Mother Teresa story in 30 crore budget web series...

30 ಕೋಟಿ ಬಜೆಟ್ ವೆಬ್ ಸರಣಿಯಲ್ಲಿ ಮದರ್ ತೆರೇಸಾ ಕಥೆ…. - CineNewsKannada.com

30 ಕೋಟಿ ಬಜೆಟ್ ವೆಬ್ ಸರಣಿಯಲ್ಲಿ ಮದರ್ ತೆರೇಸಾ ಕಥೆ….

ಬಡವರು ಹಾಗೂ ದೀನದಲಿತರ ಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಮಹಿಳೆ, ಪದ್ಮಶ್ರೀ ಪುರಸ್ಕೃತೆ, ಶಾಂತಿಗಾಗಿ ನೋಬೆಲ್ ಪ್ರಶಸ್ತಿ ಪಡೆದ ಮದರ್ ತೆರೇಸಾ ಅವರ ಜೀವನ ಚರಿತ್ರೆ ಇದೀಗ ವೆಬ್ ಸರಣಿಯಲ್ಲಿ ಮೂಡಿಬರಲಿದೆ. ಸಾಹಿತಿ, ಚಿತ್ರಕಥೆಗಾರ ದಿ. ಜಾನ್ ಪಾಲ್ ಪುತ್ತುಸ್ಸೆರಿ, ಹಾಗೂ ನಿರ್ದೇಶಕ ಪಿ. ಚಂದ್ರಕುಮಾರ್ ಸೇರಿ ಮೂರು ವರ್ಷಗಳಿಂದ ಇವರ ಬಗ್ಗೆ ಮಾಹಿತಿ ಕಲೆಹಾಕಿ ಈ ಸೀರೀಸ್ ಮಾಡುತ್ತಿದ್ದಾರೆ.

ಈಗಾಗಲೇ ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಹೆಸರುವ ಮಾಡಿರುವ ಚಂದ್ರಶೇಖರ್ ಅವರು ಹಿಂದಿ. ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ತಯಾರಾಗಲಿರುವ ಈ ಪ್ಯಾನ್ ಇಂಡಿಯಾ ವೆಬ್ ಸೀರೀಸ್ ನ್ನು ಸುಮಾರು 30 ಕೋಟಿ ರೂ.ಗಳ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷವಾಗಿ ಈ ವೆಬ್ ಸರಣಿಯಲ್ಲಿ ಹಿರಿಯನಟ ಮಿಥುನ್ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮದರ್ ತೆರೇಸಾ ಅವರ ಬಾಲ್ಯ, ಹರೆಯದ ಜೀವನ ಹೇಗಿತ್ತು. ಹಾಗೂ ಅವರ ಹಿರಿಯ ವಯಸಿನಲ್ಲಿ ನಡೆದ ಘಟನೆಗಳು, ಸಮಾಜಸೇವೆ ಇದನ್ನೆಲ್ಲ ಈ ಪ್ಯಾನ್ ಇಂಡಿಯಾ ವೆಬ್ ಸೀರೀಸ್ ಮೂಲಕ ನಿರ್ದೇಶಕ ಚಂದ್ರಶೇಖರ್ ಹೇಳಹೊರಟಿದ್ದಾರೆ. ಮದರ್ ತೆರೇಸಾ ಅವರು ಎಲ್ಲೆಲ್ಲಿ ಹೋಗಿದ್ದರು, ಅವರು ಹೆಜ್ಜೆ ಇಟ್ಟ ನೆಲದಲ್ಲೇ ಶೂಟಿಂಗ್ ಮಾಡಲಾಗುತ್ತಿದೆ. ಅವರು ನೆಲೆಸಿದ್ದ ರೋಮ್. ಜೆರುಸಲೆನಿಯಂ, ಟೆಥ್‍ಲೆಹೆಮ್, ಮ್ಯಾಸಿಡೋನಿಯಾ. ಯುಕೆ. ಮತ್ತು ಇಟಲಿಯಂತಹ ಸ್ಥಳಗಳ ಜೊತೆಗೆ ಮದರ್ ತೆರೇಸಾ ಅವರ ಜೀವನದ ಮೇಲೆ ಪ್ರಭಾವ ಬೀರಿದ ಪಶ್ಚಿಮ ಬಾಂಗಾಳ, ಬಾಂಗ್ಲಾದೇಶ, ಮುಂಬೈ, ಕೇರಳ. ಬಿಹಾರ. ಕರ್ನಾಟಕ ಮುಂತಾದ ಪ್ರಮುಖ ಸ್ಥಳಗಳಲ್ಲೆ ಚಿತ್ರೀಕರಣ ನಡೆಯಲಿದೆ.

