ಗೊಬ್ಬರ ಹಾಕಿದ ಹೊಲ, ಅನ್ನ ನೀಡಿದ ಮನೆ ಯಾವತ್ತೂ ಸಂವೃದ್ಧ : ದುನಿಯಾ ವಿಜಯ್
“ ಅನ್ನ ಹಾಕಿದ ಮನೆ ಗೊಬ್ಬರ ಹಾಕಿ ಹೊಲ ಯಾವತ್ತೂ ಕೆಡಲ್ಲ…..” 50 ವರ್ಷದ ಜೀವನದಲ್ಲಿ ಇದನ್ನು ಕಂಡುಕೊಂಡಿದ್ದೇನೆ. ಇದು ತಂದೆ ತಾಯಿಯಿಂದ ಬಂದ ಗುಣ.ಅಪ್ಪ ಅಮ್ಮನ ಋಣ ಜೀವನ ತೀರಿಸಲು ಆಗದು. ನನ್ನ ಪಾಲಿನ ದೇವರು ಎಂದರು ನಟ, ನಿರ್ದೇಶಕ ದುನಿಯಾ ವಿಜಯ್.
ನಾಳೆ ಇದೇ 19 ರಂದು ಹುಟ್ಟೂರು ಕುಂಬಾರಹಳ್ಳಿಯಲ್ಲಿ ತಂದೆ-ತಾಯಿ ಇರುವ ಪುಣ್ಯಭೂಮಿಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ದುನಿಯಾ ವಿಜಯ್ ಹೇಳಿದ ಮಾತು ಅಕ್ಷರಷಃ ವಾಸ್ತವಕ್ಕೆ ಕೈಕನ್ನಡಿ ಹಿಡಿದಂತಿತ್ತು.
ಹುಟ್ಟಿದ ಊರು, ತಂದೆ,ತಾಯಿ ಬೆಳದುಬಂದ ಬಗೆ,ಚಿತ್ರರಂಗದಲ್ಲಿ ಸವೆಸಿದ ಹಾದಿ, ಪಾತ್ರಗಳಿಗಾಗಿ ಅಲೆದಾಟ, ಪರದಾಟ,ಯಶಸ್ಸು ಪಡೆಯಲು ಪಟ್ಟ ಕಷ್ಟ, “ದುನಿಯಾ” ಚಿತ್ರ ನಿರ್ಮಾಣ ಮಾಡುವಾಗ ಊರಲ್ಲಿ ತಾತ ಕೊಟ್ಟಿದ್ದ ಜಾಗ ಮಾರಿದ್ದು , ಚಿತ್ರ ಯಶಸ್ವಿ ಆದ ನಂತರೂ ಐದಾರು ವರ್ಷಗಳು ಸಿನಿಮಾ ಸಿಗದೇ ಇರುವುದು, ಮಕ್ಕಳ ಭವಿಷ್ಯ ,ಮುಂಬರುವ ಚಿತ್ರಗಳು ಸೇರಿದಂತೆ ಹಲವು ವಿಷಯಗಳನ್ನು ತಾವೊಬ್ಬ ಸ್ಟಾರ್ ನಟ ಎನ್ನುವ ಹಮ್ಮು ಬಿಮ್ಮು ಬಿಗುಮಾನವನ್ನು ಪಕ್ಕಕ್ಕಿಟ್ಟು ಮುಕ್ತವಾಗಿ ಹಂಚಿಕೊಂಡರು.
ಜೀವನದಲ್ಲಿ ಅನೇಕ ಏಳು ಬೀಳು ಕಂಡಿದ್ದೇನೆ. ಕಷ್ಟು ಸುಖ ನೋಡಿದ್ದೇನೆ .ಎಷ್ಟೇ ಎತ್ತರಕ್ಕೆ ಬೆಳೆದರೂ ಬೆಳೆದ ಬಂದ ದಾರಿ ಮರಿ ಬೇಡ ಎನ್ನುವುದು ಅಪ್ಪ, ಅಮ್ಮ ಹೇಳಿಕೊಟ್ಟದ್ದು ಅದನ್ನು ಪಾಲಿಸುತ್ತಿದ್ದೇನೆ. ತಂದೆ ತಾಯಿ ಮಣ್ಣಲ್ಲಿ ಮಣ್ಣಾಗಿರುವ ಜಾಗದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ನಿಜವಾದ ಗೌರವ ಕೊಡುವ ಉದ್ದೇಶ ಎಂದರು.
