Interview: It is the duty of an artist to act according to the story and character: Actress Kashima Rafi

Interview : ಕತೆ, ಪಾತ್ರಕ್ಕೆ ತಕ್ಕಂತೆ ನಟಿಸುವುದು ಕಲಾವಿದರ ಕರ್ತವ್ಯ: ನಟಿ ಕಾಶಿಮಾ ರಫಿ - CineNewsKannada.com

Interview : ಕತೆ, ಪಾತ್ರಕ್ಕೆ ತಕ್ಕಂತೆ ನಟಿಸುವುದು ಕಲಾವಿದರ ಕರ್ತವ್ಯ: ನಟಿ ಕಾಶಿಮಾ ರಫಿ

ಕನ್ನಡಲ್ಲಿ ಪ್ರತಿಭಾನ್ವಿತರ ಕಲಾವಿದರು ಮತ್ತು ನಾಯಕ, ನಾಯಕಿಯರ ದಂಡು ಇದೆ, ಅದನ್ನು ಹೆಕ್ಕಿ ತೆಗೆಯುವ ಕೆಲಸ ಆಗಾಗ ಆಗುತ್ತದೆ, ಆ ರೀತಿಯ ಪ್ರಯತ್ನ ಹಾಗೊಮ್ಮೆ ಹೀಗೊಮ್ಮೆ ಆಗುತ್ತಿದೆ. ಆ ರೀತಿಯ ಪ್ರಯತ್ನ “ ನೀ ನಂಗೆ ಅಲ್ಲವಾ”.

#KashimaRafi

ನಟ ಶ್ರೀಮುರಳಿ ಹಾಗೂ ವಿದ್ಯಾ ಶ್ರೀಮುರಳಿ ಅವರು ಅರ್ಪಿಸುತ್ತಿರುವ “ ನೀ ನಂಗೆ ಅಲ್ಲವಾ”. ಚಿತ್ರವನ್ನು ಎಸ್ ಪಾರ್ವತಿ ಗೌಡ, ಪವನ್ ಪರಮಶಿವಂ ಹಾಗೂ ಮನೋಹರ್ ಕಾಂಪಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಮನೋಜ್ ಪಿ ನಡಲುಮನೆ ನಿರ್ದೇಶನದ ಚಿತ್ರದಲ್ಲಿ ರಾಹುಲ್ ಅರ್ಕಾಟ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು ಕಾಶಿಮಾ ರಫಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಸೌಥ್ ಇಂಡಿಯನ್ ಹಿರೋ ಚಿತ್ರದಲ್ಲಿ ಬಿಂದಾಸ್ ಆಗಿ ನಟಿಸಿ ಗಮನ ಸೆಳೆದಿದ್ದ ನಟಿ ಕಾಶಿಮಾ ರಫಿ, ಟೆಂಪರ್ ಚಿತ್ರದ ಮೂಲಕ ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ನಿರೂಪಿಸಿದ್ದರು ಇದೀಗ “ ನೀ ನಂಗೆ ಅಲ್ಲವಾ” ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

• “ ನೀ ನಂಗೆ ಅಲ್ಲವಾ’ ಚಿತ್ರಕ್ಕೆ ಆಯ್ಕೆಯಾಗಿದ್ದು ಹೇಗೆ, ಯಾವಾಗಿನಿಂದ ಚಿತ್ರೀಕರಣ

ಚಿತ್ರದಲ್ಲಿ ರಾಹುಲ್ ಆರ್ಕಾಟ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ನಿರ್ದೇಶಕ ಮನೋಜ್ ಪಿ ನಡುವಲಮನೆ ಅವರು ನನ್ನ ಪೆÇ್ರೀಫೈಲ್ ನೋಡಿ ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ. ಚಿತ್ರದಲ್ಲಿ ಒಳ್ಳೆಯ ಪಾತ್ರವಿದೆ, ನಟಿಸಲು ಎದುರು ನೋಡುತ್ತಿದ್ದೇನೆ. ಎಲ್ಲಾ ಅಂದುಕೊಂಡಂತೆ ಅದರೆ ಫೆಬ್ರವರಿಯಿಂದ ಚಿತ್ರೀಕರಣ ಆರಂಭವಾಗುವ ನಿರೀಕ್ಷೆ ಇದೆ.