ತನ್ನ 19ನೇ ವಯಸಿನಲ್ಲೇ ಚಿತ್ರರಂಗಕ್ಕೆ ಬಂದ ನಿರ್ದೇಶಕ ಪಿ. ಚಂದ್ರಕುಮಾರ್ ಅವರು ಈಗಾಗಲೇ 150ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿ, ರಾಜ್ಯಪ್ರಶಸ್ತಿ, ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಈ ಕುರಿತು ಮಾತನಾಡಿದ ನಿರ್ದೇಶಕ, ಮದರ್ ತೆರೇಸಾ ಅವರ ಹುಟ್ಟು,ಬಾಲ್ಯದಿಂದ ಆರಂಭಿಸಿ,ಅವರು ಭಾರತಕ್ಕೆ ಬಂದ ಮೇಲೆ ಏನೆಲ್ಲ ಆಯಿತು ಅವರ ಸೋಷಿಯಲ್ ಸರ್ವೀಸ್ ಇದನ್ನೆಲ್ಲ ಇಟ್ಟುಕೊಂಡು ಸ್ಕ್ರಿಪ್ಟ್ ಹೆಣೆಯಲಾಗಿದೆ. ಪ್ರತಿ ಎಪಿಸೋಡಿಗೆ ಒಂದು ಕೋಟಿ ಬಜೆಟ್ ಹಾಕಿಕೊಂಡಿದ್ದೇವೆ.ಅವರ ಹರೆಯದ ಪಾತ್ರಕ್ಕಾಗಿ ಹೊಸ ಪ್ರತಿಭೆಗಳ ಹುಡುಕಾಟ ನಡೆಯುತ್ತಿದ್ದು, ರಾಜ್ಯದಲ್ಲೂ ಅಡಿಶನ್ ಮಾಡಲಾಗುತ್ತದೆ. ಹೆಸರಾಂತ ಕಲಾವಿದೆಯನ್ನು ಹಾಕಿಕೊಳ್ಳುವ ಸಲಹೆ ಬಂದರೂ ಅಂಥವರಲ್ಲಿ ತೆರೆಸಾ ಅವರನ್ನು ಕಾಣಲು ಸಾಧ್ಯವಿಲ್ಲ ಎಂದು ಹೊಸ ಮುಖಗಳನ್ನೇ ಹುಡುಕುತ್ತಿದ್ದೇವೆ ಎಂದರು

ಮದರ್ ತೆರೇಸಾ ಡಾರ್ಜಿರ್ಲಿಂಗ್ ನಲ್ಲಿ ಶಿಕ್ಷಕರಾಗಿ ಹೆಚ್ಚು ಕಾಲ ಕಳೆದಿದ್ದಾರೆ. ಅಲ್ಲದೆ ಅವರ ಬಗ್ಗೆ ಸಾಕಷ್ಟು ಕಾಂಟ್ರವರ್ಸಿ ಇದ್ದು, ಅದನ್ನೆಲ್ಲ ಈ ಕಥೆಯಲ್ಲಿ ತಂದಿದ್ದೇವೆ. ತುಂಬಾ ನೈಜವಾಗಿ ಈ ಸೀರೀಸ್ ಮೂಡಿ ಬರಲಿದೆ ಎಂದರು.

ನಿರ್ಮಾಪಕ ಚಂದ್ರಶೇಖರ್ ಮಾತನಾಡುತ್ತ ಈಗಾಗಲೇ ಮಲಯಾಳಂ, ತಮಿಳು, ತೆಲುಗು, ಹಿಂದಿಯಲ್ಲಿ ಹಲವಾರು ಸಿನಿಮಾಗಳನ್ನು ನಿರ್ಮಿಸಿದ್ದು ಕನ್ನಡದಲ್ಲಿ ಮೊದಲಬಾರಿಗೆ ಮಾಡುತ್ತಿದ್ದೇವೆ. ಯಂಗ್ ತೆರೇಸಾ ಪಾತ್ರಕ್ಕಾಗಿ ಹುಡಕಾಟ ನಡೆದಿದೆ. ನಾಲ್ಕು ವರ್ಷದ ಹಿಂದೆಯೇ ಇದರ ಪ್ಲ್ಯಾನ್ ಮಾಡಿದ್ದೆವು. ಮೂರು ಸೀಜನ್ ನಲ್ಲಿ ಒಟ್ಟು 30 ಎಪಿಸೋಡ್ ಗಳಲ್ಲಿ ಮದರ್ ತೆರೇಸಾ ಅವರ ಕಥೆ ಮೂಡಿಬರಲಿದೆ. ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭಿಸುತ್ತಿದ್ದೇವೆ. ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಈ ಸೀರೀಸ್ ರಿಲೀಸಾಗಲಿದ್ದು, ಈ ಬಗ್ಗೆ ಮಾತುಕತೆ ಕೂಡ ನಡೆಯುತ್ತಿದೆ. ಪತ್ರಕರ್ತರೊಬ್ಬರ ದೃಷ್ಟಿಕೋನದಲ್ಲಿ ಮದರ್ ತೆರೆಸಾ ಅವರ ಜೀವನಗಾಥೆ ಮೂಡಿಬರಲಿದೆ ಎಂದು ಹೇಳಿದರು.

ಪಿ.ಸುಕುಮಾರ್ ಅವರ ಛಾಯಾಗ್ರಹಣ, ಜರೀ ಅಮರದೇವ ಅವರ ಸಂಗೀತ ಇದ್ದು, ಅನಿತಾ ಮೆನ್ನನ್, ತನಿಮಾ ಮೆನ್ನನ್, ಸಾಪಿಕೌರ್, ಜೋಷಿ ಜೋಸೆಫ್ ಪ್ರಮುಖ ತಾರಾಗಣದಲ್ಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin