Exclusive : ಮೈಥಾಲಜಿ ಪಾತ್ರದಲ್ಲಿ ನಟಿಸುವಾಸೆ: ಮನದಾಸೆ ಬಿಚ್ಚಿಟ್ಟ ಸುಪ್ರೀತಾ ಸತ್ಯನಾರಾಯಣ್
ಕಿರಿತೆರೆಯ ಮೂಲಕ ಬಣ್ಣದ ಜಗತ್ತಿಗೆ ಪಾದಾರ್ಪಣೆ ಮಾಡಿದ ಮೈಸೂರಿನ ಬೆಡಗಿ ಸುಪ್ರೀತಾ ಸತ್ಯನಾರಾಯಣ .ಸಿನಿಮಾ ಮೂಲಕ ಹಿರಿತೆರೆಗೆ ಕಾಲಿಟ್ಟು ಸೈ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ನಟಿಸುತ್ತಲೇ ಪರಭಾಷೆಯಲ್ಲಿ ಜೈ ಎನಿಸಿಕೊಳ್ಳಲು ಮುಂದಾಗಿದ್ದಾರೆ. ಯುದ್ದಕಾಂಡದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು ವಕೀಲೆಯ ಪಾತ್ರ ಮಾಡಿದ್ದಾರೆ. ಮೈಥಾಲಜಿ ಚಿತ್ರದಲ್ಲಿ ನಟಿಸುವ ಕನಸು ಕಂಡಿದ್ದಾರೆ.
ರುಗ್ನ, ಲಾಂಗ್ ಡ್ರೈವ್ “ಮೆಲೋಡಿ ಡ್ರಾಮ”, ಯುದ್ದಕಾಂಡ, ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿ ಸುಪ್ರೀತಾ ಸತ್ಯನಾರಾಯಣ್ ನಟಿಸಿದ್ದಾರೆ.ಈ ನಡುವೆ ತೆಲುಗಿನ ಪಯಣಂ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ತೆಲುಗಿನ “ಒಂಟರಿ ಗುಲಾಬಿ” ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದೇನೆ ಈ ನಡುವೆ ಕನ್ನಡ, ತೆಲುಗು ಸೇರಿದಂತೆ ಅನೇಕ ಚಿತ್ರಗಳಿಂದ ಆಫರ್ ಬಂದಿವೆ. ಒಳ್ಳೆಯ ಕಥೆ, ಪಾತ್ರ ನೋಡಿಕೊಂಡು ಚಿತ್ರ ಆಯ್ಕೆ ಮಾಡಿಕೊಳ್ಳುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
• ಬಣ್ಣದ ಬದುಕಿಗೆ ಕಾಲಿಟ್ಟಿದ್ದು ಹೇಗೆ
ನನ್ನೂರು ಮೈಸೂರು. ಇಂಜಿನಿಯರಿಂಗ್ ಮುಗಿಸಿದ್ದೆ, ಇಂಟೆಲ್ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು.ಹೀಗಾಗಿ ಬೆಂಗಳೂರಿಗೆ ಬಂದೆ. ಒಂದೂವರೆ ವರ್ಷ ಕಂಪನಿಯಲ್ಲಿ ಕೆಲಸ ಮಾಡಿದೆ. ಮೊದಲಿನಿಂದ ಕಥೆ ಬರೆಯುವ ಗೀಳು ಇತ್ತು. ಸ್ನೇಹಿತರೊಬ್ಬರ ಮೂಲಕ ಕಲರ್ಸ್ ಕನ್ನಡದಲ್ಲಿ ಸ್ಕ್ರಿಪ್ಟ್ ರೈಟರ್‍ಗಳಿಗೆ ಅವಕಾಶ ಇದೆ ಎನ್ನುವ ಮಾಹಿತಿ ಸಿಕ್ಕಿತು. ಒಮ್ಮೆ ಪ್ರಯತ್ನ ಮಾಡೋಣ ಎಂದು ಚಾನೆಲ್‍ಗೆ ಭೇಟಿ ನೀಡಿ ಪರೀಕ್ಷೆ ಬರೆದೆ. ನಾನು ಬರೆಯುತ್ತಿದ್ದುದನ್ನು ನೋಡಿದ್ದ ಚಾನೆಲ್ ಮಂದಿ ಪರೀಕ್ಷೆ ಮುಗಿದು ಹೊರ ಬಂದಾಗ ನಟನೆಯಲ್ಲಿ ಆಸಕ್ತಿ ಇದೆಯಾ ನಟಿಸುತ್ತೀರಾ ಎಂದು ಕೇಳಿದರು.ಅದಕ್ಕೂ ಮುನ್ನ ಕ್ಯಾಮರ ಎದುರಿಸಿದ ಅನುಭವ ಇರಲಿಲ್ಲ. ಬಂದ ಅವಕಾಶ ಬಿಡಬಾರದು ಎನ್ನುವ ಕಾರಣಕ್ಕೆ ಒಕೆ ಮಾಡುತ್ತೇನೆ ಎಂದೆ. ಆಗ ಸಿಕ್ಕಿದ್ದೇ “ಸೀತಾ ವಲ್ಲಭ” ಧಾರಾವಾಹಿ.
• ಮೊದಲ ಧಾರಾವಾಹಿಯ ಅನುಭವ ಹಂಚಿಕೊಳ್ಳುವುದಾದರೆ.
ಧಾರಾವಾಹಿಯಲ್ಲಿ ನಟನೆ ಮಾಡುವ ಉದ್ದೇಶದಿಂದ ಮಾಡುತ್ತಿದ್ದ ಕೆಲಸ ಬಿಟ್ಟೆ. ಸೀತಾ ವಲ್ಲಭ ಧಾರಾವಾಹಿ ಮೊದಲ ಬಾರಿಗೆ ನಟನೆ ಮಾಡುತ್ತಿದ್ದರಿಂದ ಪ್ರತಿಯೊಂದು ವಿಷಯವನ್ನು ಕಲಿತುಕೊಂಡೆ, ಧಾರಾವಾಹಿ ತಂಡ ಕೂಡ ಕಲಿಕೆಗೆ ಅವಕಾಶ ಮಾಡಿಕೊಟ್ಟಿತು. ಹೀಗಾಗಿ ಮೊದಲ ಧಾರಾವಾಹಿ 550 ಎಪಿಸೋಡ್ ಪ್ರಸಾರವಾಗಲು ಕಾರಣವಾಯಿತು. ನನ್ನ ನಟನೆಗೆ ಮೆಚ್ಚುಗೆ ಕೂಡ ವ್ಯಕ್ತವಾಯಿತು. ಆ ಬಳಿಕ ಸರಸು ಧಾರಾವಾಹಿ ಮಾಡಿದೆ ಅದರೂ ಕೂಡ 250 ಎಪಿಸೋಡು ದಾಟಿತು. ಜೊತೆಗೆ ಸಿನಿಮಾಗಳಿಂದಲೂ ಅವಕಾಶ ಬರತೊಡಗಿದವು.
• ಯುದ್ದಕಾಂಡ ಚಿತ್ರದಲ್ಲಿ ನಿಮ್ಮ ಪಾತ್ರ ಏನು. ಚಿತ್ರೀಕರಣ ಯಾವ ಹಂತದಲ್ಲಿದೆ.
ನಟ ಅಜಯ್ ರಾವ್ ನಿರ್ಮಾಣ ಮತ್ತು ನಟನೆಯಲ್ಲಿ ಮೂಡಿ ಬರುತ್ತಿರುವ “ಯುದ್ದಕಾಂಡ” ಚಿತ್ರದಲ್ಲಿ ವಕೀಲೆಯ ಪಾತ್ರ ಮಾಡಿದ್ದೇನೆ. ಪ್ರಮುಖ ಪಾತ್ರ ಸಿಕ್ಕಿದೆ. ಬಹುತೇಕ ಚಿತ್ರೀಕರಣ ಮುಗಿದಿದೆ. ಬಾಕಿ ಚಿತ್ರೀಕರಣ ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ. ಅಜಯ್ ರಾವ್ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿರುವುದು ಖುಷಿ ಕೊಟ್ಟಿದೆ.ಚಿತ್ರದಲ್ಲಿ ಅರ್ಚನಾ ಜೋಯೀಸ್ ಕೂಡ ವಕೀಲೆಯ ಪಾತ್ರ ಮಾಡುತ್ತಿದ್ದಾಎಎ.
• ಮೆಲೋಡಿ ಡ್ರಾಮ ಚಿತ್ರದ ಬಗ್ಗೆ ಹೇಳುವುದಾದರೆ
ಮೆಲೋಡಿ ಡ್ರಾಮದಲ್ಲಿಯೂ ಪ್ರಮುಖ ಪಾತ್ರವಿದೆ. ಬ್ಯಾಂಕ್ ಉದ್ಯೋಗಿಯ ಪಾತ್ರ. ನಾಯಕಿಗೆ ಯಾವ ರೀತಿ ನೆರವಿಗೆ ನಿಲ್ಲುತ್ತಾಳೆ ಅಥವಾ ಇಲ್ಲವೇ ಎನ್ನುವ ಕುತೂಹಲ ಕಾರಿ ವಿಷಯವನ್ನು ಒಳಗೊಂಡಿದೆ. ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
• ತೆಲುಗು ಚಿತ್ರದಲ್ಲಿ ಅವಕಾಶ ಸಿಕ್ಕದು ಹೇಗೆ? ಪಾತ್ರ ಏನು?
ಕನ್ನಡದ ಕಾದಂಬರಿ “ನೀನು ನಿನ್ನೊಳಗೆ ಖೈದಿ” ಕಾದಂಬರಿ ಆಧಾರಿತ ಚಿತ್ರ. ಕನ್ನಡದವರೇ ಆದ ಕೀರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಇನ್ನುಳಿದಂತೆ ಎಲ್ಲರೂ ತೆಲುಗಿನವರು. ಒಮ್ಮ ಕಾದಂಬರಿ ಓದಲು ನಿರ್ದೇಶಕರು ಕೊಟ್ಟಿದ್ದರು. ಒದಿದೆ. ತುಂಬಾನೇ ಇಷ್ಟವಾಯಿತು. ಈ ರೀತಿಯ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸಬೇಕು ಎಂದುಕೊಂಡಿದ್ದೆ. ಒಂದ್ಟು ದಿನ ಆದ ಮೇಲೆ ಕಾಲ್ ಬಂತು ನೀವೇ ಆ ಪಾತ್ರ ಮಾಡಬೇಕು ಎಂದು. ಒಂದು ರೀತಿ ಖುಷಿಗೆ ಪಾರವೇ ಇರಲಿಲ್ಲ. ಅದವೇ “ಪಯಣಂ” ಚಿತ್ರ. ಚಿತ್ರದಲ್ಲಿ ವಿಜ್ಞಾನಿಯ ಮಗಳ ಪಾತ್ರ. ನಾನೂ ಕೂಡ ವಿಜ್ಞಾನಿ.
• ತೆಲುಗಿನಿಂದ ಬೇರೆ ಅವಕಾಶ ಬಂದಿದೆಯಾ
ತೆಲುಗು ಮಾತ್ರವಲ್ಲ ಕನ್ನಡದಿಂದಲೂ ಹೊಸ ಹೊಸ ಅವಕಾಶಗಳು ಬರುತ್ತಿವೆ. ಯಾವುದನ್ನು ತತ್ ಕ್ಷಣಕ್ಕೆ ಒಪ್ಪಿಕೊಳ್ಳುತ್ತಿಲ್ಲ. ಪಾತ್ರಕ್ಕಿರುವ ತೂಕ ಸೇರಿದಂತೆ ವಿವಿಧ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಆ ನಂತರ ನಿರ್ಧಾರ ಮಾಡುತ್ತೇನೆ. ನಾಯಕಿ ಅಲ್ಲದೆ ಎರಡನೇ ನಾಯಕಿ ಪಾತ್ರಕ್ಕೂ ಅವಕಾಶ ಬರುತ್ತಿವೆ. ನಾನು ಇನ್ನು ಒಪ್ಪಿಕೊಂಡಿಲ್ಲ. ಕನ್ನಡ ಮತ್ತು ತೆಲುಗಿನ ಧಾರಾವಾಹಿಯಲ್ಲಿಯೂ ಹೊಸ ಅವಕಾಶ ಬರುತ್ತಿವೆ.ಸದ್ಯ ತೆಲುಗಿನಲ್ಲಿ “ಒಂಟರಿ ಗುಲಾಬಿ” ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ,
• ಚಿತ್ರ ಒಪ್ಪಿಕೊಳ್ಳುವಾಗ ನಿಮ್ಮ ಮಾನದಂಡ ಏನು
ಚಿತ್ರತಂಡ ನನ್ನನ್ನು ಹೇಗೆ ಅಪ್ರೋಚ್ ಮಾಡುತ್ತದೆ ಎನ್ನುವುದನ್ನು ನೋಡುತ್ತೇನೆ. ನನ್ನ ಪಾತ್ರ. ಮತ್ತು ಚಿತ್ರದ ಕಥೆಯ ಬಗ್ಗೆ ಮಾಹಿತಿ ಪಡೆಯುತ್ತೇನೆ. ಕಥೆ ಮತ್ತು ನನ್ನ ಪಾತ್ರ ಇಷ್ಟವಾದರೆ ಚಿತ್ರದಲ್ಲಿ ನಟಿಸುತ್ತೇನೆ. ಇಲ್ಲದಿದ್ದರೆ ಇಲ್ಲ.
• ಯಾವ ರೀತಿಯ ಪಾತ್ರ ಮಾಡುವ ಆಸೆ ಇದೆ.
ಮೈಥಾಲಜಿ ಚಿತ್ರದಲ್ಲಿ ಪಾತ್ರ ಮಾಡುವ ಆಸೆ ಇದೆ. ಇಂತಹುದೆ ಅಂತ ಅಲ್ಲ. ಯಾವುದೇ ಪಾತ್ರ ಮಾಡಲು ಇಷ್ಟ. ಅದರಲ್ಲಿಯೂ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮಾಡುವ ಚಿತ್ರಗಳ ಮಾದರಿಯ ಚಿತ್ರಗಳಲ್ಲಿ ನಟಿಸುವ ಆಸೆ ಇದೆ.
• ಬಣ್ಣದ ಜಗತ್ತಿಗೆ ಬರದಿದ್ದರೆ ಏನು ಆಗುವ ಆಸೆ ಇತ್ತು
ಅಮ್ಮನಿಗೆ ಇಂಜಿನಿಯರಿಂಗ್ ಮಾಡುವ ಆಸೆ ಇತ್ತು. ಅದರಂತೆ ಇಂಜಿನಿಯರಿಂಗ್ ಮುಗಿಸಿದೆ. ಕೆಲಸಕ್ಕೂ ಸೇರಿದ್ದೆ.ನನಗೆ ಮಾತ್ರ ಮೆಡಿಕಲ್ ಓದುವ ಆಸೆ ಇತ್ತು. ಈಗ ನಟಿಯಾಗಿದ್ದೇನೆ. ಸಿಕ್ಕ ಪಾತ್ರಗಳಿಗೆ ಜೀವ ತುಂಬುವ ಕೆಲಸ ಮಾಡುತ್ತಿದ್ದೇನೆ.