#KashimaRafi

• ನಿಮ್ಮ ಪಾತ್ರ ಏನು. ಚಿತ್ರ ಒಪ್ಪಿಕೊಳ್ಳಲು ಕಾರಣ ಏನು

ಚಿತ್ರದ ಕಥೆ ಇಷ್ಟವಾಯಿತು. ಫ್ಯಾಮಿಲಿ ಡ್ರಾಮ ಜೊತೆಗೆ ಲವ್ ಸ್ಟೋರಿ ಕೂಡ ಇದೆ. ಜೊತೆಗೆ ಈ ಸಿನಿಮಾದಲ್ಲಿ ಕಂಟೆಂಟ್, ಒಳ್ಳೆಯ ಸಂದೇಶವೂ ಇದೆ. ಪಾತ್ರ ಇಷ್ಟ ಆಯ್ತು. ನನ್ನ ಹಿಂದಿನ ಚಿತ್ರಗಳಿಗಿಂತ ಈ ಸಿನಿಮಾ ಬೇರೆ ಲೆವೆಲ್‍ನಲ್ಲಿಯೇ ಇರಲಿದೆದೆ. ಈ ಸಿನಿಮಾದಲ್ಲಿ ನನ್ನನ್ನು ತೋರಿಸುವ ರೀತಿಯೂ ಬೇರೆಯಾಗಿರುತ್ತದೆ. ಆ ಭರವಸೆಯೂ ನನ್ನಲ್ಲಿದೆ. ಚಿತ್ರತಂಡ ಹೇಳಿದಾಗ ಕಥೆ ಕೇಳಿದ ತಕ್ಷಣ ಇಲ್ಲ ಎನ್ನಲು ಅವಕಾಶ ಇರಲಿಲ್ಲ ಹೀಗಾಗಿ ಚಿತ್ರ ಒಪ್ಪಿಕೊಂಡೆ.

ಚಿತ್ರದಲ್ಲಿ ನಟಿಸಲು ನೀವೆಷ್ಟು ಕಾತುರದಿಂದ ಇದ್ದೀರಾ

ಚಿತ್ರದಲ್ಲಿ ಬೇರೆ ರೀತಿ ತೋರಿಸುತ್ತಾರೆ ಎನ್ನುವ ನಂಬಿಕೆ ಇದೆ. ಚಿತ್ರದಲ್ಲಿ ಪಾಸಿಟೀವ್ ರೀತಿಯಲ್ಲಿ ತೋರಿಸುತ್ತಾರೆ ಎನ್ನುವ ನಂಬಿಕೆ ಇದೆ. ಜೊತೆಗೆ ಲುಕ್ ವಿಭಿನ್ನವಾಗಿರುತ್ತದೆ. ಹೀಗಾಗಿ ಚಿತ್ರದಲ್ಲಿ ನಟಿಸಲು ಕಾತುರದಿಂದ ಎದುರು ನೋಡುತ್ತಿದ್ದೇನೆ

• ಯಾವ ರೀತಿ ಪಾತ್ರ ಮಾಡುವ ಆಸೆ ಇದೆ

ಕಮರ್ಷಿಯಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ. “ ನೀ ನಂಗೆ ಅಲ್ಲವಾ’ ಚಿತ್ರ ಕೂಡ ಕಮರ್ಷಿಯಲ್ ಸಿನಿಮಾ, ಹೀಗಾಗಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಜೊತೆಗೆ ಬಬ್ಲಿ ಬಬ್ಲಿಯಾಗಿ ಕಾಣಿಸಿಕೊಳ್ಳುವ ಆಸೆ ಇದೆ.

• ಯಾವ ನಟರ ಜೊತೆ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕೆಂಬ ಹಂಬಲವಿದೆ

“ ನೀ ನಂಗೆ ಅಲ್ಲವಾ’ ಚಿತ್ರವನ್ನು ನಟ ಶ್ರೀಮುರುಳಿ ಅವರು ಅರ್ಪಿಸುತ್ತಿದ್ದಾರೆ. ಮುಂದೊಂದು ದಿನ ಅವರ ಜೊತೆ ನಟಿಸುವ ಆಸೆ ಇದೆ. ಆ ದಿನಕ್ಕಾಗಿ ಎದುರು ನೋಡುತ್ತಿರುವೆ

#KashimaRafi

• ಬೋಲ್ಡ್ ಪಾತ್ರದ ಬಗ್ಗೆ ನಿಮ್ಮ ಅಭಿಪ್ರಾಯ ಏನು

ಸಿನಿಮಾ ಮತ್ತು ಕಥೆಗೆ ಯಾವ ರೀತಿ ಬೇಕೋ ಆ ರೀತಿ ನಟಿಸುವುದು ಕಲಾವಿದರಾದವರ ಕರ್ತವ್ಯ. ಅದರಲ್ಲಿ ನಂಬಿಕೆ ಮತ್ತು ಶ್ರದ್ದೆ ಇಟ್ಟವಳು. ಯಾವ ಪಾತ್ರ ಮಾಡುತ್ತಿದ್ದೇನೆಎನ್ನುವುದು ಮುಖ್ಯವಾಗಲ್ಲ. ಸಿನಿಮಾಗಳಲ್ಲಿ ನನ್ನ ಪಾತ್ರ, ಕಥೆ ಹೇಗಿರುತ್ತದೆ ಎನ್ನುವುದು ಮುಖ್ಯ. ಕಥೆ ಮತ್ತು ಪಾತ್ರಕ್ಕೆ ತಕ್ಕಂತೆ ನಟಿಸುವುದು ನನ್ನ ಗುರಿ. ಯಾವುದೇ ಪಾತ್ರ ಕಥೆ ಮತ್ತು ಪಾತ್ರದ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ ನಟಿ ಕಾಶಿಮಾ ರಫಿ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin