Prakarana Tanika Hantadallide Film Review: War on Drugs : A different effort from a new team

Prakarana Tanika Hantadallide Film Review: ಮಾದಕ ವಸ್ತು ವಿರುದ್ದ ಸಮರ : ಹೊಸ ತಂಡದ ವಿಭಿನ್ನ ಪ್ರಯತ್ನ - CineNewsKannada.com

Prakarana Tanika Hantadallide Film Review:  ಮಾದಕ ವಸ್ತು ವಿರುದ್ದ ಸಮರ : ಹೊಸ ತಂಡದ ವಿಭಿನ್ನ ಪ್ರಯತ್ನ

ಚಿತ್ರ: ಪ್ರಕರಣ ತನಿಖಾ ಹಂತದಲ್ಲಿದೆ
ನಿರ್ದೇಶನ: ಸುಂದರ್ ಎಸ್
ತಾರಾಗಣ: ಮಹೀನ್ ಕುಬೇರ್, ಚಿಂತನ್ ಕಂಬಣ್ಣ, ಮುತ್ತುರಾಜ್, ರಾಜ್ ಗಗನ್ ಮತ್ತಿತರಿದ್ದಾರೆ
ರೇಟಿಂಗ್ : *** 3/5

ಕನ್ನಡದಲ್ಲಿ ಇತ್ತೀಚೆಗೆ ಹೊಸ ಹೊಸ ಪ್ರತಿಭೆಗಳು ತಮ್ಮ ಪ್ರತಿಭಾ ಪ್ರದರ್ಶನ ಮಾಡುತ್ತಿದ್ದಾರೆ. ಆ ಸಾಲಿಗೆ ಮತ್ತೊಂದು ಚಿತ್ರ “ ಪ್ರಕರಣ ತನಿಖಾ ಹಂತದಲ್ಲಿದೆ’. ಈ ವಾರ ತೆರೆಗೆ ಬಂದಿದೆ.

ಮಾದಕ ವಸ್ತು ವಿಷಯವನ್ನು ಮುಂದಿಟ್ಟುಕೊಂಡು ಕುತೂಹಲಕಾರಿ ಕಥನದ ಮೂಲಕ ಅನಾವರಣ ಮಾಡಿದ್ದಾರೆ ನಿರ್ದೇಶಕ ಸುಂದರ್. ಜೊತೆಗೆ ಮಾದಕ ವಸ್ತು ವಿರುದ್ದ ಸಮರ ಸಾರುವ ಸಾಮಾಜಿಕ ಕಳಕಳಿಕ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ.

ಚಿತ್ರದ ಹೆಸರು ಕೇಳಿದರೆ ಕುತೂಹಲ ಮೂಡಿಸಿದೆ. ಇದೇ ಕುತೂಹಲವನ್ನು ಕಾಯ್ದುಕೊಂಡು ಚಿತ್ರವನ್ನು ತೆರೆಗೆ ಕಟ್ಟಿಕೊಡಲಾಗಿದೆ. ಮಾದಕ ವಸ್ತು ಡೀಲ್ ಮಾಡುವ ಎರಡು ಗ್ಯಾಂಗ್‍ಗಳು ಮತ್ತು ಅದನ್ನು ಬೆನ್ನತ್ತಿ ಯಾರಿಗೂ ಗೊತ್ತಾಗದ ಹಾಗೆ ಅವರಿಗೆ ಕೊನೆಗಾಣಿಸುವ ಕಥಾಹಂದರ ಹೊಂದಿದೆ.

ಸರಳವಾದ ವಿಷಯವಾದರೂ ಗಂಭೀರ ವಿಷಯವನ್ನು ಚಿತ್ರದ ಮೂಲಕ ಹೇಳಿರುವ ನಿರ್ದೇಶಕ ಪ್ರಯತ್ನ ಸಾರ್ಥಕ ಇಂತಹ ಚಿತ್ರಕ್ಕೆ ಬಂಡವಾಳ ಹಾಕುವುದು ಕೂಡ ಸವಾಲಿನ ಸಂಗತಿ ಆ ಕೆಲವನ್ನು ಚಿಂತನ್ ಮಾಡಿದ್ದಾರೆ. ಜೊತೆಗೆ ಪ್ರಮುಖ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ.

