Vijay Chendoor in Tamil; Acting with Yogi Babu: Busy in Kannada too

Exclusive Interviw with vijay chendoor ತಮಿಳಿನತ್ತ ವಿಜಯ್ ಚೆಂಡೂರು; ಯೋಗಿ ಬಾಬು ಜೊತೆ ನಟನೆ: ಕನ್ನಡಲ್ಲಿಯೂ ಬ್ಯುಸಿ - CineNewsKannada.com

Exclusive Interviw with vijay chendoor ತಮಿಳಿನತ್ತ ವಿಜಯ್ ಚೆಂಡೂರು; ಯೋಗಿ ಬಾಬು ಜೊತೆ ನಟನೆ: ಕನ್ನಡಲ್ಲಿಯೂ ಬ್ಯುಸಿ

ಕನ್ನಡದಲ್ಲಿ ಹಾರರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಹಾಸ್ಯ ಕಲಾವಿದ ವಿಜಯ್ ಚೆಂಡೂರ್, ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಕನ್ನಡದಲ್ಲಿ ಅವಕಾಶಗಳಿಲ್ಲದೆ ತಮಿಳಿನತ್ತ ಹೋಗಿದ್ದಾರೆ ಎಂದು ಭಾವಿದರೆ ನಿಮ್ಮ ಊಹೆ ತಪ್ಪು, ಕನ್ನಡದ ಅನೇಕ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಡುವೆಯೇ ತಮಿಳು ಭಾಷೆಯಲ್ಲಿ ಒಂದು ಕೈ ನೋಡೋಣ ಎಂದು ಹೆಜ್ಜೆಹಾಕಿದ್ದಾರೆ ಅದಕ್ಕೆ ಪೂರಕ ಎನ್ನುವಂತೆ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾ ಕೈಯಲ್ಲಿವೆ. ಇದೇ ಅಲ್ಲವೇ ಕನ್ನಡದ ಕಲಾವಿದನ ತಾಕತ್ತು.

ತಮಿಳು ಚಿತ್ರರಂಗದಲ್ಲಿ ಕಾಮಿಡಿ ಕಲಾವಿದ ಯೋಗಿ ಬಾಬು ನಟನೆಯ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಂಭೀರ ಮತ್ತು ನರಿಬುದ್ದಿ ಇರುವ ಪಾತ್ರ ಇದರ ಜೊತೆಗೆ “ಮಂಜುವಿರಟ್ಟು”, “ಸತ್ಯಮಂಗಲ” ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಸತ್ಯಮಂಗಲ ಚಿತ್ರದ ಮುಹೂರ್ತ ನಡೆದಿದ್ದು ಇದೇ 27 ರಿಂದ ಚಿತ್ರೀಕರಣ ನಡೆಯಲಿದೆ.

ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಕೈಯಲ್ಲಿರುವ ಚಿತ್ರಗಳ ಕುರಿತು ಮಾಹಿತಿ ಹಂಚಿಕೊಂಡ ಹಾಸ್ಯ ಕಲಾವಿದ ವಿಜಯ್ ಚೆಂಡೂರ್, ಭಾಷೆ ಯಾವುದೇ ಇರಲಿ, ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿ ಜನರಿಗೆ ರಂಜನೆ ನೀಡಬೇಕು ಎನ್ನುವುದು ನನ್ನ ಉದ್ದೇಶ ಎಂದಿದ್ದಾರೆ.

• ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದೀರಂತೆ ಹೌದಾ.. ಯಾವ ಚಿತ್ರ.

