,Actor Darshan Interview : “ಡೆವಿಲ್” ಚಿತ್ರ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ತರುವ ಪ್ರಯತ್ನ ಚಾಲೆಜಿಂಗ್ ಸ್ಟಾರ್ ದರ್ಶನ್
“ಕಾಟೇರ” ಚಿತ್ರದ ಭರ್ಜರಿ ಯಶಸ್ಸಿನ ಅಲೆಯಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ವರ್ಷದ ಅಕ್ಟೋಬರ್‍ನಲ್ಲಿ ಮತ್ತೊಂದು ಬಹು ನಿರೀಕ್ಷಿತ “ಡೆವಿಲ್” ಚಿತ್ರ ಈ ವರ್ಷ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ಭರದಿಂದ ಚಿತ್ರೀಕರಣ ಸಾಗಿದೆ
ಎಡಗೈ ನೋವಿದ್ದರೂ ಅದನ್ನು ಲೆಕ್ಕಿಸದೆ ಒಂದಷ್ಟು ದಿನ ಚಿತ್ರೀಕರಣ ಮಾಡಿ ಇದೀಗ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಒಂದಷ್ಟು ದಿನ ವಿಶ್ರಾಂತಿ ಪಡೆದು ಉಳಿದ ಭಾಗದ ಚಿತ್ರೀಕರಣ ಪೂರ್ಣಗೊಳಿಸಿ ಅಕ್ಟೋಬರ್‍ನಲ್ಲಿ ದಸರಾ ವೇಳೆಯ ಹಾಜು ಬಾಜಿನಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ.
“ಜಾಜಿ” ಚಿತ್ರದ ಆಲ್ಬಂ ಹಾಡಿನ ವೇಳೆ ಮಾತಿಗೆ ಸಿಕ್ಕ ನಟ ದರ್ಶನ್, ಶತಾಯ ಗತಾಯ ಅಕ್ಟೋಬರ್‍ನಲ್ಲಿ “ಡೆವಿಲ್ “ ಚಿತ್ರವನ್ನು ತೆರೆಗೆ ತರಬೇಕು ಎನ್ನುವುದು ನಿರ್ದೇಶಕ ಪ್ರಕಾಶ್ ವೀರ್ ಸೇರಿದಂತೆ ಇಡೀ ತಂಡ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮೆಲ್ಲರ ಉದ್ದೇಶ ಚಿತ್ರವನ್ನು ಅಕ್ಟೋಬರ್ ವೇಳೆಗೆ ತರುವುದೇ ಆಗಿದೆ.
“ಡೆವಿಲ್” ಚಿತ್ರೀಕರಣಕ್ಕೆ ನಿರ್ಮಾಪಕರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ. ನೋವು ತಡೆದುಕೊಂಡೆ. ಈಗ ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತಾಗಿದೆ. ಹೆಚ್ಚು ದಿನ ವಿಶ್ರಾಂತಿ ಪಡೆಯದೆ ಸದ್ಯದಲ್ಲಿಯೇ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುವೆ.ಕಷ್ಟನೋ ಸುಖನೋ ಚಿತ್ರೀಕರಣ ಪೂರ್ಣಗೊಳಿಸಿ ಅಕ್ಟೋಬರ್ ನಲ್ಲಿ ಡೆವಿಲ್ ತೆರೆಗೆ ತರುತ್ತೇವೆ ಎಂದು ಅವರು ಮಾಹಿತಿ ಹಂಚಿಕೊಂಡರು
‘ಡೆವಿಲ್’ ಚಿತ್ರವನ್ನು ಪ್ರಕಾಶ್ ವೀರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಜಯಮ್ಮ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಆಕ್ಷನ್ ಎಂಟಟೈನ್ ಮೆಂಟ್ ಕಥಾ ಹಂದರ ಹೊಂದಿರುವ ಚಿತ್ರದಲ್ಲಿ ನಟ ದರ್ಶನ್ ವಿಭಿನ್ನ ಗೆಟಪ್‍ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚು ಮಾಡಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತ, ಸುಧಾಕರ್ ರಾಜ್ ಕ್ಯಾಮರಾ ಚಿತ್ರಕ್ಕಿದೆ. ಚಿತ್ರದ ತಾರಾಗಣ ಸೇರಿದಂತೆ ಇನ್ನಷ್ಟು ವಿವರಗಳನ್ನು ನಿರ್ದೇಶಕ ಪ್ರಕಾಶ್ ವೀರ್ ಮತ್ತವರ ತಂಡ ಬಹಿರಂಗಪಡಿಸಬೇಕಾಗಿದೆ.
ನಿರ್ಮಾಪಕರು ಉಳಿದರೆ ಚಿತ್ರರಂಗ
“ಕಾಟೇರ” ಚಿತ್ರದಿಂದ ಒಂದಷ್ಟು ಚಿತ್ರಮಂದಿರಗಳು ರಾಜ್ಯದಲ್ಲಿ ಉಳಿದುಕೊಳ್ಳುವಂತಾಯಿತು. ಆ ನಂತರ ಮತ್ತೆ 80 ಚಿತ್ರಗಳು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿವೆ. ಮಲ್ಟಿಫ್ಲೆಕ್ಸ್‍ಗೆ ಹೋಲಿಸಿದರೆ ನಿರ್ಮಾಪಕನಿಗೆ ಹೆಚ್ಚು ಹಣ ಬರುವುದು ಏಕಪರದೆಯ ಚಿತ್ರಮಂದಿರಗಳಿಂದ ಅವುಗಳನ್ನು ಉಳಿಸಬೇಕಾಗಿದೆ. ಆಗ ಮಾತ್ರ ನಿರ್ಮಾಪಕರಿಗೆ ಹಣವೂ ಬರಲಿದೆ… ಅವರೂ ಉಳಿಯಲಿದ್ದಾರೆ
ಮೂರನೇ ಚಿತ್ರಕ್ಕೆ ಸಿದ್ದತೆ
ಈ ವೇಳೆ ಮಾತನಾಡಿದ ನಿರ್ಮಾಪಕಿ ಶೈಲಜಾನಾಗ್ “ಯಜಮಾನ” ಮತ್ತು “ಕ್ರಾಂತಿ” ಚಿತ್ರದ ನಂತರ ಚಾಲೆಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಮೂರನೇ ಚಿತ್ರ ಆರಂಭಿಸಲಾಗುತ್ತಿದೆ. 2025ರ ಹೊಸ ವರ್ಷದ ಆರಂಭದಲ್ಲಿ ಆರಂಭಿಸಿ ಅದೇ ವರ್ಷ ಚಿತ್ರ ತೆರೆಗೆ ತರುವ ಯೋಚನೆ ಇದೆ. ಈಗ ಇನ್ನೂ ಸಿದ್ದತೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