"Bombat Bhojana Season 5" starts from October 21

ಅಕ್ಟೋಬರ್ 21 ರಿಂದ “ಬೊಂಬಾಟ್ ಭೋಜನ ಸೀಸನ್ 5” ಆರಂಭ - CineNewsKannada.com

ಅಕ್ಟೋಬರ್ 21 ರಿಂದ “ಬೊಂಬಾಟ್ ಭೋಜನ ಸೀಸನ್ 5” ಆರಂಭ

ಕನ್ನಡ ಕಿರುತೆರೆಯಲ್ಲಿ ಅಡುಗೆ ಶೋ ಅಂದರೆ ಥಟ್ಟನೆ ನೆನಪಾಗುವುದು ಸ್ಟಾರ್ ಸುವರ್ಣ ವಾಹಿನಿಯ ‘ಬೊಂಬಾಟ್ ಭೋಜನ’. ಸಾವಿರಕ್ಕೂ ಹೆಚ್ಚು ಸಂಚಿಕೆಗಳನ್ನು ದಾಟಿ ಹೊಸ ಮೈಲಿಗಲ್ಲು ಸೃಷ್ಟಿಸಿರುವ ಈ ಶೋ ಈಗಾಗಲೇ 4 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದೀಗ ಇನ್ನಷ್ಟು ಹೊಸತನವನ್ನೊಳಗೊಂಡು 5ನೇ ಆವೃತ್ತಿಯೊಂದಿಗೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಈ ಬಾರಿ ‘ಬೊಂಬಾಟ್ ಭೋಜನ ಸೀಸನ್ 5’ ರ ಪ್ರಮುಖ ವಿಶೇಷತೆಯಂದರೆ “ಬೊಂಬಾಟ್ ಭೋಜನ ಆನ್ ವೀಲ್ಸ್” ಇನ್ಮುಂದೆ ಬೊಂಬಾಟ್ ಭೋಜನದ ಗಾಡಿ ರಾಜ್ಯಾದ್ಯಂತ ಸಂಚರಿಸಿ ನಿಮ್ ಊರಿಗೆ, ನಿಮ್ ಕೇರಿಗೆ, ನಿಮ್ ಗಲ್ಲಿಗಳಿಗೆ ಬಂದು ರುಚಿ ರುಚಿಯಾದ ಅಡುಗೆಯನ್ನು ತಯಾರಿಸಿ ಆ ರುಚಿಯನ್ನು ಅಲ್ಲಿನ ಜನರಿಗೆ ತಿಳಿಸಿಕೊಡಲಿದೆ. ಇದು ಈ ಸೀಸನ್ ನ ಮುಖ್ಯ ಆಕರ್ಷಣೆ.

ಈ ಸೀಸನ್ 5 ವಿಶೇಷತೆ

* ಸ್ಪೆಷಲ್ ಊಟ : ಸಿಹಿ ಕಹಿ ಚಂದ್ರು ಅವರು ರುಚಿ-ರುಚಿಯಾದ ಅಡುಗೆಯನ್ನು ತಿಳಿಸುತ್ತಾರೆ.
* ಹೋಟೆಲ್ ಊಟ : ಕರ್ನಾಟಕದಾದ್ಯಂತ ಚಲಿಸಿ, ಜನಪ್ರಿಯತೆಗಳಿಸಿರುವ ವರ್ಷಗಳ ಇತಿಹಾಸವಿರುವ ಹೋಟೆಲ್ ಗಳಿಗೆ ಧಾವಿಸಿ ಅಲ್ಲಿನ ಜನಪ್ರಿಯ ತಿನಿಸುಗಳನ್ನು ಸವಿದು ಜನರಿಗೆ ತಿಳಿಸುವುದು.
* ಊಟ ರೆಡಿ : ಜನಸಾಮಾನ್ಯರು,ಸೆಲೆಬ್ರಿಟಿಸ್ ಗಳು ಬಂದು ವಿವಿಧ ರೀತಿಯ ಕೈರುಚಿಯನ್ನು ತಿಳಿಸುವುದು.
* ಆರೋಗ್ಯ ಅಡುಗೆ : ಡಾ, ಗೌರಿ ಸುಬ್ರಮಣ್ಯ ರವರು ಜನರಿಗೆ ಉಪಯುಕ್ತವಾದ ಮನೆಮದ್ದನ್ನು ಇಲ್ಲಿ ತಿಳಿಸುತ್ತಾರೆ.
* ಸವಿಯೂಟ : ಬೇರೆ ಬೇರೆ ಜಿಲ್ಲೆಗಳಲ್ಲಿರುವ ಲೇಡೀಸ್ ಕ್ಲಬ್‍ಗಳಿಗೆ ಹೋಗಿ ಅಲ್ಲಿನ ಜನರೊಂದಿಗೆ ಬೆರೆತು, ಅಡುಗೆ ಮಾಂತ್ರಿಕ ಸಿಹಿ ಕಹಿ ಚಂದ್ರು ರವರು ವಿಭಿನ್ನ ಅಡುಗೆ ಡಿಶ್ ಗಳನ್ನು ತಯಾರಿಸುತ್ತಾರೆ.
.
ಇದೆಲ್ಲದರ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಮೊದಲ ಬಾರಿಗೆ ಪ್ರತೀ ಶನಿವಾರ ಮಾಂಸ ಪ್ರಿಯರಿಗಾಗಿ ಸಿದ್ಧವಾಗ್ತಿದೆ ‘ಬೊಂಬಾಟ್ ಬಾಡೂಟ’. ಅಡುಗೆ ಮಾಂತ್ರಿಕ ಆದರ್ಶ್ ತಟಪತಿ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಇದರಲ್ಲಿ ಖಾರ ಮಸಾಲ, ಮಿರ್ಚಿ ಮಸಾಲ ಹಾಗು ನಾಟಿ ಮಸಾಲ ಎಂಬ ವಿಭಾಗಗಳು ಹೊಂದಿರುತ್ತದೆ.

ನಳ ಮಹಾರಾಜ ಸಿಹಿ ಕಹಿ ಚಂದ್ರು ರವರ ನೇತೃತ್ವದಲ್ಲಿ ಶುರುವಾಗುತ್ತಿರುವ ‘ಬೊಂಬಾಟ್ ಭೋಜನ ಸೀಸನ್ 5’ ಇದೇ ಸೋಮವಾರದಿಂದ ಮಧ್ಯಾಹ್ನ 12 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ

 

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin