`ಬಾಹುಬಲಿ’ಯ ದೃಶ್ಯ ವೈಭವ ತೆರೆಯ ಮೇಲೆ ಮತ್ತೊಮ್ಮೆ ಅನಾವರಣ
ಚಿತ್ರ: ಬಾಹುಬಲಿ ಕ್ರೌನ್ ಆಫ್ ಬ್ಲಡ್
ನಿರ್ದೇಶಕ : ಜೀವನ್ ಜೆ. ಕಾಂಗ್, ನವೀನ್
ನಿರ್ಮಾಪಕರು : ಶೋಭು ಯಾರ್ಲಗಡ್ಡ, ಪ್ರಸಾದ್ ದೇವಿನೇನಿ, ಜೀವನ್ ಜೆ. ಕಾಂಗ್, ಎಸ್. ಎಸ್. ರಾಜಮೌಳಿ, ಶರದ್ ದೇವರಾಜನ್
ಅನಿಮೇಷನ್ ತಾರಾಗಣ: ಶರದ್ ಕೇಳ್ಕರ್, ಸಮಯ ಠಕ್ಕರ್, ಮೌಸಮ್ ಮತ್ತು ಮನೋಜ್ ಪಾಂಡೆ ಮತ್ತಿತರು
ರೇಟಿಂಗ್ : **** 4/5
ತೆಲುಗು ಚಿತ್ರ ಬಾಹುಬಲಿ ಭಾಗ-1 ಮತ್ತು ಬಿಡುಗಡೆಯಾಗಿ ದೇಶ ವಿದೇಶಗಳಲ್ಲಿ ಎರಡು ಹಣ ಹೆಸರು ಮತ್ತು ಖ್ಯಾತಿ ಪಡೆದಿತ್ತು. ಅದರ ಯಶಸ್ಸಿನ ಅಲೆಯಲ್ಲಿದ್ದ ತಂಡ ಅನಿಮೇಷನ್ ಮೂಲಕ ಚಿತ್ರದಲ್ಲಿ ಹೇಳಲಾದಗ ಅನೇಕ ಸಂಗತಿಯನ್ನು ಸರಣಿಯ ರೂಪದಲ್ಲಿ ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ
ಡಿಸ್ನಿಫಸ್ಲ್ ಹಾಟ್ ಸ್ಟಾರ್‍ನಲ್ಲಿ “ಬಾಹುಬಲಿ ಕ್ರೌನ್ ಆಫ್ ಬ್ಲಡ್” ಸ್ಟ್ರೀಮಿಂಗ್‍ನಲ್ಲಿದೆ. ಬಾಹುಬಲಿ ಚಿತ್ರವನ್ನು ನೋಡಿದವರಿಗೆ ಅನಿಮೇಟೆಡ್ ಬಾಹುಬಲಿ ವಿಭಿನ್ನವಾಗಿ ಕಾಣುತ್ತದೆ ಅಷ್ಟು ಶ್ರಮವನ್ನು ಜೀವನ್ ಜೆ. ಕಾಂಗ್, ನವೀನ್ ತಂಡ ಹಾಕಿದೆ. ಜೊತೆಗೆ ಮೂಲ ನಿರ್ದೆಶಕ ಎಸ್.ಎಸ್ ರಾಜಮೌಳಿ ಬೆಂಬಲ ಚಿತ್ರಕ್ಕೆ ಮತ್ತಷ್ಟು ಜೀವಕಳೆ ತಂದುಕೊಟ್ಟಿದೆ.
