ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ ನೀಡುವ ಕೆಲಸ ಆಗಬೇಕು: ಹಿರಿಯ ಕಲಾವಿದ ತಬಲ ನಾಣಿ
ಬಣ್ಣದ ಬದುಕಿನಲ್ಲಿ ವಿಭಿನ್ನ ಮತ್ತ ತರೇವಾರಿ ಪಾತ್ರಗಳನ್ನು ನಿಬಾಯಿಸುತ್ತಲೇ ಪ್ರೇಕ್ಷಕರನ್ನು ನಗಿಸುತ್ತಿರುವ ಹಿರಿಯ ಕಲಾವಿದ ತಬಲ ನಾಣಿ, ಚಿತ್ರರಂಗದ ವೃತ್ತಿ ಜೀವನದಲ್ಲಿ ತೀರಾ ಅಪರೂಪ ಎನ್ನುವ ಪಾತ್ರ ಮಾಡಿದ್ದಾರೆ. ಅದುವೇ “ ಅಪ್ಪ ಐ ಲವ್ ಯೂ” ಚಿತ್ರದ ಮೂಲಕ. ಕಲಾವಿದನೊಬ್ಬನಿಗೆ ಈ ರೀತಿಯ ಪಾತ್ರಗಳು ಹುಡುಕಿಕೊಂಡು ಬರುತ್ತಿರುವುದು ಆತನ ಪ್ರತಿಭೆ ಮತ್ತು ಸಾಮಥ್ರ್ಯಕ್ಕೆ ಹಿಡಿದದ ಕನ್ನಡಿಯೂ ಹೌದು.
ಕುಡುಕನ ಪಾತ್ರವೇ ಇರಲಿ, ತಂದೆ, ಚಿಕ್ಕಪ್ಪ, ಮಾವ, ಕಿವುಡ ಯಾವುದೇ ಪಾತ್ರವಿರಲಿ ಅದನ್ನು ಲೀಲಾಜಾಲವಾಗಿ ಮಾಡುವ ಕೆಲ ಕರಗತ ಮಾಡಿಕೊಂಡ ಅಪರೂಪದ ಕಲಾವಿದ ತಬಲನಾಣಿ “ಅಪ್ಪ ಐ ಲವ್ ಯೂ” ಚಿತ್ರದಲ್ಲಿ ಇದುವರೆಗೂ ಮಾಡದ ಪಾತ್ರ ಮಾಡುವ ಮೂಲಕ ಜನಮನ ಮತ್ತೊಮ್ಮೆ ಗೆಲ್ಲುವ ಮೂಲಕ ತಾವೊಬ್ಬ ಪುಟಕ್ಕಿಟ್ಟ ಚಿನ್ನ, ಅಪ್ಪಟ ಕಲಾವಿದ. ಯಾವುದೇ ಪಾತ್ರ ಕೊಟ್ಟರೂ ನಿಬಾಯಿಸಬಲ್ಲೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಯುವ ಪ್ರತಿಭಾನ್ವಿತ ನಿರ್ದೇಶಕ ಅಥರ್ವ್ ಆರ್ಯ, ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಕೆಆರ್‍ಎಸ್ ಸಂಸ್ಥೆ ಬಂಡವಾಳ ಹೂಡಿದೆ. ಈ ಚಿತ್ರದಲ್ಲಿ ತಬಲ ನಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅರ್ಥಪೂರ್ಣ ಮಾತುಗಳನ್ನು ಬರೆಯುವ ಮೂಲಕ ಭಾವನಾತ್ಮಕವಾಗಿ ಜನರ ಮನ ಗೆಲ್ಲಲ್ಲು ಮುಂದಾಗಿದ್ದಾರೆ. ಚಿತ್ರ ಇದೇ ತಿಂಗಳ 12 ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಹಿರಿಯ ಕಲಾವಿದ ತಬಲನಾಣಿ.
• ಬಣ್ಣದ ಬದುಕಿನಲ್ಲಿ ಇದುವರೆಗೂ ವಿಭಿನ್ನ ಪಾತ್ರ ಮಾಡಿದ್ದೀರಾ, ಅಪ್ಪ ಐ ಲವ್ ಯೂ ಚಿತ್ರದಲ್ಲಿ ನಿಮ್ಮ ಪಾತ್ರ ಏನು
ತಂದೆ- ಮಗನ ಭಾನಾತ್ಮಕ ಕಥೆಯ ತಿರುಳು ಹೊಂದಿರುವ ಚಿತ್ರ “ ಅಪ್ಪ ಐ ಲವ್ ಯೂ”. ಇದುವರೆಗೂ ಬೇರೆ ಬೇರೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರ ನೋಡಿದ ಎಲ್ಲರಿಗೂ ಇಷ್ಟವಾಗಲಿದೆ.
• ತಂದೆ ಮಗನ ಬಾಂಧವ್ಯದ ಕತೆಯಲ್ಲಿ ನಿಮ್ಮ ಪಾತ್ರ ಏನು
ಚಿತ್ರದಲ್ಲಿ ಅಪ್ಪನ ಪಾತ್ರ ನನ್ನದು. ಮಗ ಸೊಸೆಯ ಅಸಡ್ಡೆ ಆಸ್ತಿ ಆಸೆಯಿಂದ ಅನಾಥಾಶ್ರಮ ಸೇರಿದ ಹಿರಿಯ ಜೀವದ ಪಾತ್ರ.
• ಅಪ್ಪ ಐ ಲವ್ ಯೂ ಮೂಲಕ ಸಮಾಜಕ್ಕೆ ಏನು ಹೇಳಲು ಮುಂದಾಗಿದ್ದೀರಾ
ಮಕ್ಕಳಿಗೆ ವಿದ್ಯೆ ಕೊಟ್ಟರೆ ಸಾಲದು, ಸಂಸ್ಕಾರವನ್ನು ಕೊಡಬೇಕು ಎಂದು ಹೇಳುವ ಪ್ರಯತ್ನ ಮಾಡಿದ್ದೇವೆ.
• ಇದು ನೈಜ ಘಟನೆಯ ಆಧಾರಿತ ಚಿತ್ರವೇ?
ಒಂದು ರೀತಿ ನೈಜ ಘಟನೆಯ ಚಿತ್ರ ಎಂದರೂ ಅಡ್ಡಿ ಇಲ್ಲ,ಸಮಾಜದಲ್ಲಿ ನಡೆಯುವ ಕಥೆ. ಕಂಡಿದ್ದು ಕೇಳಿದ್ದು ಚಿತ್ರದಲ್ಲಿದೆ.
• ನಿಮ್ಮ ವೃತ್ತಿ ಜೀವನದಲ್ಲಿ ಈ ಚಿತ್ರ ಎಷ್ಟು ಮುಖ್ಯ
ಚಿತ್ರರಂಗದಲ್ಲಿ ಇದುವರೆಗೂ ವಿಭಿನ್ನ ಪಾತ್ರ ಮಾಡಿದ್ದೇನೆ.ಆದರೆ ಇದುವರೆಗೂ ಮಾಡದ ಪಾತ್ರವನ್ನು ” ಅಪ್ಪ ಐ ಲವ್ ಯೂ ” ಚಿತ್ರದಲ್ಲಿ ಮಾಡಿದ್ದೇನೆ. ಪೂರ್ಣ ಪ್ರಮಾಣದ ತಂದೆಯ ಪಾತ್ರ ಮಾಡಿದ್ದೇನೆ,. ತಂದೆಯ ಮಹತ್ವ ಸಾರುವ ಚಿತ್ರ ಎಲ್ಲರೂ ನೋಡಬೇಕಾದ ಚಿತ್ರ. ಜೊತೆಗೆ ಸಾಮಾಜಿಕ ಕಳಕಳಿಯೂ ಇರುವ ಚಿತ್ರ
• ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಬಗ್ಗೆ ಹೇಳುವುದಾದರೆ
ಯುವ ಪ್ರತಿಭಾನ್ವಿತ ನಿರ್ದೇಶಕ ಅಥರ್ವ್ ಆರ್ಯ ಚಿತ್ರಕ್ಕೆ ಅಕ್ಷನ್ ಕಟ್ ಹೇಳಿದ್ದಾರೆ.ತಂದೆ- ಮಗನ ಭಾವನಾತ್ಮಕ ಕಥೆ ಹೊಂದಿರುವ ” ಅಪ್ಪ ಐ ಲವ್ ಯೂ ” ಚಿತ್ರ ತೆರೆಗೆ ಏಪಿಲ್ 12 ರಂದು ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಮೂಲಕ ಬಹಳ ದಿನಗಳ ನಂತರ ನಟಿ ಮಾನ್ವಿತಾ ಕಾಮತ್ ಮರಳಿ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ನಟ ನೆನಪಿರಲಿ ಪ್ರೇಮ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ. ಜೊತೆಗೆ ಮನೆ ಮಂದಿಯೆಲ್ಲಾ ನೋಡುವ ಚಿತ್ರ ಮಿಸ್ ಮಾಡಿಕೊಳ್ಳಬೇಡಿ ಎನ್ನುವ ಕರೆ ಅವರದು.