Special role in the movie Klanta: An emotional Sangeetha Bhatt

ಕ್ಲಾಂತ ಚಿತ್ರದಲ್ಲಿ ವಿಶೇಷ ಪಾತ್ರ : ಭಾವುಕರಾದ ಸಂಗೀತ ಭಟ್ - CineNewsKannada.com

ಕ್ಲಾಂತ ಚಿತ್ರದಲ್ಲಿ ವಿಶೇಷ ಪಾತ್ರ : ಭಾವುಕರಾದ ಸಂಗೀತ ಭಟ್

ಚಿತ್ರರಂಗದಿಂದ ದೂರ ಇದ್ದವಳನ್ನು ಮರಳಿ ಬಣ್ಧದ ಜಗತ್ತಿಗೆ ಕರೆತಂದು ಅವಕಾಶ ನೀಡಿದ ಚಿತ್ರ ” ಕ್ಲಾಂತ” .ಹೀಗಾಗಿ ವಿಶೇಷವಾದ ಚಿತ್ರ. ಜೊತೆಗೆ ಸೆಕೆಂಡ್ ಇನ್ಸಿಂಗ್ ಉತ್ತಮ ಆರಂಭ ಎನ್ನುತ್ತಾರೆ ನಟಿ ಸಂಗೀತ ಭಟ್.

ಆಲ್ಬಂ ಹಾಡಿನ ಮೂಲಕ ಚಿತ್ರರಂಗ ಪ್ರವೇಶಿಸಿ ಸಂಗೀತ ಭಟ್, ದಶಕದ ಚಿತ್ರರಂಗದ ಯಾನದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದವರು. ಪ್ರತಿಭೆಯಿಂದ ಗಮನ ಸೆಳೆಯುತ್ತಲೇ. ಕೆಲವೊಂದು ವಿಷಯಕ್ಕೆ ಸುದ್ದಿ ಕೂಡ ಆದರು. ಸೋಲು ಗೆಲುವು ಎರಡನ್ನೂ ಕಂಡು ಚಿತ್ರರಂಗದಿಂದಲೇ ದೂರ ಉಳಿದವರು.

ಚಿತ್ರರಂಗದಿಂದ ದೂರ ಹೋದವರನ್ನು ನಿರ್ದೇಶಕ ವೈಭವ್ ಪ್ರಶಾಂತ್ ” ಕ್ಲಾಂತ ” ಚಿತ್ರದ ಮರಳಿ ಕರೆತಂದಿದ್ದಾರೆ. ಈ ಬಗ್ಗೆ ಸಂಗೀತ ಭಟ್ ಅವರಲ್ಲಿ ನಿರ್ದೇಶಕರ ಮೇಲೆ ವಿಶೇಷ ಅಭಿಮಾನ ಮತ್ತು ಕೃತಜ್ಞತೆಯೂ ಅವರ ಮಾತಿನಲ್ಲಿ ವ್ಯಕ್ತವಾಯಿತು.

ಕ್ಲಾಂತ ಚಿತ್ರದ ಪತ್ರಿಕಾಗೋಷ್ಢಿಯಲ್ಲಿ ಚಿತ್ರ ಸಿಕ್ಕ ಅವಕಾಶ ಮತ್ತು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಸಂಗೀತ ಭಟ್, ಒಳ್ಳೆಯ ಕಥೆಯ ಮೂಲಕ ಚಿತ್ರರಂಗಕ್ಕೆ ಬರಬೇಕು ಎಂದಾಗ ನಿರ್ದೇಶಕ ವೈಭವ್ ಪ್ರಶಾಂತ್, ಹೇಳಿದ ಕಥೆ ಇಷ್ಟವಾಯಿತು. ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಕೂಡ. ಇನ್ನೇನು ಚಿತ್ರೀಕರಣಕ್ಕೆ ಹೋಗಲು ವಾರ ಇದೆ ಎನ್ನುವಾಗ ಟೈಫಾಯಿಡ್ ಆಯಿತು ಹೀಗಾಗಿ ವಿಶ್ರಾಂತಿ ಅಗತ್ಯವಿತ್ತು.

  • ಭಾವುಕರಾದ ಭಟ್ಟರು

ಇರುವುದೆನ್ನೆಲ್ಲಾ ನಿರ್ದೇಶಕರಿಗೆ ಹೇಳಿದೆ. ನನ್ನಿಂದ ನಿಮಗೆ ತೊಂದರೆಯಾಗುವುದು ಬೇಡ, ನಿಮ್ಮ ಮನಸ್ಸಿನಲ್ಲಿ ಬೇರೆ ನಾಯಕಿಯರು ಯಾರಾದರೂ ಇದ್ದರೆ ಹಾಕಿಕೊಂಡು ಸಿನಿಮಾ ಮಾಡಿ ಎಂದೆ. ಅದಕ್ಕೆ ಅವರು ನಿಮಗಾಗಿ ಕಾಯುತ್ತೇವೆ. ಹುಷಾರಾಗಿ ಎಂದರು.