ತಮಿಳಿನ ‘ಸತ್ಯಮಂಗಲ’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಎಮೋಷನ್, ಕಾಮಿಡಿ ಚಿತ್ರ .ಆರ್ಯನ್ ಚಿತ್ರಕ್ಕೆ ಆಕ್ಷನ್‍ಕಟ್ ಹೇಳಿದ್ದಾರೆ. ಅರಣ್ಯದಲ್ಲಿ ನಡೆಯುವ ಕತೆ. ಎಮೋಷನ್ ಪಾತ್ರ. ಈ ಥರದ ಪಾತ್ರ ಹೊಸದು. ತಮಿಳಿನಲ್ಲಿ ಎರಡನೇ ಚಿತ್ರ. ಐರಾ ಪ್ರೋಡಕ್ಷನ್ ನಿರ್ಮಾಣ ಮಾಡುತ್ತಿದೆ. ಇತ್ತೀಚೆಗಷ್ಟೇ ಮುಹೂರ್ತ ನಡೆದಿದೆ. ಇದೇ ಏಪ್ರಿಲ್ 27 ರಿಂದ ಚಿತ್ರೀಕರಣ ಆರಂಭವಾಗಲಿದ್ದು ದುರಂಕಾರಿಂದ ಎಮೋಷನ್ ಕಡೆಗೆ ಸಾಗುವ ಪಾತ್ರ.

• ಯೋಗಿ ಬಾಬು ಜೊತೆ ನಟನೆಯ ಚಿತ್ರದ ಬಗ್ಗೆ ಹೇಳುವುದಾದರೆ

ಯೋಗಿ ಬಾಬು ನಟನೆಯ ಚಿತ್ರದಲ್ಲಿ ಅವರ ತಮ್ಮನ ಪಾತ್ರ ಮಾಡುತ್ತಿದ್ದೇನೆ. ಚಿತ್ರದ ಶೀರ್ಷಿಕೆಯನ್ನು ದೊಡ್ಡ ಮಟ್ಟದಲ್ಲಿ ಮಾಡುವ ಉದ್ದೇಶ ಹೊಂದಿದ್ದಾರೆ. ಹಾಗಾಗಿ ಚಿತ್ರದ ಹೆಸರು ತಾಂತ್ರಿಕ ವರ್ಗ ಬಹಿರಂಗ ಪಡಿಸಲು ಆಗುತ್ತಿಲ್ಲ. ಚಿತ್ರದ ಶೀರ್ಷಿಕೆ ಬಿಡುಗಡೆ ಬಳಿಕ ಎಲ್ಲಾ ಮಾಹಿತಿ ನೀಡುವುದಾಗಿ ಭರವಸೆ ನೀಡಿದರು. ಇದು ತಮಿಳಿನಲ್ಲಿ ನನ್ನ ಮೂರನೇ ಸಿನಿಮಾ, ಇನ್ನೂ ಯಾವುದೂ ಕೂಡ ಬಿಡುಗಡೆಯಾಗಿಲ್ಲ. ಮೊದಲ ಬಾರಿಗೆ ಮಂಜು ವಿರಟ್ಟು ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆ ಬಳಿಕ ಸತ್ಯಮಂಗಲ ಈಗ ಯೋಗಿ ಬಾಬು ಸಿನಿಮಾದಲ್ಲಿ ನಟಿಸುತ್ತಿದ್ದೇನೆ

• ಅಥರ್ವ್ ಆರ್ಯ ನಿರ್ದೇಶನದ “ಅಪ್ಪ ಐ ಲವ್ ಯೂ” ಚಿತ್ರದಲ್ಲಿ ನಿಮ್ಮ ಪಾತ್ರ ಏನು

“ಅಪ್ಪ ಐ ಲವ್ ಯೂ” ಚಿತ್ರದಲ್ಲಿ ಉಡಾಫೆ ಲಾಯರ್ ಪಾತ್ರ. ಆತನ ಮಾತು, ಯೋಚನೆಗಳು ಜೀವನನ್ನು ಹೀಗೂ ಮಾಡಬಹುದಾ, ಜನರನ್ನು ಹೆಗೆಲ್ಲಾ ಯಾಮಾರಿಸಬಹುದು ಎನ್ನುವುದುನ್ನು ನಿರ್ದೇಶಕ ಅಥರ್ವ್ ಆರ್ಯ ತೋರಿಸಿದ್ದಾರೆ. ನೆನಪಿರಲಿ ಪ್ರೇಮ್ ಮತ್ತು ತಬಲನಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಎಮೋಷನ್ ಪಾತ್ರ, ಚಿತ್ರೀಕರಣದ ಸಮಯದಲ್ಲಿ ಎಂಜಾಯ್ ಮಾಡಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆವು

• ಕಿಚ್ಚ ಸುದೀಪ್ ಅವರ ಜೊತೆ ಮ್ಯಾಕ್ಸ್ ಚಿತ್ರೀಕರಣ ಎಲ್ಲಿಗೆ ಬಂತು. ನಿಮ್ಮ ಪಾತ್ರ ಏನು ಅದರ ಬಗ್ಗೆ ಹೇಳುವುದಾದರೆ.

ಮ್ಯಾಕ್ಸ್ ಚಿತ್ರೀಕರಣ ಚೆನ್ನೈನಲ್ಲಿ ನಡೆಯುತ್ತಿದೆ. ದೊಡ್ಡಸೆಟ್ ಹಾಕಲಾಗಿತ್ತು ಶಿಸ್ತು, ಕ್ರಮಬದ್ದತೆ, ಪ್ರತಿಭೆಗೆ ನಿರ್ದೇಶಕ ವಿಜಯ್ ಕಾರ್ತಿಕೇಯ ಒತ್ತು ನೀಡಿದ್ದಾರೆ. ಕಿಚ್ಚ ಸುದೀಪ್ ಅವರ ಇನ್‍ವಾಲ್‍ಮೆಂಟ್ ಹೇಳತೀರದು, ವಿಶೆಷ ಅನುಭವ ನನ್ನ ಭಾಗದ ಚಿತ್ರೀಕರಣವೇ 50 ದಿನ ನಡೆದಿದೆ. ಅನೇಕ ಟ್ವಿಸ್ಟ್‍ಗಳು ಚಿತ್ರದಲ್ಲಿವೆ. ಚಿತ್ರದಲ್ಲಿ ಕಾಣಿಸಿಕೊಂಡ ಕಲಾವಿದರಿಗಷ್ಟೇ ಅಲ್ಲ ಪ್ರೇಕ್ಷಕರಿಗೂ ವಿಶೇಷ ಅನುಭವ ನೀಡಲಿದೆ. ಚಿತ್ರೀಕರಣ ಕೊನೆ ಹಂತಕ್ಕೆ ಬಂದಿದೆ. ಗುಣಮಟ್ಟದ ಕೆಲಸ ಎಂತವರವನ್ನು ದಿಗ್ಬ್ರಮೆಗೊಳಿಸಲಿದೆ

• ಕಲ್ ಸಕ್ರೆಯಲ್ಲಿ ವಿಶೇಷ ಪಾತ್ರ ಮಾಡಿದ್ದೀರಂತೆ ಹೌದಾ, ಏನದು ಪಾತ್ರ

“ಕಲ್‍ಸಕ್ರೆ” ಚಿತ್ರದಲ್ಲಿ ವಿಶೇಷ ಪಾತ್ರ ಸಿಕ್ಕಿದೆ. ನೈಜ ಘಟನೆ ಆಧಾರಿತವಾದದ್ದು ಹೆಣ್ಣಿನ ವ್ಯಾಮೋಹ ಇರುವ ಪಾತ್ರ. ಹೊಸ ಅನುಭವ, ನಿರ್ದೇಶಕ ಜೀವನ್ ಅನೇಕ ಇನ್ ಪುಟ್ ನೀಡಿ, ನೋಟ, ಮಾತಿನ ಶೈಲಿ ಎಲ್ಲವನ್ನು ಬದಲಾಯಿಸಿದ್ದಾರೆ. ಚಿತ್ರದಲ್ಲಿ ಸಂಪತ್ ಸೇರಿದಂತೆ ಮತ್ತಿತರಿದ್ದಾರೆ.ಜೂನ್‍ನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ

• ಗಾಲಿ ಜನಾರ್ಧನ ರೆಡ್ಡಿ ಪುತ್ರನ ಸಿನಿಮಾ ಎಲ್ಲಿಗೆ ಬಂತು, ಅದರಲ್ಲಿ ನಿಮ್ಮ ಪಾತ್ರ ಏನು

ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಪುತ್ರ ಕಿರೀಟಿ ನಟನೆಯ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮೂಡಿ ಬರುತ್ತಿರುವ “ಜೂನಿಯರ್” ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಕಾಂಬಿನೇಷನ್, ಎಮೋಷನ್ ಫ್ಯಾಮಿಲಿ ಡ್ರಾಮ. ರಾಧಾಕೃಷ್ಣ ನಿರ್ದೇಶರು ಚೆನ್ನಾಗಿ ಬಂದಿದೆ 5 ದಿನ ಬಾಕಿ ಇದೆ, ಸದ್ಯದಲ್ಲಿಯೇ ಆಡಿಯೋ ಬಿಡುಗಡೆಯಾಗುವ ನಿರೀಕ್ಷೆ ಇದೆ.

• ಫುಲ್‍ಮೀಲ್ಸ್ ಚಿತ್ರದ ಕುರಿತು ಮಾಹಿತಿ ನೀಡುವುದಾದರೆ

ಫುಲ್ ಮೀಲ್ಸ್ ಚಿತ್ರದಲ್ಲಿ ಈ ಚಿತ್ರ ಲಿಖಿತ್ ಶೆಟ್ಟಿ ಸ್ನೇಹಿತ ಪಾತ್ರ. ಹಾಸ್ಯ, ಎಮೋಷನ್, ಲವ್‍ಸ್ಟೋರಿ ಚಿತ್ರ. ಕಾಮಿಡಿಯಾಗಿ ಮೂಡಿ ಬಂದಿದೆ ವಿನಾಯಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ,ಡಬ್ಬಿಂಗ್ ಮುಗಿದಿದೆ ಆದಷ್ಟು ಬೇಗ ತೆರೆಗೆ ಬರಲಿದೆ.

ಶಾನ್ ನಿರ್ದೇಶನದ ಚಿತ್ರ ಯಾವ ಹಂತದಲ್ಲಿದೆ

ಹಿರಿಯ ನಿರ್ದೇಶಕ ಎಆರ್ ಬಾಬು ಅವರ ಪುತ್ರ ಶಾನ್ ನಿರ್ದೇಶನದ ಹೊಸ ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲ.ಸಿನಿಮಾ ಹಳ್ಳಿ ಸೊಗಡಿನ ಪಾತ್ರ, ಪಂಚಾಯಿ ಅಧ್ಯಕ್ಷನ ಪಾತ್ರ ಮಾಡಿದ್ದೇನೆ. ಮೋಸ ಮಾಡುವ ಪಾತ್ರ ಅದ್ಬುತ , ಇನ್ನೂ 10ದಿನ ಚಿತ್ರೀಕರಣ ಬಾಕಿ ಇದೆ.

• ನೆಗೆಟೀವ್ ಪಾತ್ರಗಳನ್ನು ನೀವು ಹುಡುಕಿಕೊಂಡು ಹೋಗುತ್ತೀರಾ, ಅಥವಾ ಅವುಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವಾ

ಗೊತ್ತಿಲ್ಲ. ಅದರೆ ಈ ಮಾದರಿಯ ಪಾತ್ರಗಳು ಹೆಚ್ಚಾಗಿ ಹುಡುಕಿಕೊಂಡು ಬರುತ್ತಿವೆ. ಕಾರಣ ಗೊತ್ತಿಲ್ಲ, ಸಿಕ್ಕ ಎಲ್ಲಾ ಪಾತ್ರಗಳನ್ನು ಎಂಜಾಯ್ ಮಾಡಿಕೊಂಡು ನಟಿಸುತ್ತಿದ್ದೇನೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin