“ಯುವ” ಚಿತ್ರದ ಮೂಲಕ ಕನ್ನಡಕ್ಕೆ ಮತ್ತೊಬ್ಬ ಭರವಸೆ ನಟ ರಣವ್ ಕ್ಷೀರಸಾಗರ್
” ಯುವ” ಚಿತ್ರದ ಮೂಲಕ ಕೃಪಾಲ್ ಪಾತ್ರದಲ್ಲಿ ಗಮನ ಸೆಳೆಡ ರಣವ್ ಕ್ಷೀರಸಾಗರ್ ಇದೀಗ ಚಿತ್ರರಂಗದಲ್ಲಿ ಅವರ ಬಗ್ಗೆ ಮಾತುಗಳು ಆರಂಭವಾಗಿದೆ. ಅದಕ್ಕೆ ಯುವ ಚಿತ್ರದಲ್ಲಿನ ಪಾತ್ರ ಮತ್ತು ಅದಕ್ಕೆ ಸಿಕ್ಕ ಮನ್ನಣೆಯೇ ಸಾಕ್ಷಿ.
ಪುನೀತ್ ರಾಜ್‍ಕುಮಾರ್ ಅವರ ಜೊತೆ “ಯುವ ರತ್ನ” ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರವಣ್ ಕ್ಷೀರಸಾಗರ್, ಇದೀಗ ಯುವ ಚಿತ್ರದಲ್ಲಿ ಯುವ ರಾಜ್‍ಕುಮಾರ್ ಜೊತೆ ಕಾಣಿಸಿಕೊಂಡು ಮಿಂಚಿದ್ದಾರೆ. ಇದೇ ಕಾರಣಕ್ಕೆ ಗಾಂಧಿನಗರದಲ್ಲಿ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.
ಇಲ್ಲಿಯ ತನಕ ನಾಲ್ಕೈದು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರೂ ಯುವ ಸಿನಿಮಾದಲ್ಲಿ ಸಿಕ್ಕ ಪ್ರಮುಖ ಪಾತ್ರದಲ್ಲಿ ಮಿಂಚು ಹರಿಸಿರುವ ರಣವ್ ಈಗ ಎಲ್ಲೇ ಹೋದರೂ `ಕೃಪಾಲ್’ ಎಂದೇ ಜನರು ಗುರುತು ಹಿಡಿಯುತ್ತಿರುವುದು ಅದರಲ್ಲಿ ಹೊಸ ಭರವಸೆ ಹುಟ್ಟುಹಾಕಿದೆ.
ರಣವ್ ಕ್ಷೀರ ಸಾಗರ್ ಹುಟ್ಟಿದ್ದು ಮೈಸೂರಿನಲ್ಲಿ. ಆದರೆ ಬೆಳೆದದ್ದು ಬೆಂಗಳೂರಿನಲ್ಲಿ. ಮೆಕಾನಿಕಲ್ ಇಂಜಿನಿಯರಿಂಗ್ ಮುಗಿಸಿ ಸಿನಿಮಾಲೋಕಕ್ಕೆ ಎಂಟ್ರಿ ಕೊಟ್ಟ ರಣವ್‍ಗೆ ಆರಂಭದಲ್ಲೇ ಪುನೀತ್ ರಾಜ್‍ಕುಮಾರ್ ಅವರೊಟ್ಟಿಗೆ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿತ್ತು. ಯುವರತ್ನ ಸಿನಿಮಾ ಮೂಲಕ ಸಿನಿಪಯಣ ಆರಂಭಿಸಿದ ರಣವ್, ನಂತರ ಅವತಾರ ಪುರುಷ, ರಾಣಾ, ಯುವ ಸೇರಿದಂತೆ ಇನ್ನೂ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವೊಂದು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಯುವ ಸಿನಿಮಾ ತೆರೆಕಂಡ ನಂತರ ಸಾಕಷ್ಟು ದೊಡ್ಡ ದೊಡ್ಡ ಪ್ರಾಜೆಕ್ಟ್‍ಗಳನ್ನು ರಣವ್ ಒಪ್ಪಿಕೊಂಡಿದ್ದಾರಂತೆ. `ಈಗಲೇ ಎಲ್ಲವನ್ನೂ ಹೇಳಿಕೊಂಡರೆ ಸರಿಯಾಗುವುದಿಲ್ಲ. ಸಿನಿಮಾತಂಡವೇ ಅಧಿಕೃತವಾಗಿ ಅನೌನ್ಸ್ ಮಾಡಲಿ’ ಎಂಬುದು ರಣವ್ ಮಾತು. ಯಾವುದೇ ಪಾತ್ರ ಕೊಟ್ಟರೂ ನಿಭಾಯಿಸಬಲ್ಲೆ ಎಂಬ ಹುಮ್ಮಸ್ಸಿನಲ್ಲಿರುವ ರಣವ್, ಸಿನಿಮಾಕ್ಕೆ ಬೇಕಾದ ಪಟ್ಟುಗಳನ್ನು ಕಲಿತುಕೊಂಡು ಕ್ಯಾಮೆರಾ ಎದುರಿಸುತ್ತಿದ್ದಾರೆ.
`ಅಭಿನಯ ತರಂಗ ಹಾಗೂ ಉಷಾ ಭಂಡಾರಿ ಅವರ ಬಳಿ ನಟನಾ ತರಬೇತಿ ಪಡೆದುಕೊಂಡಿದ್ದೇನೆ. ಜಿಮ್ನಾಸ್ಟಿಕ್, ಸ್ಟಂಟ್ಸ್, ಡಾನ್ಸ್ ಎಲ್ಲವೂ ಕಲಿತಿದ್ದೀನಿ. ಹೀಗಾಗಿ ಇಂಥದ್ದೇ ಪಾತ್ರ ಎಂಬುದಕ್ಕೆ ಸೀಮಿತವಾಗದೇ ನಟನೆಗೆ ಅವಕಾಶವಿರುವ ಯಾವುದೇ ಪಾತ್ರವಾದರೂ ಅಭಿನಯಿಸಲು ಸಿದ್ಧ’ ಎನ್ನುತ್ತಾರೆ ರಣವ್.
ನಮ್ಮದು ಮಿಡ್ಲ್ ಕ್ಲಾಸ್ ಫ್ಯಾಮಿಲಿ. ಸಿನಿಮಾ ಹಿನ್ನೆಲೆ ಏನೂ ಇಲ್ಲ. ಚಿಕ್ಕಂದಿನಿಂದಲೂ ಡಾ.ರಾಜ್‍ಕುಮಾರ್, ಅಮಿತಾಬ್ ಸೇರಿದಂತೆ ಸಾಕಷ್ಟು ಹೀರೋಗಳ ಸಿನಿಮಾಗಳನ್ನು ನನ್ನಪ್ಪ ತೋರಿಸುತ್ತಿದ್ದರು ಸಿನಿಮಾ ನೋಡಿಕೊಂಡೇ ಬೆಳೆದೆ ಅನ್ನೋದೆ ನನ್ನ ಬ್ಯಾಗ್ರೌಂಡ್. ಮನೆಯಲ್ಲಿ
ಡಿಗ್ರಿ ಮಾಡಲೇಬೇಕು’ ಅಂದಿದ್ರು. ಹೀಗಾಗಿ ಎಂಜಿನಿಯರಿಂಗ್ ಮುಗಿಸಿದೆ. ನಂತರ ತಡಮಾಡಲೇ ಇಲ್ಲ… ಸಿನಿಮಾ ಫೀಲ್ಡ್‍ಗೆ ಬಂದೆ. ಸದ್ಯ ಎಲ್ಲವೂ ಚೆನ್ನಾಗಿ ನಡೀತಿದೆ. ಒಳ್ಳೊಳ್ಳೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಅಳೆದು ತೂಗಿ ಪಾತ್ರಕ್ಕೆ ಒತ್ತು ನೀಡುವ ಚಿತ್ರ ಮತ್ತು ಕಥೆ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ ರಣವ್ ಕೀರಸಾಗರ್.