• ಚಿತ್ರೀಕರಣಕ್ಕೆ ದಿನಾಂಕದ ಹೊಂದಾಣಿಗೆ ಹೇಗೆ ಮಾಡುತ್ತೀರಾ
ಧಾರಾವಾಹಿಯಲ್ಲಿ ನಟಿಸುವಾಗ ಮೊದಲೇ ದಿನಾಂಕ ಕೊಟ್ಟಿರುತ್ತಾರೆ. ಅದರ ಆದಾರದ ಮೇಲೆ ಬೇರೆ ಧಾರಾವಾಹಿ ಇಲ್ಲವೆ ಸಿನಿಮಾಗಳಲ್ಲಿ ಉಳಿಕೆ ದಿನಾಂಕದ ಹೊಂದಾಣಿಕೆ ಮಾಡಿಕೊಂಡು ನಟಿಸುತ್ತೇನೆ’
• ಗ್ಲಾಮರ್ ಪಾತ್ರ ಮಾಡಲು ನೀವು ರೆಡಿನಾ?
ಇಲ್ಲ. ಮೊದಲು ಕಥೆಯ ಬಗ್ಗೆ ಚರ್ಚೆ ಮಾಡಿದಾಗ ಒಂದು ಪಾತ್ರ ಹೇಗೆ ಸಾಗಲಿದೆ ಎನ್ನುವ ಐಡಿಯಾ ಬರಲಿದೆ. ಬಳಿಕ ನನ್ನ ಪ್ರಶ್ನೆ ಕಾಸ್ಟೂಮ್, ಸನ್ನಿವೇಶಗ ಬಗ್ಗೆ ಮುಂಚೆಯೇ ಮಾಹಿತಿ ಪಡೆಯುತ್ತೇನೆ. ಬೋಲ್ಡ್ ಪಾತ್ರ ಮಾಡಲು ಕಂಡಿತಾ ಇಷ್ಟವಿಲ್ಲ. ಒಂದು ವೇಳೆ ಪಾತ್ರ ಸವಾಲಿನಿಂದ ಕೂಡಿದ್ದರೂ ಕೂಡ. ಪಾತ್ರವನ್ನು ನಿರ್ದೇಶಕರು ಯಾವ ರೀತಿ ತೋರಿಸುತ್ತಾರೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಪ್ರೇಕ್ಷಕರಿಗೆ ಫೀಲ್ ಕೊಡಲು ನಾನಾ ಅವಕಾಶವಿದೆ. ಕೇವಲ ಕಣ್ಣಲ್ಲಿಯೂ ಕೂಡ ತೋರಿಸಬಹುದು, ಎಲ್ಲವೂ ನಿರ್ದೇಶಕರ ಮೇಲೆ ಅವಲಂಬಿತವಾಗಿರುತ್ತದೆ. ಬೋಲ್ಡ್ ಪಾತ್ರ ಮಾಡಬೇಕು ಬೇಡ, ಅಥವಾ ತಪ್ಪು, ಸರಿ ಅಂತ ಹೇಳುತ್ತಿಲ್ಲ. ಬೋಲ್ಡ್ ಪಾತ್ರದಲ್ಲಿ ನಂಬಿಕೆ ಇಲ್ಲ, ನಾನು ಭಾವನೆಗಳ ಮೇಲೆ ಹಚ್ಚು ನಂಬಿಕೆ ಇಡುತ್ತೇನೆ. ಅದಕ್ಕೆ ಏನು ಬೇಕೋ ಅದನ್ನು ಮಾಡಿದರೆ ಬೋಲ್ಡ್ ಆಗಿ ತೋರಿಸಬೇಕು ಎನ್ನುವ ಅವಶ್ಯಕತೆ ಇಲ್ಲ.
• ಬೋಲ್ಡ್ ಪಾತ್ರದಲ್ಲಿ ನಟಿಸುವರ ಬಗ್ಗೆ ನಿಮ್ಮ ಅಭಿಪ್ರಾಯ
ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಸರಿ ತಪ್ಪು ಅಂತ ಹೇಳುವುದಿಲ್ಲ. ತೋರಿಸುವುದ ತಪ್ಪು ಎಂದು ಹೇಳುತ್ತಿ. ಯಾರಿಗೆ ಇಷ್ಟ ಇದೆಯೋ ಅವರು ಮಾಡ್ತಾರೆ. ಇಷ್ಟ ಇಲ್ಲದವರು ಅಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬೋಲ್ಡ್ ಪಾತ್ರ ಮಾಡುವುದು ಅವರವರಿಗೆ ಬಿಟ್ಟದ್ದು. ಈ ರೀತಿಯ ಪಾತ್ರ ನನಗೆ ಕಂಫರ್ಟ್ ಆಗುವುದಿಲ್ಲ.
• ಸಾಂಪ್ರದಾಯಿಕ ಕುಟಂಬದಿಂದ ಬಂದವರಾ ನೀವು?
ತುಂಬಾ ಸಂಪ್ರದಾಯವಾದಿಯೂ ಅಲ್ಲ, ಮಾಡರೇಟ್. ಕುಟುಂಬ ನನಗೆ ತುಂಬಾನೇ ಸಹಕಾರ ನೀಡಿದ್ದಾರೆ. ಅಮ್ಮ,ಅಣ್ಣನ ಸಹಕಾರ ಎಂದಿಗೂ ಮರೆಯಲಾಗದು. ನಾನು ನನ್ನೊಳಗೆ ಗೆರೆ ಹಾಕಿಕೊಂಡು ನನ್ನದೇ ಆದ ಪ್ರಿನ್ಸಿಪಲ್ ನಲ್ಲಿ ಬದುಕುತ್ತಿದ್ದೇನೆ.
• ಹಾಡಿನಲ್ಲಿ ಟೀ ಪೀಸ್ ಹಾಕುತ್ತೀರಾ? ಅಥವಾ ಈ ರೀತಿಯ ಪಾತ್ರದ ಬಗ್ಗೆ ಹೇಳುವುದಾದರೆ
ಸಿನಿಮಾ ಹೆಸರೇಳಲ್ಲ. ಆ ಸಿನಿಮಾದಲ್ಲಿ ಈ ರೀತಿ ಮಾಡಬೇಕು ಅಂದರು.ಈ ರೀತಿಯ ಪಾತ್ರ ಮಾಡುವುದಿಲ್ಲ ಎಂದು ಕಡ್ಡಿ ಮುರಿದ ಹಾಗೆ ಚಿತ್ರತಂಡಕ್ಕೆ ಹೇಳಿದೆ. ಮೊದಲೇ ದಿನವೇ ಚರ್ಚೆ ಮಾಡುತ್ತೇನೆ. ಆಗಲೇ ಹೇಳಿ ಬಿಡುತ್ತೇನೆ. ಈ ರೀತಿಯ ಪಾತ್ರ ಇದ್ದರೆ ಮಾಡುವುದಿಲ್ಲ ಎಂದು. ಈ ವಿಷಯದಲ್ಲಿ ನಾನು ನೇರಾ ನೇರ.. ಸಿನಿಮಾ ಒಪ್ಪಿಕೊಳ್ಳುವ ಮುನ್ನ ಒಪ್ಪಂದಕ್ಕೆ ಸಹಿ ಮಾಡುವೆ.
• ಈ ರೀತಿಯ ನಿಮ್ಮ ನಿರ್ಧಾರದಿಂದ ಅವಕಾಶ ಮಿಸ್ ಆಗಿರುವುದು ಉಂಟಾ?
ಪಾತ್ರ ನಮಗೆ ಇಷ್ಟವಾಗದಿದ್ದರೆ. ನನಗೆ ಪಾತ್ರ ಮಿಸ್ ಆಗಿದೆ ಅಂತ ನನಗೆ ಅನ್ನಿಸುವುದಿಲ್ಲ. ಆ ರೀತಿಯ ಯಾವುದೇ ಫೀಲಿಂಗ್ ಕೂಡ ಬಂದಿಲ್ಲ. ನನಗೆ ಯಾವುದು ಇಷ್ಟವಾಗುತ್ತೋ ಆ ರೀತಿಯ ಪಾತ್ರ ಮಾಡುತ್ತೇನೆ. ಇಷ್ಟವಿಲ್ಲದ ಪಾತ್ರವನ್ನು ಯಾವುದೇ ಕಾರಣಕ್ಕೂ ಮಾಡುವುದಿಲ್ಲ.