ಗಮನ ಸೆಳೆದ ನಾನು ಅದು ಮತ್ತು ಸರೋಜ ಚಿತ್ರ
ಚಿತ್ರ: ನಾನು ಅದು ಮತ್ತು ಸರೋಜಾ
ನಿರ್ದೇಶನ: ವಿನಯ್ ಪ್ರೀತಮ್
ತಾರಾಗಣ: ಲೂಸ್ ಮಾದ ಯೋಗಿ, ಅಪೂರ್ವ ಭಾರದ್ವಜ್, ದತ್ತಣ್ಣ, ಸಂದೀಪ್ ಮತ್ತಿತರರು
ರೇಟಿಂಗ್ : * 3/5 ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – * / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /
ಮೂರು ಪಾತ್ರಗಳು ಮತ್ತು ” ಅದು ” ಸುತ್ತ ನಡೆಯುವ ಕಥೆಗೆ ಮನರಂಜನೆಯ ಹೂರಣ ತುಂಬಿ ಎಲ್ಲಾ ವರ್ಗಗಳಿಗೂ ರುಚಿಸುವ ಚಿತ್ರ ” ನಾನು ಅದು ಮತ್ತು ಸರೋಜ”.
ಚಿತ್ರದಲ್ಲಿ ‘ಅದು’ ಎಂದರೇನು ಎನ್ನುವ ಮೂಲಕ ಬಿಡುಗಡೆಗೆ ಮುನ್ನ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದರು ನಿರ್ದೇಶಕರು. ಚಿತ್ರ ನೋಡಿದ ಮಂದಿ ‘ಅದು’ ಕೂಡ ಮುಖ್ಯ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದಾರೆ.
ವೇಶ್ಯೆ, ನಿರ್ಲಷ್ಯಕ್ಕೆ ಒಳಗಾದ ಯುವಕ ಮತ್ತು ಸೊಸೆಯ ಉಪಟಳದಿಂದ ಬೇಸತ್ತ ಮದುಕನ ನಡುವೆ ಸುತ್ತಾ ಸಾಗುವ ಕಥೆಗೆ ನಿರ್ದೇಶಕ ವಿನಯ್ ಪ್ರೀತಂ,ಆಸೆ,ದುರಾಸೆ ಸುತ್ತಾ ಸಾಗುವ ಸುಂದರ ಕಥನವನ್ನು ಪ್ರೇಕ್ಷಕರ ಮುಂದೆ ಕಟ್ಟಿಕೊಟ್ಟಿದ್ದಾರೆ.ಈ ಮೂಲಕ ವಿಭಿನ್ನವಾದ ಕಥಾ ಹಂದರವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ.
ನಿದ್ದೆಯ ಸಮಸ್ಯೆಯಿಂದ ಬಳಲುವ ಹುಡುಗ ಯೋಗಿ ( ಲೂಸ್ ಮಾಸ್ ಯೋಗಿ) ಸಾಯುವುದನ್ನು ತಡೆಯುವ ಪಾಂಡು ( ದತ್ತಣ್ಣ) ಗೆ ತಲೆ ಏಟು ಬಿದ್ದು ಗಾಯಗೊಳ್ಳುತ್ತಾರೆ.ಹೋಟೆಲ್ ನಲ್ಲಿ ಪ್ರೇಮಿಗಳ ಜೊತೆ ಜಗಳ ಮಾಡಿಕೊಂಡು ಅವಳ ಬಳಿ ಇದ್ದ ಮೊಬೈಲ್ ಎಗರಿಸುತ್ತಾರೆ. ಅಷ್ಟಕ್ಕೂ ಸುಮ್ಮನಾಗದ ಪಾಂಡು, ಬೇರೊಬ್ಬ ಹುಡುಗನ ಜೊತೆ ನಿಮ್ಮಹುಡುಗಿ ಇದ್ದಾಳೆ ಎನ್ನುವುದನ್ನು ಮನೆಯವರಿಗೆ ಹೇಳಿ ಕೋಟಿ ಕೋಟಿ ಹಣ ಮಾಡುವ ತಂತ್ರಕ್ಕೆ ಮೊರೆ ಹೋಗ್ತಾರೆ.
ಈ ನಡುವೆ ಮಾರಾಟವಾದ ಮೊಬೈಲ್ ವೈಶ್ಯೆ ಸರೋಜಾ ( ಅಪೂರ್ವ ಭಾರಧ್ವಜ್ ) ಕೈ ಸೇರಿರುತ್ತದೆ. ಹಣಕ್ಕಾಗಿ ಬೇಡಿಕೆ ಇಟ್ಟ ಸಂಗತಿ ಸರೋಜಾಗೂ ತಿಳಿದು ಆಕೆಯೂ ಪಾಲು ಬೇಕು ಎಂದು ಪಟ್ಟು ಹಿಡಿತಾಳೆ. ಹಣ ಈ ಮೂರು ಮಂದಿಯ ಕೈ ಸೈರುತ್ತಾ ಅಥವಾ ಪ್ರೇಮಿಯ ಕೈ ಸೇರುತ್ತಾ ಎನ್ನುವುದು ಚಿತ್ರದ ಕುತೂಹಲ.
ನಾಯಕ ಯೋಗಿ ತಮಗೆ ಯಾವುದೇ ಪಾತ್ರ ಕೊಟ್ಟರೂ ಅದನ್ನು ಅಚ್ಚುಕಟ್ಟಾಗಿ ನಿಬಾಯಿಸಬಲ್ಲೆ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಸಹಜ ನಟನೆಯಿಂದ ಮನಸ್ಸಿಗೆ ಹತ್ತಿರವಾಗುತ್ತಾರೆ.
ಹಿರಿಯ ಕಲಾವಿದ ದತ್ತಣ್ಣ, ತಾವೊಬ್ಬ ಪರಿಪಕ್ವ ಕಲಾವಿದ ಎನ್ನುವುದನ್ನು ನಿರೂಪಿಸಿದ್ದಾರೆ ವೈಶ್ಯೆಯ ಪಾತ್ರವನ್ನು ಮೈಮೇಲೆ ಹಾಕಿ ಕೊಂಡು ಹಾವ ಭಾವದಲ್ಲಿ ನಟಿ ಅಪೂರ್ವ ಭಾರಧ್ವಜ್ ಇಷ್ಟವಾಗುತ್ತಾರೆ.
ಈ ರೀತಿಯ ಪಾತ್ರ ಮಾಡಲು ಸಾಕಷ್ಟು ತಯಾರಿ ಕೂಡ ಮುಖ್ಯ.ಅದನ್ನು ಮಾಡಿಕೊಂಡಿರುವುದು ಎದ್ದು ಕಾಣುತ್ತದೆ
ನಿರ್ದೇಶಕ ವಿನಯ್ ಪ್ರೀತಂ , ಅದು ಎಂದರೆ ಹಣ ಎನ್ನುವ ಸಂಗತಿಯನ್ನು ಕೊನೆ ತನಕ ರಹಸ್ಯವನ್ನು ಕಾಪಡಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ.ಚಿತ್ರ ಕೊಟ್ಟ ಕಾಸಿಗೆ ಮೋಸ ಮಾಡುವುದಿಲ್ಲ