ಮಂಗಳೂರಿಗೆ ಹಡಗಿನಲ್ಲಿ ಬರುವ ನೂರಾರು ಕೋಟಿ ಮೊತ್ತದ ಮಾದಕ ವಸ್ತು ಕಳ್ಳತನ ಮಾಡಿ ಅದನ್ನು ಬೇರೆ ಬೇರೆ ಕಡೆ ಸಾಗಾಟ ಮಾಡಬೇಕು ಎನ್ನವು ಗುರು ಇಟ್ಟುಕೊಂಡ ಇಬ್ಬರು ಖದೀಮರ ಕನಸು, ಆರಂಭದಲ್ಲಿ ಕೊಲೆಯಲ್ಲಿ ಆರಂಭವಾಗುತ್ತದೆ. ಆ ಕೊಲೆ ಯಾರು ಮಾಡಿದರು, ಅದರ ಹಿಂದಿರುವರು ಯಾರು ಎನ್ನುವ ಕುತೂಹಲ ಆರಂಭದಿಂದ ಕೊನೆ ತನಕ ಚಿತ್ರ ನೋಡಿಸಿಕೊಂಡು ಕರೆದೊಯ್ದಿದೆ.

ಸಹೋದರ ಗೌರವ್ ಇದ್ದಕ್ಕಿದ್ದಂತೆ ಹತ್ಯೆಯಾಗುತ್ತಾನೆ. ಇದು ಸಹಜವಾಗಿ ಅಣ್ಣ ವೈದ್ಯ ಭಾರ್ಗವ (ಚಿಂತನ್ ಕಂಬಣ್ಣ) ಅವರಲ್ಲಿ ಆತಂಕ ಹೆಚ್ಚಿಸುತ್ತದೆ. ಪ್ರಕರಣದ ಬೆನ್ನುಹತ್ತಿದ ಖಡಕ್ ಪೊಲೀಸ್ ಅಧಿಕಾರಿ ಮಹೀನ್ ಕುಬೇರ್ ಒಂದೊಂದೇ ವಿಷಯವನ್ನು ಪತ್ತೆ ವಿಷಯ ಕೈಗೆತ್ತಿಕೊಳ್ಳುತ್ತಾನೆ. ಈ ನಡುವೆ ಒಬ್ಬಬ್ಬರೇ ಹತ್ಯೆಯಾಗುತ್ತಾರೆ. ಇದರ ಹಿಂದಿನ ವ್ಯಕ್ತಿ ಯಾರು ಎನ್ನುವುದು ತಿಳಿದುಕೊಳ್ಳುವುದು ತಲೆ ನೋವಿನ ವಿಷಯ.

ಚಾಣಾಕ್ಷ ಪೊಲೀಸ್ ಅಧಿಕಾರಿ ಪ್ರಕರಣವನ್ನು ಬೆನ್ನುಹತ್ತಿ ಅದನ್ನು ಕೊನೆಗೂ ಪತ್ತೆ ಹಚ್ಚುತ್ತಾನೆ. ಆದರೆ ಕೊಲೆ ಮಾಡಿದ ವ್ಯಕ್ತಿ ಯಾರು, ಅದನ್ನು ಯಾಕೆ ಮಾಡಿದ ಎನ್ನುವ ಸಂಗತಿ ತಿಳಿದು ಅಪರಾಧಿಯನ್ನು ಸುಮ್ಮನೆ ಬಿಡುತ್ತಾನೆ. ಆತ ಯಾಕೆ ಹಾಗೆ ಮಾಡಿದ, ಕೊಲೆ ಮಾಡಿದ ವ್ಯಕ್ತಿ ಯಾರು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.

ವೈದ್ಯನ ಪಾತ್ರದಲ್ಲಿ ನಟ ಚಿಂತನ್, ಪೊಲೀಸ್ ಅಧಿಕಾರಿಯಾಗಿ ಮಾಹಿನ್ ಕುಬೇರ್ ಪಾತ್ರಕ್ಕೆ ಜೀವ ತುಂಬಿದ್ದಾರೆ, ಉಳಿದಂತೆ ಮುತ್ತುರಾಜ್, ರಾಜ್ ಗಗನ್ ಮತ್ತಿತರು ಪಾತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ.

ಕನ್ನಡದಲ್ಲಿ ಇತ್ತೀಚೆಗೆ ಬರುತ್ತಿರುವ ಚಿತ್ರಗಳಲ್ಲಿ ವಿಭಿನ್ನ ಮಾದರಿಯ ಚಿತ್ರ ಹೊಸ ತಂಡ ಹೊಸತನದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಡುವಲ್ಲಿ ಯಶಸ್ವಿಯಾಗಿದೆ.

ರೇಟಿಂಗ್ : ಕಳೆಪೆ – * / ಅಷ್ಟಕಷ್ಟೆ – ** / ಪರವಾಗಿಲ್ಲ – ***/ ಉತ್ತಮ – **** / ಅತ್ಯುತ್ತಮ –  *****

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin