Review: ಕರುಳ್ ಚುರ್ ಎನ್ನುವ ಮನಮಿಡಿಯುವ ದುರಂತ ಕಥನ “ಸೂರಿ ಲವ್ಸ್ ಸಂಧ್ಯಾ”

ಚಿತ್ರ : ಸೂರಿ ಲವ್ಸ್ ಸಂಧ್ಯಾ
ನಿರ್ದೇಶನ: ಯಾದವ್ ರಾಜ್
ತಾರಾಗಣ: ಅಭಿಮನ್ಯ ಕಾಶಿನಾಥ್, ಅಪೂರ್ವ, ಪ್ರತಾಪ್ ನಾರಾಯಣ್,ಪ್ರದೀಪ್ ಕಾಬ್ರಾ, ಭಜರಂಗಿ ಪ್ರಸನ್ನ, ಖುಷಿ ಆಚಾರ್ ಮತ್ತಿತರರು
ರೇಟಿಂಗ್: *** 3.5/5
ಕನ್ನಡದಲ್ಲಿ ತೀರಾ ಇತ್ತೀಚೆಗೆ ಹೊಸ ಬಗೆಯ ಮತ್ತು ವಿನೂತನ ಚಿತ್ರಗಳು ತೆರೆಗೆ ಬಂದಿವೆ. ಜೊತೆಗೆ ಗಮನ ಸೆಳೆಯುತ್ತಿವೆಯೂ ಕೂಡ, ಈ ಸಾಲಿಗೆ ಸೇರಬಹುದಾದ ಮತ್ತೊಂದು ಮನಮಿಡಿಯುವ ದುರಂತ ಕಥನ “ಸೂರಿ ಲವ್ಸ್ ಸಂಧ್ಯಾ” ಈ ವಾರ ತೆರೆಗೆ ಬಂದಿದೆ.
ಅಣ್ಣ-ತಂಗಿಯ ಬಾಂಧವ್ಯ, ವಾತ್ಸಲ್ಯ, ಕಷ್ಟಕಾಲದಲ್ಲಿ ನೆರಳಾದ ಮಂದಿಗೆ ಆಶ್ರಯ ನೀಡಬೇಕೆನ್ನುವ ದೊಡ್ಡ ಗುಣ ಜೊತೆ ಯುವ ಪ್ರೇಮಿಗಳಿಬ್ಬರ ನಿಷ್ಕಲ್ಮಶ ಪ್ರೀತಿ, ಪ್ರೇಮ, ಶ್ರೀಮಂತ, ಬಡವ ಎನ್ನುವ ಅಂತರ ಜೊತೆಗೆ ಕರುಳ್ ಚುರ್ ಎನ್ನುವ ದುರಂತ ಕಥೆಯನ್ನು ನಿರ್ದೇಶಕ ಯಾದವ್ ರಾಜ್ ಮನಮುಟ್ಟುವಂತೆ ತೆರೆಗೆ ಕಟ್ಟಿಕೊಟ್ಟಿದ್ದಾರೆ.
ಸೂರಿ (ಅಭಿಮನ್ಯು ಕಾಶೀನಾಥ್) ಗೋಡೆ ಮೇಲೆ ಚಿತ್ರ ಬಿಡಿಸುವ ಅಪ್ರತಿಮ ಕಲಾವಿದ, ಈತ ಕಲೆಗೆ ಬೆಲೆ ಕಟ್ಟಲಾಗದು. ಶ್ರೀಮಂತ ಮನೆತನದ ಹುಡುಗಿ ಸಂದ್ಯಾ( ಅಪೂರ್ವ) ಈತನ ಕಲೆಗೆ ಮಾರು ಹೋಗಿ ಪ್ರೀತಿಯಲ್ಲಿ ಬೀಳುತ್ತಾಳೆ ಸಂಧ್ಯಾ ಅಣ್ಣ ಗಡ್ಡ ವಿಜಿ( ಪ್ರತಾಪ್ ನಾರಾಯಣ್) ಕಾರ್ಪರೇಟರ್ ಆಗುವ ದೊಡ್ಡ ಕನಸು ಕಂಡವ. ಅದಕ್ಕಾಗಿ ಏನು ಮಾಡಲು ಬೇಕಾದರೂ ಸಿದ್ದ, ಇಂತಹ ಅಣ್ಣನ ಮುದ್ದಿನ ತಂಗಿಯನ್ನು ಹುಡುಗನೊಬ್ಬ ಪ್ರೀತಿಸುತ್ತಾನೆ ಎನ್ನುವುದನ್ನೂ ಸಹಿಸದ ಆತ ಇಬ್ಬರನ್ನೂ ಬೇರೆ ಮಾಡಲು ನಾನಾ ಪ್ರಯತ್ನ ಮಾಡ್ತಾನೆ.
ಅತಿಯಾಗಿ ಪ್ರೀತಿಸಿದ ಹುಡುಗ ಮಾಡದ ತಪ್ಪಿಗೆ ಜೈಲು ಸೇರ್ತಾನೆ. ಆತ ಬರುವರೆಗೂ ಕಾಯುವ ಭರವಸೆ ನೀಡ್ತಾಳೆ,ಆಕೆಗೋ ಜ್ಯೋತಿರ್‍ಲಿಂಗ ದರ್ಶನ ಮಾಡುವ ಆಸೆ, ಆಕೆಯ ಕನಸು ಈಡೇರುತ್ತಾ,, ಜೈಲಿಗೆ ಹೋಗಿದ್ದ ಸೂರಿ ಬಿಡುಗಡೆಯಾಗುತ್ತಾನಾ, ಅಷ್ಟಕ್ಕೂ ಆ ದುರಂತ ಕಥನ ಯಾವುದು, ಏನೆಲ್ಲಾ ಆಗಲಿದೆ ಎನ್ನುವುದು ಚಿತ್ರದ ಕಥನ ಕುತೂಹಲ ಅದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.
ನಿರ್ದೇಶಕ ಯಾದವ್ ರಾಜ್, ವಿಭಿನ್ನ ಕಥೆಯನ್ನು ಯಾರೂ ಊಹೆ ಮಾಡದ ಕ್ಲೈಮ್ಯಾಕ್ಸ್ ನೊಂದಿಗೆ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಅದರಲ್ಲಿಯೂ ಕೊನೆಯ ಕೆಲ ನಿಮಿಷಗಳು ಕರುಳು ಚುರ್ ಎನ್ನದೆ ಇರಲಾರದು. ಅದು ಏನು ಎನ್ನುವುದನ್ನು ನೋಡಲು ಸೂರಿ ಲವ್ಸ್ ಸಂದ್ಯಾ ಚಿತ್ರ ನೋಡಬೇಕು.
ನಟ ಅಭಿಮನ್ಯು ಕಾಶಿನಾಥ್, ಇದುವರೆಗೂ ನಟಿಸಿದ ಚಿತ್ರಗಳಿಗಿಂತ ಉತ್ತಮ ಅಭಿನಯ ನೀಡಿದ್ದಾರೆ. ಆಕ್ಷನ್ ಪಾತ್ರಗಳಿಗೂ ಸೈ ಎನಿಸಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಅವರಿಗೆ ಕಥೆಗಳು ಸಿಕ್ಕರೆ ತಾವೊಬ್ಬ ಅತ್ಯುತ್ತಮ ನಟ ಎನ್ನುವುದನ್ನು ಸಾಬೀತು ಮಾಡಲಿದ್ದಾರೆ. ಅದಕ್ಕೆ ಸೂರಿ ಲವ್ಸ್ ಸಂಧ್ಯಾ ಅತ್ಯುತ್ತಮ ಉದಾಹರಣೆ
ನಾಯಕಿ ಅಪೂರ್ವ ಕೂಡ ಮುದ್ದಾದ ಹುಡುಗಿ ಪಾತ್ರಗಳಲ್ಲಿ ಗಮನ ಸೆಳೆದಿದ್ಧಾರೆ. ಪ್ರತಾಪ್ ನಾರಾಯಣ್ , ,ಪ್ರದೀಪ್ ಕಾಬ್ರಾ, ಭಜರಂಗಿ ಪ್ರಸನ್ನ, ಖುಷಿ ಆಚಾರ್ ಮತ್ತಿತರರು ತಮ್ಮ ಪಾತ್ರಗಳಿಗೆ ನ್ಯಾಯ ಒದಿಗಿಸಿದ್ದಾರೆ.
ಅರುಣಗಿರಿ ಸಂಗೀತ , ಶ್ರೀನಿವಾಸ ಕ್ಯಾಮರ ಚಿತ್ರಕ್ಕೆ ಪೂರಕವಾಗಿದೆ. ಕನ್ನಡದಲ್ಲಿ ಇತ್ತೀಚೆಗೆ ಬಂದ ಮನಕಲಕುವ ಚಿತ್ರ ಸೂರಿ ಲವ್ಸ್ ಸಂದ್ಯಾ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /