆಗಳ ಆಗಮನವಾಗುತ್ತಿದೆ. ಅದರಲ್ಲಿ ಹೊಸ ಸೇರ್ಪಡೆ ಸಮರ್ಜಿತ್ ಲಂಕೇಶ್. ಪಿ. ಲಂಕೇಶ್ ಕುಟುಂಬದ ಕುಡಿ. ಕನ್ನಡ ಚಿತ್ರರಂಗದಲ್ಲಿ ಸ್ಟೈಲಿಶ್ ನಿರ್ದೇಶಕ ಎನ್ನುವ ಶ್ರೇಯ ಪಡೆದಿರುವ ಇಂದ್ರಜಿತ್ ಲಂಕೇಶ್ ಪುತ್ರ. ಇದೀಗ “ಗೌರಿ” ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಠಿಗೆ ಮುಂದಾಗಿರುವ ನಟ ಎನ್ನುವ ಭರವಸೆಯನ್ನು ಮೊದಲ ಚಿತ್ರದಲ್ಲಿ ಮೂಡಿಸಿದಾತ.
ಈ ವಾರ ತೆರೆಗೆ ಬಂದಿರುವ “ಗೌರಿ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಸಮರ್ಥ ನಾಯಕನಾಗುವ ಎಲ್ಲಾ ಲಕ್ಷಣ ಮತ್ತು ಭರವಸೆ ಮೂಡಿಸಿದ್ದಾರೆ ಸಮರ್ಜಿತ್ ಲಂಕೇಶ್. ಮಗನ ಚಿತ್ರ ಎನ್ನುವ ಕಾರಣಕ್ಕೆ ಇಂದ್ರಜಿತ್ ಲಂಕೇಶ್ ವಿಶೇಷ ಗಮನ ಹರಿಸಿರುವುದು ಕೂಡ ಎದ್ದು ಕಾಣುತ್ತದೆ.
ಮೊದಲ ಚಿತ್ರದಲ್ಲಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸಮರ್ಜಿತ್ ಗಮನ ಸೆಳೆದಿದ್ಧಾರೆ. ಒಂದರಲ್ಲಿ ಕಿವುಡ ಮತ್ತೊಂದು ಪಾತ್ರದಲ್ಲಿ ಮಾತು ಬಾರದ ಮೂಕ ಎರಡೂ ಪಾತ್ರವೂ ಭಿನ್ನ ಮತ್ತು ನೋಡಿಗರನ್ನು ಹಿಡಿದಿಡುವ ಕಲೆಯ ಕಸುಬುಗಾರಿಕೆಗೆ ಕೈಗನ್ನಡಿ ಹಿಡಿದಿದೆ.
ಜೋಗಿ ಸಿದ್ದಯ್ಯ- (ಸಂಪತ್ ಮೈತ್ರೈಯಾ), ತಲೆ ತಲಾಂತರದಿಂದ ಬಳುವಳಿಯಾಗಿ ಬಂದ ಜೋಗಿ ಹಾಡುಗಾರಿಕೆ ಮೂಲಕ ತಮ್ಮ ಸಂಸ್ಕøತಿ, ಸಂಪ್ರದಾಯ, ಪರಂಪರೆಯನ್ನು ಉಳಿಕೊಂಡು ಬಂದವ. ತನ್ನ ಮಗ ಗೌರಿ (ಸಮರ್ಜಿತ್ ಲಂಕೇಶ್) ಕೂಡ ತನ್ನ ಹಾದಿಯಲ್ಲಿ ನಡೆಯಬೇಕು ಎನ್ನುವ ಹಂಬಲ ಮತ್ತು ಕನಸು.ಮಗನಿಗೂ ಜೋಳಿಗೆ ಹಿಡಿಯುವ ಬದಲು ಮೈಕ್ ಹಿಡಿದು ಹಾಡಿ ದೊಡ್ಡ ಹೆಸರು ಮಾಡುವ ಗುರಿ. ಇದು ಅಪ್ಪನಿಗೆ ಸುತರಾಂ ಇಷ್ಟವಿಲ್ಲ. ಅದೇ ಕಾರಣಕ್ಕೆ ಅಪ್ಪನ ಮೂದಲಿಕೆ.
ಅಮ್ಮಕೂಡ ಅರ್ದಂಬರ್ದ ಕಿವುಡಿ, ತಾಯಿಯಿಂದ ಬಂದ ಬಳುವಳಿ, ಇದೇ ಕಾರಣಕ್ಕೆ ಅಪ್ಪನ ತಿರಸ್ಕಾರದ ನಡುವೆಯೂ ಮಗನ ಕನಸಿಗೆ ನೀರೆರೆದು ಪೋಷಿಸುತ್ತಾಳೆ. ಈ ನಡುವೆ ಸಮಂತ (ಸಾನ್ಯಾ ಅಯ್ಯರ್)ಗೆ ರಾಜ್ (ಸಮರ್ಜಿತ್ ಲಂಕೇಶ್) ಎಂದರೆ ಎಲ್ಲಿಲ್ಲದ ಪ್ರೀತಿ ಆತನನ್ನು ಇಂಡಿಯನ್ ಸೂಪರ್ ಸ್ಟಾರ್ ಸ್ಪರ್ಧೆಯಲ್ಲಿ ವಿಜೇತರನ್ನಾಗಿ ನೋಡುವ ಹಂಬಲ, ಅನಿರೀಕ್ಷಿತ ಅವಘಡದಲ್ಲಿ ಧ್ವನಿಪೆಟ್ಟಿಗೆ ಕಳೆದುಕೊಂಡು ವಿಚಲಿತರಾಗುತ್ತಾನೆ. ಇಂತಹ ಸಮಯದಲ್ಲಿ ವಿಕಲಚೇತನರ ಸಂಗೀತ ಬ್ಯಾಂಡ್ ಕಟ್ಟಿ ಸಾಧನೆ ಮಾಡುವ ಹಂಬಲ. ಆಗ ಸಿಕ್ಕವನೇ ಗೌರಿ.
ಸಮಂತ, ಅಂದುಕೊಂಡದನ್ನು ಸಾಧಿಸುತ್ತಾಳಾ, ಇತ್ತ ಮೈಕ್ ಹಿಡಿದು ದೊಡ್ಡ ಸಾಧನೆ ಮಾಡಬೇಕು ಅಂದುಕೊಂಡ ಗೌರಿ ಅದರಲ್ಲಿ ಯಶಸ್ವಿಯಾಗ್ತಾನಾ ಇಲ್ಲ, ಏನೆಲ್ಲಾ ಆಗಲಿದೆ ಎನ್ನುವುದು ಚಿತ್ರದ ಕಥನ ಕುತೂಹಲ.
ನಿರ್ದೇಶಕ ಇಂದ್ರಜಿಂತ್ ಲಂಕೇಶ್, ಚಿತ್ರದಲ್ಲಿ ತಂದೆ-ಮಗನ ಬಾಂಧವ್ಯ, ತಾಯಿ-ಮಗನ ವಾತ್ಯಲ್ಯ, ವಿಕಲಚೇತರಿಗಾಗಿ ಮಿಡಿಯುವ ಮನಸ್ಸು ಸೇರಿದಂತೆ ಮತ್ತಿತರ ವಿಷಯವನ್ನು ಮಂಡ್ಯ ಭಾಷೆಯಲ್ಲಿ ಈ ಮೂಲಕ ಮನಮಿಡಿಯುವ ಕಥೆಯನ್ನು ಜನರ ಮುಂದಿಟ್ಟಿದ್ದಾರೆ.
ಯುವ ನಟ ಸಮರ್ಜಿತ್ ಲಂಕೇಶ್, ಮೊದಲ ಯತ್ನದಲ್ಲಿ ಗಮನ ಸೆಳೆದಿದ್ಧಾರೆ. ಕನ್ನಡಕ್ಕೆ ಭರವಸೆ ನಟನಾಗುವ ಎಲ್ಲಾ ಲಕ್ಷಣ ತೋರಿಸಿದ್ದಾರೆ.ನಟಿ ಸಾನ್ಯಾ ಅಯ್ಯರ್ ಪರವಾಗಿಲ್ಲ.
ಚಿತ್ರದಲ್ಲಿ ಗಮನ ಸೆಳೆಯುವ ಪಾತ್ರ ಎಂದರೆ ಸಂಪತ್ ಮೈತ್ರೇಯಾ ಮತ್ತು ಮಾಲತಿ ಸುಧೀರ್, ತೆರೆಯ ಮೇಲೆ ಇದ್ದರೂ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ.
ಪ್ರತಿಭಾನ್ವಿತ ಕಲಾವಿದರು ಎನ್ನುವುದನ್ನು ಮತ್ತೊಮ್ಮೆ ಈ ಇಬ್ಬರೂ ನಿರೂಪಿಸಿದ್ದಾರೆ.
ಎಜೆ ಶೆಟ್ಟಿ, ಕೃಷ್ಣಕುಮಾರ್ ಛಾಯಾಗ್ರಹಣವಿದೆ.
ರೇಟಿಂಗ್: ಅಷ್ಟಕ್ಕಷ್ಟ -* / , ಸುಮಾರು- ** / , ಪರವಾಗಿಲ್ಲ – *** / , ಉತ್ತಮ – **** / , ಅತ್ಯುತ್ತಮ – *****