ಆರ್ಕ ಮೀಡಿಯಾ ವಕ್ರ್ಸ್ ಪೆÇ್ರಡಕ್ಷನ್ ಅಡಿಯಲ್ಲಿ ಎಸ್.ಎಸ್.ರಾಜಮೌಳಿ-ಶರದ್‍ದೇವರಾಜನ್ ಕ್ರಿಯೆಟೀವ್ ಮುಖ್ಯಸ್ಥರಾಗಿ . ಜೀವನ್.ಜೆ.ಕಾಂಗ್. ನವೀನ್ ಜಾನ್ ಜಂಟಿಯಾಗಿ ನಿರ್ದೇಶನ ಮಾಡಿರುವ ‘ಬಾಹುಬಲಿ’ ಹೊಸ ಅಧ್ಯಾಯ ಅನಿಮೇಟೆಡ್ ಸ್ವರೂಪದ ‘ಬಾಹುಬಲಿ ಕ್ರೌನ್ ಆಫ್ ಬ್ಲಡ್ ‘ ಪ್ರೇಕ್ಷರ ಮುಂದೆ ಇಟ್ಟಿದ್ದಾರೆ
ಕಾಲ್ಪನಿಕ ಮಾಹಿಷ್ಮತಿ ಸಾಮ್ರಾಜ್ಯದ ಹಿನ್ನೆಲೆಂ ಹೊಂದಿರುವ, ಸುಮಾರು ಒಂಬತ್ತು ವರ್ಷಗಳ ನಂತರವೂ, ರಾಜಾಮೌಳಿ ಅವರ ಚಲನಚಿತ್ರ ಬಾಹುಬಲಿ, ಅದ್ಭುತವಾದ ಸೆಟ್ಟುಗಳು, ಗಟ್ಟಿಯಾದ ಕಥೆ, ಅತ್ಯುತ್ತಮ ವಿಎಫ್‍ಎಕ್ಸ್, ಸೂಕ್ಷ್ಮ ಅಭಿನಯ ಮತ್ತು ಮನಸ್ಸಿಗೆ ಹಿಡಿಸುವ ಹಾಡುಗಳು ರಾಜಮೌಳಿಯವರ ಮಹಾಸಿನಿಮಾವನ್ನು ಎಂದೂ ಮರೆಯಲಾಗದಂತೆ ಮಾಡಿತ್ತುರಿದೇ ಮತ್ತಷ್ಟು ವಿಶೇಷತೆಗಳೊಂದಿಗೆ ಬಾಹುಬಲಿ ಕ್ರೌನ್ ಆಫ್ ಬ್ಲಡ್ ಗಮನ ಸೆಳೆದಿದೆ
ಬಲ್ಲಾಳದೇವ,ಬಾಹುಬಲಿಯ ಕೊಲೆಗೆ ಸಂಚು ರೂಪಿಸುವುದಕ್ಕಿಂತ ಬಹಳ ಹಿಂದೆ ನಡೆದ ಘಟನೆಗಳ ಸುತ್ತ ಸುತ್ತುತ್ತದೆ. ಪ್ರಮುಖ ಖಳ ನಾಯಕ ರಕ್ತದೇವನಿಂದ ಮಾಹಿಷ್ಮತಿಯನ್ನು ರಕ್ಷಿಸಲು ಬಾಹುಬಲಿ ಮತ್ತು ಬಲ್ಲಾಳದೇವ ಕೈಜೋಡಿಸುತ್ತಾರೆ. ಆದರೆ ರಕ್ತದೇವನನ್ನು ಸೋಲಿಸುವುದಕ್ಕಾಗಿ ಶತ್ರು ಸೈನ್ಯದ ಸೇನಾಧಿಪತಿಯಾದ ಕಟ್ಟಪ್ಪನನ್ನು ಎದುರಿಸಬೇಕಾಗುತ್ತದೆ. ಕಟ್ಟಪ್ಪ ಏಕೆ ದೇಶದ್ರೋಹಿ ಆದ ಯಾರು ಈ ರಕ್ತದೇವ ಅವನು ಮಾಹಿಷ್ಮತಿಯನ್ನು ಏಕೆ ನಾಶಮಾಡಲು ಬಯಸುತ್ತಾನೆ ಈ ಎಲ್ಲಾ ಪ್ರಶ್ನೆಗೆ ಉತ್ತರಕ್ಕಾಗಿ ನೀವು ಈ ಬಾಹುಬಲಿಃ ಕ್ರೌನ್ ಆಫ್ ಬ್ಲಡ್ ಸರಣಿ ವೀಕ್ಷಿಸಬೇಕು.
ಬಾಹುಬಲಿಯಾಗಿ ಶರದ್ ಕೇಳ್ಕರ್, ಕಟ್ಟಪ್ಪನಾಗಿ ಸಮಯ ಠಕ್ಕರ್, ಶಿವಗಾಮಿಯಾಇ ಮೌಸಮ್ ಮತ್ತು ಬಲ್ಲಾಳದೇವನಿಗಾಗಿ ಮನೋಜ್ ಪಾಂಡೆ ಅವರನ್ನು ಆಯ್ಕೆ ಮಾಡಿದ್ದಾರೆ. ತೆಲುಗು ಆವೃತ್ತಿಗೆ, ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ತಮ್ಮ ಧ್ವನಿ ನೀಡಿದ್ದಾರೆ. ಹೊಸ ಖಳನಾಯಕನಾದ ರಕ್ತದೇವನ ಪಾತ್ರಕ್ಕೆ ರಾಜೇಶ್ ಖಟ್ಟರ್ ಧ್ವನಿಯಾಗಿದ್ದಾರೆ. ವಿನಾಶದ ಸಂಕೀರ್ಣ ಯಂತ್ರಗಳನ್ನು ತಯಾರಿಸುವ ಕೋಟೇಶ್ವರ ಪಾತ್ರವು ಐನ್‍ಸ್ಟೈನ್ ಅಂತೆ, ಹುಚ್ಚು ವಿಜ್ಞಾನಿಯಂತೆ ಕಾಣುತ್ತದೆ.. ಇದಕ್ಕೆ ಪ್ರಮೋದ್ ಮಾಥುರ್ ಧ್ವನಿಯಾಗಿದ್ದಾರೆ.
ರಾಣಿ ಶಿವಗಾಮಿ ದುರಹಂಕಾರಿ ಬಿಜ್ಜಳದೇವ-ದೀಪಕ್ ಸಿನ್ಹಾ ತನ್ನ ಮಗ ಬಲ್ಲಾಳದೇವನನ್ನು ಸಿಂಹಾಸನಕ್ಕೆ ತರಲು ಬಯಸುತ್ತಾನೆ. ಬಾಹುಬಲಿಯ ದಯಾಮಯ ರಾಜಕುಮಾರನಾಗಿದ್ದು ಜನರ ಬಗ್ಗೆ ಕಾಳಜಿ ವಹಿಸುತ್ತಾನೆ ಮತ್ತು ಅವರ ನಡುವೆ ಇರುತ್ತಾನೆ. ಮಕ್ಕಳೊಂದಿಗೆ ಆಟವಾಡುತ್ತಾನೆ ಮತ್ತು ಬಡವರ ಕಷ್ಟಗಳನ್ನು ಕೇಳುತ್ತಾನೆ. ರಕ್ತದೇವನ ಪಾತ್ರ ಭಯ ಹುಟ್ಟಿಸಬಲ್ಲ ಆಧುನಿಕ ಶಸ್ತ್ರಾಸ್ತ್ರಗಳು, ಗುಪ್ತ ಕಾರ್ಯಸೂಚಿ, ಸ್ವಜನಪಕ್ಷಪಾತ ವಿರೋಧಿ ನಿಲುವುಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಕರುಣೆ ಮತ್ತು ಕ್ಷಮಾಗುಣಗಳಿಂದ ಕೂಡಿದ ಬಾಹುಬಲಿ ಯುದ್ಧಭೂಮಿಯಲ್ಲಿ ನಿರ್ಭೀತರಾದ ಹೋರಾಟಗಾರನಾಗಿದ್ದಾನೆಈ ವೆಬ್ ಸರ್ಣಿಯನ್ನು ಯುವಕರನ್ನು ಹಾಗೂ ಕುಟುಂಬ ಸದಸ್ಯರನ್ನು ಗಮನದಲ್ಲಿಟ್ತು ಮಾಡಲಾಗಿದೆ.
ಕಥೆಯಲ್ಲಿ ಸಾಕಷ್ಟು ಯುದ್ಧದ ದೃಶ್ಯವಿದ್ದರೂ ಹಿಂಸೆ, ರಕ್ತಪಾತದ ದೃಶ್ಯಾವಳಿಗಳಿಲ್ಲ. ಸುಮಾರು 20 ನಿಮಿಷಗಳ ಒಂಬತ್ತು ಕಂತುಗಳೊಂದಿಗೆ, ಕಥೆಯು ವೇಗವಾಗಿ ಚಲಿಸುತ್ತದೆ, ಈ ವೆಬ್ ಸರಣಿ ಸಹ ಅನೇಕ ವಿಧಗಳಲ್ಲಿ ತೆಲುಗು ಪ್ರೇಕ್ಷಕರಿಗೆ ವಿಶೇಷವಾಗಿದೆ.
ಕಾಲ ಭೈರವ ಸಂಗೀತ ಚೆನ್ನಾಗಿದೆ, ಸಂಕಲನ ಉತ್ತಮವಾಗಿದೆ. ನಿರ್ದೇಶಕರು ಕಥೆಯನ್ನು ಇನ್ನಷ್ಟು ಸುಂದರಗೊಳಿಸುವ ಸಾಧ್ಯತೆಗಳು ಇತ್ತು. ಬಾಹುಬಲಿಯ ಪಾತ್ರ ಹೊರತುಪಡಿಸಿ, ಇತರ ಪ್ರಮುಖ ಪಾತ್ರಗಳ ಅನಿಮೇಷನ್ ತೃಪ್ತಿಕರವಾಗಿದೆ.ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ನೋಡಬಹುದಾದ ಅನಿಮೇಟೆಡ್ ಚಿತ್ರ ಇದು.