ಒಂದಷ್ಟು ದಿನದ ನಂತರ ಕರೆ ಮಾಡಿ ಹೇಗಿದ್ದೀರಾ ಈಗ ಚಿತ್ರೀಕರಣಕ್ಕೆ ರೆಡಿನಾ ಅಂದರು. ಮನೆ ಬಾಗಿಲಿಗೆ ಬಂದ ಅವಕಾಶವನ್ನು ಕಾಲಿನಲ್ಲಿ ಒದೆಯಬಾರದೆಂದು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಎನ್ನುತ್ತಲೇ ಸಂಗೀತ ಭಟ್ ಭಾವುಕರಾದರು.

  • ಸವಾಲಿನಿಂದ ಕೂಡಿದ ಚಿತ್ರ:

“ಕ್ಲಾಂತ” ಹಲವು ಕಾರಣಕ್ಕೆ ಚಿತ್ರ ಸವಾಲಿನಿಂದ ಕೂಡಿತ್ತು. ಚಿತ್ರರಂಗದಿಂದ ದೂರ ಇದ್ದ ನನ್ನನ್ನು ಮತ್ತೆ ಸಿನಿಮಾ ಜಗತ್ತಿಗೆ ಕರೆತಂದ ಚಿತ್ರ. ಹೀಗಾಗಿ ಹೊಸಬರ ಜೊತೆ ನಾನು ಹೊಸಬರಾಗಿಯೇ ಇರುವಂತಾಯಿತು. ಚಿತ್ರರಂಗದಿಂದ ಮೂರು ನಾಲ್ಕು ವರ್ಷ ದೂರ ಇದ್ದುದರಿಂದ ಹೊಸ ಅನುಭವದಂತೆ ಇತ್ತು
ಕಲಿತಿದ್ದುದನ್ನು ಮರೆತು, ಹೊಸದಾಗಿ ಕಲಿಯುವ ಅನುಭವ ನನ್ನದಾಯಿತು.

  • ಮನೆಯವರಂತೆ ನೋಡಿಕೊಂಡರು

ಕ್ಲಾಂತದ ಚಿತ್ರೀಕರಣ ಕಾಡಿನಲ್ಲಿ ಮಾಡುವಾಗ ಎದುರಿಸಿದ ಸಮಸ್ಯೆ ಒಂದರಡಲ್ಲ. ಎಲ್ಲಿಯೂ ಕೂಡ ಚಿತ್ರತಂಡ ಸಮಸ್ಯೆಯಾಗದಂತೆ ನೋಡಿಕೊಂಡಿತು. ನಾಯಕಿಯರು ಚಿತ್ರೀಕರಣ ಮಾಡುವ ಸಮಯದಲ್ಲಿ ಭದ್ರತೆಯ ಸಮಸ್ಯೆ ಎದುರಾಗುತ್ತದೆ.ಅಂತಹುದರಲ್ಲಿ ಎಲ್ಲಿಯೂ ಒಂದಿಷ್ಟು ಸಮಸ್ಯೆಯಾಗದಂತೆ ನಿರ್ದೇಶಕ ವೈಭವ್ ಪ್ರಶಾಂತ್ ಹಾಗು ನಿರ್ಮಾಪಕ ಉದಯ್ ಅಮ್ಮಣ್ಣಾಯ ತಮ್ಮ ಮನೆಯವರಂತೆ ನೋಡಿಕೊಂಡರು. ಅದಕ್ಕಾಗಿ ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎಂದರು.

  • ಪಾತ್ರಕ್ಕಾಗಿ ಪರಿಶ್ರಮ

ಚಿತ್ರರಂಗದಿಂದ ದೂರ ಇದ್ದುದರಿಂದ ಸಹಜವಾಗಿ ದಪ್ಪನಾಗಿದ್ದೆ. ಚಿತ್ರದ ಪಾತ್ರಕ್ಕಾಗಿ ತೂಕ ಇಳಿಸಿಕೊಳ್ಳಲು ಕಠಿಣ ಡಯಟ್ ಪಾಲನೆ ಮಾಡಬೇಕಾಯಿತು. ನಾಯಕನಿಗೆ ಸೂಕ್ತವಾಗಿ ಕಾಣಬೇಕಾಗಿತ್ತು.ಹೀಗಾಗಿ ಪರಿಶ್ರಮ ಪರಿಶ್ರಮ ಹಾಕಿದ್ದೇನೆ. ಚಿತ್ರೀಕರಣದ ಸಮಯದಲ್ಲಿ ಬೆಳಗ್ಗೆ ಎರಡು ಇಡ್ಲಿ ಮಾತ್ರ ಸೇವಿಸುತ್ತಿದ್ದೆ. ಜೊತೆಗೆ ನನಗಾಗಿ ಬೌಲ್ ಇತ್ತು ಅದರೊಳಗೆ ಅಳತೆಯಲ್ಲಿ ಊಟ ಮಾಡುತ್ತಿದ್ದೆ ಎನ್ನುವ ಮಾಹಿತಿ ಹಂಚಿಕೊಂಡರು

  • ಹೊಡೆದಾಟದ ಸನ್ನಿವೇಶದಲ್ಲಿಯೂ ಭಾಗಿ

ಕಾಂತ್ಲಾ ಚಿತ್ರದಲ್ಲಿ ಆಗಷ್ಟೇ ಕೆಲಸಕ್ಕೆ ಸೇರಿದ ಹುಡುಗಿಯ ಪಾತ್ರ. ವಿಕೇಂಡ್ ನಲ್ಲಿ ಎಂಜಾಯ್ ಮಾಡುವ ಆಸೆ.ಹೀಗಾಗಿ ನಾಯಕನ ಜೊತೆ ಹೊರ ಹೋದಾದ ಅಲ್ಲಿ ಸಿಕ್ಕಿಕೊಂಡು ಸಮಸ್ಯೆ ಎದುರಿಸುವ ಪಾತ್ರ. ಜೊತೆಗೆ ಚಿತ್ರದಲ್ಲಿ ನೆಗೆಟೀವ್ ಶೇಡ್ ನಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಸಹ ನಟಿಯಜೊತೆ ಪೈಟಿಂಗ್ ಸನ್ನಿವೇಶ ಕೂಡ ಚಿತ್ರದಲ್ಲಿದೆ. ಕಾಡಿನಲ್ಲಿ ಚಿತ್ರೀಕರಣ ಮಾಡುವಾಗ ನಡೆದುಕೊಂಡೇ ಹೋಗಬೇಕಾಗಿತ್ತು. ಕಷ್ಟಪಟ್ಟು ಇಷ್ಟಪಟ್ಟು ಸಿನಿಮಾ ಮಾಡಿದ್ದೇವೆ.
.

  • ಮಡಿಲಿಗೆ ಹಾಕಿದ್ದೇವೆ, ಬೆಂಬಲಿಸಿ

ಕ್ಲಾಂತ ಚಿತ್ರದಲ್ಲಿ ಬಹುತೇಕ ಹೊಸಬರೇ ಇರುವುದರಿಂದ ಎಲ್ಲರೂ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ.ಅದನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ. ಹೀಗಾಗಿ ನಿಮ್ಮ ಮಡಿಲಿಗೆ ಹಾಕಿದ್ದೇವೆ. ನಿರ್ಮಾಪಕ, ನಿರ್ದೇಶಕರು ಮತ್ತು ಇಡೀ ತಂಡಕ್ಕೆ ಒಳಿತಾಗಬೇಕು. ನಿಮ್ಮ ಸಹಕಾರ ನೀಡಿ ಎಂದು ಕೇಳಿಕೊಂಡರು.

  • ಸಂಕಷ್ಟದಲ್ಲಿ ಪತಿ, ಕುಟುಂಬ ಸಾಥ್

ಚಿತ್ರರಂಗದಲ್ಲಿ ಏರಿಳಿತ ಕಂಡು ಸಂಕಷ್ಟದ ಸಮಯದಲ್ಲಿದ್ದಾಗ ನನಗೆ ಬೆನ್ನೆಲುಬಾಗಿ ಹಾಗು ನೈತಿಕ ಬಲ ನೀಡಿದವರು ಪತಿ ಸುದರ್ಶನ್ ರಂಗಪ್ರಸಾದ್. ಅವರ ಸಹಕಾರ ,ಬೆಂಬಲವನ್ನು ಎಷ್ಟೇ ಹೇಳಿದರೂ ಕಡಿಮೆ. ಚಿತ್ರದ ಸಕ್ಸಸ್, ಫೆಲ್ಯೂರ್ ನಲ್ಲಿಯೂ ಪತಿ, ಜೊತೆಗೆ ಕುಟುಂಬದ ಸಾಥ್ ನೀಡಿದೆ. ಚಿತ್ರರಂಗದಲ್ಲಿ ಎದುರಾದ ಕಷ್ಟದ ದಿನಗಳಲ್ಲಿಯೂ ಕೂಡ. ಪತಿ,ಕುಟುಂಬ, ಮತ್ತು ಮಾದ್ಯಮದ ಸಹಕಾರದಿಂದ ಇಲ್ಲಿಯ ತನಕ ಬಂದಿದ್ದೇನೆ ಎಂದು ಮತ್ತೆ ಭಾವುಕರಾದರು ಸಂಗೀತ ಭಟ್.

ಅಂದಹಾಗೆ ಕ್ಲಾಂತ ಚಿತ್ರದಲ್ಲಿ ನಾಯಕನಾಗಿ ವಿಘ್ನೇಶ್ ಕಾಣಿಸಿಕೊಂಡಿದ್ದಾರೆ. ಕಾಮಿಡಿ ಕಿಲಾಡಿಯ ಪ್ರವೀಣ್ ಜೈನ್, ಸಪ್ನ, ಯುವ ಮತ್ತಿತರರು ನಟಿಸಿದ್ದಾರೆ. ಚಿತ್ರಕ್ಕೆ ಉದಯ್ ಅಮ್ಮಣ್ಣಾಯ ಕೆ ಬಂಡವಾಳ ಹಾಕಿದ್ದು ಅವರಿಗೆ ಬೆನ್ನೆಲುಬಾಗಿ ಅರುಣ್ ಕುಮಾರ್ ಸಾಥ್ ನೀಡಿದ್ದಾರೆ

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin