ಪಿಯು ಹುಡುಗರ ಬದುಕು
ಕಟ್ಟಿಕೊಟ್ಟ ಚಿತ್ರ ಪದವಿ ಪೂರ್ವ
ಚಿತ್ರ: ಪದವಿಪೂರ್ವ
ನಿರ್ದೇಶಕ: ಹರಿಪ್ರಸಾದ್ ಜಯಣ್ಣ
ತಾರಾಗಣ: ಪೃಥ್ವಿ ಶಾಮನೂರು, ಅಂಜಲಿ ಅನೀಶ್, ಯಶಾ ಶಿವಕುಮಾರ್, ರಂಗಾಯಣ ರಘು, ಶರತ್ ಲೋಹಿತಾಶ್ವ ಮತ್ತಿತರರು
ರೇಟಿಂಗ್: 4/5ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- ** */ ಉತ್ತಮ – ***/ ಅತ್ಯುತ್ತಮ – ** ***/
ಹದಿಹರೆಯದ ಕಾಲೇಜು ಹುಡುಗರ ಚೆಲ್ಲಾಟ, ಕೀಟಲೆ,ತರಲೆ, ಸ್ನೇಹ ಜೊತೆಗೊಂದಿಷ್ಟು ಕಿತಾಪತಿಗೆ ಸೆಂಟಿಮೆಂಟ್ ಹೂರಣ ತುಂಬಿ ಕಟ್ಟಿಕೊಟ್ಟಿರುವ ಚಿತ್ರ “ಪದವಿಪೂರ್ವ”.
ಕಾಲೇಜಿನ ಕಥೆ ಹೊಂದಿರುವ ಅನೇಕ ಚಿತ್ರಗಳು ತೆರೆಗೆ ಬಂದಿದೆ, ಪದವಿಪೂರ್ವದಲ್ಲಿ ಪಿಯುಸಿ ಹುಡುಗರನ್ನೇ ಪ್ರಧಾನವಾಗಿರಿಸಿಕೊಂಡು ಅವರ ಸುತ್ತಲೇ ಕಥೆ ಕಟ್ಟಿ ಭವಿಷ್ಯದ ಭದ್ರ ಬುನಾದಿಗೆ ನಾಂದಿ ಹಾಡುವ ಪ್ರಮುಖ ಘಟ್ಟದಲ್ಲಿ ಎಡವದಿರಿ ಎನ್ನುವ ಮೂಲಕ ಹರೆಯ ಕಾಲಿಟ್ಟ ಹುಡುಗರಿಗೆ ಕಿವಿಮಾತು ಹೇಳಿದ ಚಿತ್ರ.
ಇಡೀ ಚಿತ್ರ ಕಾಲೇಜು,ತದಿ ತಟ,ನಿತ್ಯ ಸೇರುವ ಅಡ್ಡ ಹೀಗೆ ಕೆಲವೇ ಸೀಮಿತ ಪ್ರದೇಶಗಳಲ್ಲಿ ಸಾಗುತ್ತದೆ. ಆದರೆ ಕೊನೆಯ ಹತ್ತು ಹದಿನೈದು ನಿಮಿಷ ಚಿತ್ರದ ಗತಿಯನ್ನೇ ಬದಲಿಸಿ ಬಿಡುತ್ತದೆ. ಅದುವೇ ಚಿತ್ರ ಹೈಲೈಟ್. ಪದವಿ ಪೂರ್ವ ಹೊಸ ಮುಖಗಳ ಮುದ್ದಾದ ಕಥನವೂ ಸರಿ.
ದೇವರ ವಿಗ್ರಹ ಮಾಡುವ ಶಿಲ್ಪಿ ರಾಮಣ್ಣ (ಶರತ್ ಲೋಹಿತಾಶ್ವ)ಗೆ ಮಗನ್ನು ಡಾಕ್ಟರ್ ಮಾಡಿಸಬೇಕೆಂಬ ಹಂಬಲ. ಮಗ ನವೀನ್ (ಪೃಥ್ವಿ ಶಾಮನೂರು) ಸ್ನೇಹಿತರ ತಂಡ ಕೊಂಡು ತನ್ನದೇ ಲೋಕದಲ್ಲಿ ಮುಳುಗಿದವ. ಕಾಲೇಜಿಗೆ ಬಂದ ಹುಡುಗಿ ನಿತ್ಯಾ (ಅಂಜಲಿ ಅನೀಶ್) ಕಂಡರೆ ಒಳ ಒಳಗೆ ಪ್ರೀತಿ, ಹೇಳಿಕೊಳ್ಳಲಾಗದ ಚಡಪಡಿಕೆ.
ಕಾಲೇಜು ಅಂದಮೇಲೆ ನಾಯಕನಿದ್ದ ಕಡೆ ,ಖಳನಾಯಕನೂ ಇದ್ದಾನೆ. ತನ್ನ ಜೊತೆ ಓಡಾಡುತ್ತಿದ್ದ ಹುಡುಗಿಯನ್ನು ತನ್ನತ್ತ ಸೆಳೆದುಕೊಂಡ ಚತುರ. ಸ್ನೇಹಿತೆಯ ಜೊತೆ ಒಡಾಡುವುದನ್ನು ಕಂಡ ಅನೊಂದಿಗೆ ಕಿರಿಕಿರಿ.ಇದೆಲ್ಲದರ ನಡುವೆ ಅಪ್ಪನ ಆಸೆ ಈಡೇರಸಲು ಪಣತೊಟ್ಟ ಮಗ ಇನ್ನೇನು ಎಲ್ಲವೂ ಸುಖಾಂತ್ಯ ಎನ್ನುವ ವೇಳೆ ದುರಂತ.
ಕೊನೆಯ ಕೆಲ ನಿಮಿಷಗಳು ಪ್ರೇಕ್ಷಕನ ಕಣ್ಣು ಒದ್ದೆಯಾಗಿಸುತ್ತದೆ. ಕರುಳು ಹಿಂಡಿ ಮನ ಕಲಕುವಂತೆ ಮಾಡಿದ್ದಾರೆ ನಿರ್ದೇಶಕ ಹರಿಪ್ರಸಾದ್ ಜಯಣ್ಣ. ಈ ಮೂಲಕ ತಾವೊಬ್ಬ ಭರವಸೆ ನಿರ್ದೇಶಕನಾಗಬಲ್ಲೆ ಎನ್ನುವುದನ್ನು ಮೊದಲ ಯತ್ನದಲ್ಲಿ ನಿರೂಪಿಸಿದ್ದಾರೆ.
ಹೊಸ ಪ್ರತಿಭೆಗಳಾದ ಪೃಥ್ವಿ ಶಾಮನೂರು, ಅಂಜಲಿ ಅನೀಶ್, ಯಶಾ ಶಿವಕುಮಾರ್ ಗಮನ ಸೆಳೆದಿದ್ದಾರೆ.ಅದರಲ್ಲಿಯೂ ನಟ ಪೃಥ್ವಿ ಚಿತ್ರರಂಗದಲ್ಲಿ ಉತ್ತಮ ನಟನಾಗುವ ಭರವಸೆ ಮೂಡಿಸಿದ್ದಾರೆ. ಸ್ನೇಹಿತರ ಪಾತ್ರಗಳ ಮೂಲಕ ಹುಡುಗರು ಹಾಗು ಶರತ್ ಲೋಹಿತಾಶ್ವ ಗಮನ ಸೆಳೆದಿದ್ದಾರೆ.ರಂಗಾಯಣ ರಘು ,ಹೊಸ ಪ್ರತಿಭೆಗಳೇ ತುಂಬಿರುವ ಚಿತ್ರ ನೋಡಲು ಅಡ್ಡಿ ಇಲ್ಲ,