ಚಿತ್ರರಂಗದಲ್ಲಿ ಒಂದು ಈ ಮಟ್ಟಕ್ಕೆ ಬೆಳಯಲು ತಂದೆ ತಾಯಿಯ ಆಶೀರ್ವಾದ ಮತ್ತು ಅಭಿಮಾನಿಗಳೂ ಕಾರಣ. ಆರಂಭದಲ್ಲಿ ಕಷ್ಟಪಟ್ಟಿದ್ದೇನೆ. ನೋವು ತಿಂದಿದ್ದೇನೆ. ವೃತ್ತಿ ಮತ್ತು ವಯಕ್ತಿಯ ಜೀವನದಲ್ಲಿ ಏರುಪೇರು ಕಂಡಿದ್ದೇನೆ. ಕೆಲವರು ಕೊಡಬಾರದ ಕಷ್ಟ ಕೊಟ್ಟಿದ್ದಾರೆ. ಎಲ್ಲವನ್ನೂ ಸಹಿಸಿಕೊಂಡು ಈ ಮಟ್ಟಕ್ಕೆ ಬೆಳೆದಿದ್ದೇನೆ. ಯಾರೇ ಏನೇ ಮಾಡಿ ಅಡ್ಡಿ ಪಡಿಸಿದರೂ ದೇವರು ಇದ್ದಾನೆ, ಅವನು ನೋಡಿಕೊಳ್ಳುತ್ತಾನೆ ಎನ್ನುವ ನಂಬಿಕೆ ಇತ್ತು. ಅದು ಸತ್ಯವಾಗಿದೆ. ಮುಂದೆ ಒಳ್ಳೆಯ ಚಿತ್ರಗಳನ್ನು ನೀಡಿ ಅಭಿಮಾನಿಗಳನ್ನು ರಂಜಿಸುವುದು ನಮ್ಮ ಉದ್ದೇಶ ಎಂದು ಹೇಳಿಕೊಂಡರು ದುನಿಯಾ ವಿಜಯ್.
ಭೀಮ ನೈಜ ಘಟನೆ ಆಧರಿತ ಚಿತ್ರ:
“ಭೀಮ” ನೈಜ ಘಟನೆ ಆಧರಿಸಿ ಮಾಡಿದ ಚಿತ್ರ ಎಲ್ಲಾ ಅಂದುಕೊಂಡಂತೆ ಆದರೆ ಫೆಬ್ರವರಿ ಅಂತ್ಯದಲ್ಲಿ ತೆರೆಗೆ ತರುವ ಉದ್ದೇಶ ಉದ್ದೇಶವಿದೆ.ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರದ ಟೀಸರ್ ಬಿಡುಡಗೆ ಮಾಡಲಾಗಿದೆ. ಚಿತ್ರದ ಮೂಲಕ ನೈಜ ನಟನೆಯನ್ನು ತೆರೆಗೆ ತರುವದ್ದೇಶ ಹೊಂದಲಾಗಿದೆ. ಚಿತ್ರ ನೋಡಿದ ಮಂದಿ ಇಷ್ಟಪಟ್ಟರೆ ಅದರಿಂದ ಒಂದಷ್ಟು ಮಂದಿಗೆ ಒಳ್ಳೆಯದಾದರೆ ನಮ್ಮ ಶ್ರಮ ಸಾರ್ಥಕ ಎಂದರು ದುನಿಯಾ ವಿಜಯ್.
ನಿರ್ದೇಶಕನಾಗಿ ಖುಷಿಪಟ್ಟಿದ್ದೇನೆ
ನಟನಾಗಿ ಕೆಲಸ ಮಾಡುವಾಗ ನಿರ್ಮಾಪಕ, ನಿರ್ದೇಶಕರ ಅಣತಿಯಂತೆ ಅಣತಿಯಂತೆ ಕೆಲಸ ಮಾಡಬೇಕು. ನಿರ್ದೇಶಕನ ಜವಾಬ್ದಾರಿ ಪ್ರೀತಿ,ಖುಷಿಯಿಂದ ಮಾಡಿದ್ದೇನೆ. ಅಂತಹ ಚಿತ್ರ ಭೀಮ. ಇನ್ನೂ ಒಂದಷ್ಟು ಸಣ್ಣ ಪುಟ್ಟ ಕೆಲಸಗಳಿವೆ.ದಿನಾಂಕ ನೋಡಿಕೊಂಡು ಬಿಡುಗಡೆ ಮಾಡುವ ಉದ್ದೇಶವಿದೆ. ಸದ್ಯಕ್ಕೆ ಭೀಮ ಮುಗಿಸಿದ ಬಳಿಕ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಾಗುವುದು ಎಂದರು ದುನಿಯಾ ವಿಜಯ್.