ಬಿಎಡ್ ವಿದ್ಯಾರ್ಥಿಗಳ ನವಿರು ಪ್ರೇಮಕಥೆ
ಚಿತ್ರ: ಲವ್ ಸ್ಟೋರಿ 1998
ನಿರ್ದೇಶನ: ನಾಗರಾಜ್ ತಲಕಾಡು
ತಾರಾಗಣ: ಮಿಥುನ್, ಕೃತಿಕಾ,ಮಿಥುನ್ , ಕೃತಿಕಾ, ಪ್ರಕಾಶ್ ಶೆಣೈ, ಹರೀಶ್, ಯೋಗೇಶ್ , ಕ್ರಿಶ್, ಹಿತಾರ್ಥ, ಗೌಡ, ರಾಯಣ್ಣ ಮತ್ತಿತರರು
ರೇಟಿಂಗ್: * 3/5
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /
ಬಿಎಡ್ ಶಿಕ್ಷಣ ತರಬೇತಿ ಪಡೆಯುತ್ತಿರುವ ಪ್ರಶಿಕ್ಷಣಾರ್ಥಿಗಳ ಸುತ್ತಾ ಸಾಗುವ ಮುದ್ದಾದ ಪ್ರೀತಿಯ ನವಿರು ಪ್ರೇಮಕಥೆ ಹೊಂದಿರುವ ಚಿತ್ರ ಲವ್ ಸ್ಟೋರಿ 1998”.
ದಶಕಗಳ ಹಿಂದಿನ ಪ್ರೇಮಕಥೆಯನ್ನು ಆಗಿನ ಕಾಲಕ್ಕೆ ಕರೆದೊಯ್ದು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ನಾಗರಾಜ್ ತಲಕಾಡು.ಈ ಮೂಲಕ ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ.
ಪ್ರೀತಿ ಹುಟ್ಟಿದಾಗಲೇ ಪ್ರೀತಿಸಿ ಬಿಡಿ ಅದನ್ನು ಬಚ್ಚಿಟ್ಟುಕೊಳ್ಳುವುದಾಗಲಿ, ಪ್ರೀತಿಯನ್ನು ಅಭಿವ್ಯಕ್ತಿ ಮಾಡಲು ಮುಂದೂಡುತ್ತಾ ಒಳ ಒಳಗೆ ನಲುಗಿ, ಒದ್ದಾಡಬೇಡಿ ಇದರಿಂದ ಒಳಿತಿಗಿಂತ ಕೆಡುಕೆ ಹೆಚ್ಚು ಅನ್ನುವುದನ್ನು ನಿರೂಪಿಸಿದ್ದಾರೆ.ಈ ಮೂಲಕ ಉತ್ತಮ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.
ಶಿಕ್ಷಣ ತರಬೇತಿ ಪಡೆಯುತ್ತಿರುವ ಹುಡುಗರ ಆದ್ಯತೆ,ಆಯ್ಕೆ, ಬದುಕಿನ ದಾರಿ ಸೇರಿದಂತೆ ಮತ್ತಿತರ ವಿಷಯಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಡುವ ಮೂಲಕ ಸಿನಿಮಾ ನೋಡುವ ಮಂದಿಯಲ್ಲಿ ತಮ್ಮದೂ ಈ ರೀತಿಯ ಪ್ರೇಮಕತೆ ಇತ್ತು ಎನ್ನುವುದನ್ನು ನೆನಪು ಮಾಡಿಸಿದ ಚಿತ್ರ ಇದು.
ಶಿಕ್ಷಣ ತರಬೇತಿ ಪಡೆಯುವ ಧವನ್ ( ಮಿಥುನ್) ತನ್ನ ಸಹಪಾಠಿ ಪಾರಿಜಾತ (ಕೃತಿಕಾ)ಕಂಡರೆ ಹೇಳಿಕೊಳ್ಳಲಾಗದಷ್ಟು ಒಳ ಒಳಗೆ ಪ್ರೀತಿ, ಆಕೆಗೂ ಇವನೆಂದರೆ ಪ್ರಾಣ. ಆಕೆಯೂ ಹೇಳಿಕೊಳ್ಳದೆ ಒಳ ಒಳಗೆ ಪ್ರೀತಿಸುವವರು. ಧವನ್ ಕಂಡರೆ ಪಾರಿಜಾತ ಅಪ್ಪ-ಅಮ್ಮನಿಗೆ ಬಲು ಪ್ರೀತಿ.
ಕುಟುಂಬದಲ್ಲಿ ಆದ ಕಹಿ ಘಟನೆಗೆ ಹೆದರಿದ ಪಾರಿಜಾತ ಧವನ್ ಮೇಲೆ ಪ್ರೀತಿ ಇದ್ದರೂ ಆತನ್ನು ದೂರ ಮಾಡಿ ಬೇರೊಬ್ಬನೊಂದಿಗೆ ಮದುವೆಯಾಗ್ತಾಳೆ. ಇದನ್ನು ಸಹಿಸಿಕೊಳ್ಳಲಾಗದ ಆತ ತನ್ನ ಜೀವವನ್ನೆ ಆವಳಿಗಾಗಿ ಅರ್ಪಿಸುತ್ತಾನೆ. ಮುಂದೇನು ಎನ್ನುವುದು ಚಿತ್ರದ ಕಥನ ಕುತೂಹಲ.
ಉಪನ್ಯಾಸಕರೇ ಸೇರಿಕೊಂಡು ಚಿತ್ರ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಕಾಲೇಜು ದಿನಗಳ ಕಥವನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಮಾಮೂಲಿ ಕಾಲೇಜು, ಪ್ರೀತಿಯ ಕಥೆಗಿಂತ ಚಿತ್ರ ಭಿನ್ನವಾಗಿ ಮೂಡಿಬಂದಿದೆ.ಅದರಲ್ಲಿ ತಂಡ ಯಶಸ್ವಿಯಾಗಿದೆ.
ನಾಯಕ ಪ್ರತಿ ಮಾತಿಗೂ ಸಾಹಿತ್ಯದ ಮೂಲಕ ಉತ್ತರ ಕೊಡುವ ಪರಿ,ಆಕ್ಷನ್,ಚಿತ್ರದ ಹೈಲೈಟ್.ನಾಯಕ ಮಿಥುನ್, ನಾಯಕಿ ಕೃತಿಕಾ ಗಮನ ಸೆಳೆದಿದ್ದಾರೆ.
ನಿರೀಕ್ಷಿತ್ ಛಾಯಾಗ್ರಹಣ, ರಾಘವ ಸುಭಾಷ್ ಸಂಗೀತವಿದೆ