ಲೈಟ್‍ಬಾಯ್‍ನಿಂದ ನಿರ್ದೇಶಕನಾಗಿ ಬಡ್ತಿ : ಕಿರುತೆರೆಯಿಂದ ಸಿನಿಮಾಗೂ ಆಕ್ಷನ್ ಕಟ್
ಲೈಟ್ ಬಾಯ್ ಆಗಿ ಚಿತ್ರರಂಗದಲ್ಲಿ ಕೆಲಸ ಆರಂಬಿಸಿದ ಶಂಕರ್ ಕೋನಮಾನಹಳ್ಳಿ ಒಂದೊಂದೇ ಹಂತವನ್ನು ದಾಟಿ ನಿರ್ದೇಶಕರಾಗಿದ್ದಾರೆ. ಮೊದಲ ಚಿತ್ರ “ ಶಂಭೋ ಶಿವ ಶಂಕರ” ತೆರೆಗೆ ಬಂದಿದ್ದು ಚಿತ್ರರಂಗದಲ್ಲಿ ಗಮನ ಸೆಳೆದಿದೆ. ಇದರ ಬೆನ್ನಲ್ಲೇ ರಾಗಿಣಿ ನಟನೆಯ “ಬಿಂಗೋ” ಹಾಗು ಮತ್ತೊಂದು ಸಿನಿಮಾ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ.
ಕನಕಪುರ ತಾಲೂಕಿನ ಕೋನಮಾನಹಳ್ಳಿಯ ಚಿಕ್ಕ ಗ್ರಾಮದಿಂದ ಬಂದ ಹುಡುಗ ಹಂತ ಹಂತವಾಗಿ ತನ್ನ ಪ್ರತಿಭೆ ಮತ್ತು ಸಾಮಥ್ರ್ಯದಿಂದ ಚಿತ್ರರಂಗದಲ್ಲಿ ನಿರ್ದೇಶಕನಾಗಿದ್ದು ದೊಡ್ಡ ಸಾಧನೆ ಮಾಡುವ ಕನಸು ಕಟ್ಟಿಕೊಂಡಿದ್ದಾರೆ.
ಚಿಕ್ಕ ವಯಸ್ಸಿನಿಂದಲೇ ಸಿನಿಮಾ ರಂಗದ ಬಗ್ಗೆ ಆಸಕ್ತಿ ಮತ್ತೆ ಸೆಳೆತ ಇದ್ದುದರಿಂದಲೇ ಓದು ಮುಗಿದ ನಂತರ ಬೆಂಗಳೂರಿಗೆ ಬಂದು ಲೈಟ್ ಬಾಯ್ ಆಗಿ ಕೆಲಸಕ್ಕೆ ಸೇರಿ ಬಣ್ಣದ ಬದುಕಿನಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾಗುತ್ತಾರೆ. ಲೈಟ್ ಬಾಯ್ ಆಗಿ ಆರು ತಿಂಗಳ ಕೆಲಸ ಮಾಡಿದ ನಂತರ ಗುಪ್ತಗಾಮಿ ಧಾರಾವಾಹಿ ಸಹಾಯಕ ನಿರ್ದೇಶಕರಾಗಿ ಆರೂರು ಜಗದೀಶ್ ಕೆಲಸ ಮಾಡುವ ಅವಕಾಶ. ಅಲ್ಲಿಂದ ಒಂದೊಂದೆ ಮೆಟ್ಟಿಲು ಹತ್ತಿ ಚಿತ್ರರಂಗದ ಭರವಸೆ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.
ಧಾರಾವಾಹಿಯಲ್ಲಿ ¸ ಮೂರು ವರ್ಷಗಳ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಶಂಕರ್ ಕೋನಮಾನಹಳ್ಳಿ, ಗಾಳಿಪಟ ಧಾರಾವಾಹಿಗೆ ನಿರ್ದೇಶಕರಾಗಿ ಬಡ್ತಿ ಪಡೆದು ಅಲ್ಲಿಂದ .ಸುಮಾರು ಐದು ಧಾರಾವಾಹಿಗಳ ನಿರ್ದೇಶನ ಮಾಡಿ ಸೈನಿಸಿಕೊಳ್ಳುತ್ತಾರೆ .
ಲಾಕ್ ಡೌನ್ ಸಮಯದಲ್ಲಿ ಧಾರಾವಾಹಿ ಚಿತ್ರೀಕರಣ ನಿಲ್ಲಿಸಿದ ಸಮಯಲ್ಲಿ ಚೊಚ್ಚಲ ಬಾರಿಗೆ “ ಶಂಬೋ ಶಿವ ಶಂಕರ “ ಸಿನಿಮಾ ನಿರ್ದೇಶನ ಮಾಡಿ ಅದರಲ್ಲಿ ಗಮನ ಸೆಳೆದಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ “ಶಂಭು ಶಿವಶಂಕರ” ಚಿತ್ರ ತೆರೆಗೆ ಬಂದು ಗಮನ ಸೆಳೆದಿದ್ದು ಶಂಕರ್ ಕೋನಮಾನಹಳ್ಳಿಯ ಪ್ರತಿಭೆಗೆ ಕನ್ನಡಿ ಹಿಡಿದಿದೆ.
ಮೊದಲ ಸಿನಿಮಾದಲ್ಲಿ ಸುಪ್ರೀಂ ಹೀರೋ ಶಶಿಕುಮಾರ್. ಸೋನಾಲ್ ಮಾಂಟೇರೋ ಸೇರಿದಂತೆ ಹಿರಿ ಕಿರಿಯ ಕಲಾವಿರದನ್ನು ಹಾಕಿಕೊಂಡು ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ
ಶಂಭೋ ಶಿವಶಂಕರ ಸಿನಿಮಾದ ಮೇಕಿಂಗ್ ಮತ್ತು ನಿರ್ದೇಶನದಲ್ಲಿ ನಿರ್ದೇಶಕರಿಗೆ ಒಳ್ಳೆಯ ಹೆಸರು ಬರುತ್ತದೆ ಶಂಕರ್ ಕೋನಮಾನಹಳ್ಳಿಯ ಎರಡನೇ ಸಿನಿಮಾ ಬಿಂಗೊ ಸಿನಿಮಾ ನಿರ್ದೇಶನ ಮಾಡುತ್ತಿದ್ದು ಆ ಚಿತ್ರದಲ್ಲಿ ರಾಗಿಣಿ ತ್ರಿವೇದಿ ಆರ್ ಕೆ ಚಂದನ್ ನಟಿಸುತ್ತಿದ್ದಾರೆ ಈ ಸಿನಿಮಾ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ.
ಇನ್ನು ತಮ್ಮದೇ ಓನ್ ಬ್ಯಾನರ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ ಆ ಚಿತ್ರ ಈಗಾಗಲೇ ಮುಗಿದಿದ್ದು ಸದ್ಯದಲ್ಲೇ ಚಿತ್ರದ ಟೈಟಲ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ ಅವರು ಮುಂದೆ ಸ್ಟಾರ್ ನಟರಿಗೆ ಚಿತ್ರ ಮಾಡಲು ಆಸೆ ಇರುವುದರಿಂದ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.
ಚಿತ್ರರಂಗದಲ್ಲಿ ಒಳ್ಳೆಯ ಚಿತ್ರಗಳನ್ನು ನೀಡುವ ಮೂಲಕ ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆಯಬೇಕು ಎನ್ನುವ ಕನಸು ಕಟ್ಟಿಕೊಂಡಿದ್ದಾರೆ ಶಂಕರ್ ಕೋನಮಾನಹಳ್ಳಿ.