ನಟ ರಮೇಶ್ ಅರವಿಂದ್ ಮನಗೆದ್ದ “ಆಸೆ” ಧಾರಾವಾಹಿ
ಇತ್ತೀಚೆಗಷ್ಟೇ ಸ್ಟಾರ್ ಸುವರ್ಣ ಪರಿವಾರಕ್ಕೆ ಸೇರ್ಪಡೆಯಾಗಿರುವ “ಆಸೆ” ಧಾರಾವಾಹಿಯು ತನ್ನ ವಿನೂತನ ಕಥಾ ಹಂದರದಿಂದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೊಂದು ಸಾಮಾನ್ಯ ಜನರ ಅಸಮಾನ್ಯ ಕಥೆ. ಚಂದನವನದ ಖ್ಯಾತ ನಟ ರಮೇಶ್ ಅರವಿಂದ್ ರವರು ತುಂಬಾ ಇಷ್ಟ ಪಡುತ್ತಿರುವ ಕಥೆ ಇದಾಗಿದೆ.
ಸಾಮಾನ್ಯವಾಗಿ ಬಡಕುಟುಂಬದಲ್ಲಿ ನಡೆಯುವಂತಹ ಕಷ್ಟ, ನೋವು, ಸಂಕಟ, ಆಸೆ ಎಲ್ಲವನ್ನು ಮನಮುಟ್ಟುವಂತೆ ಈ ಧಾರಾವಾಹಿಯಲ್ಲಿ ಹೇಳಲಾಗಿದೆ. ಸುಂದರ ತಾರಾ ಬಳಗವನ್ನು ಹೊಂದಿರುವ ಈ ಸೀರಿಯಲ್ ನಲ್ಲಿ ಕಲಾವಿದರಂತೂ ಅತ್ಯದ್ಭುತವಾಗಿ ನಟಿಸುತ್ತಿದ್ದಾರೆ. ಪ್ರತಿಯೊಂದು ಪಾತ್ರ ಅದರದ್ದೇ ಆದ ತೂಕ ಹೊಂದಿದೆ. ತಂದೆ ಪಾತ್ರದಲ್ಲಿ ನಟ ಮಂಡ್ಯ ರಮೇಶ್ ಕಾಣಿಸಿಕೊಂಡಿದ್ದಾರೆ.
ಸೂರ್ಯ-ಮೀನಾರ ಕೋಳಿ ಜಗಳ ನೋಡೋದೆ ಸಿಕ್ಕಾಪಟ್ಟೆ ಮಜಾ. ಮೇಕಿಂಗ್ ವಿಚಾರದಲ್ಲಿ ಸಿನಿಮಾವನ್ನು ಮೀರಿಸುತ್ತೆ ಆಸೆ ಸೀರಿಯಲ್‍ನ ಮೇಕಿಂಗ್, ಈಗಾಗಲೇ ಧಾರಾವಾಹಿಯ ಶೀರ್ಷಿಕೆ ಗೀತೆಯಂತೂ ನೋಡುಗರ ಮನಗೆದ್ದು ಪ್ರಶಂಸೆಗೆ ಪಾತ್ರವಾಗಿದೆ.
ಇದೀಗ ಕಥಾ ನಾಯಕಿ ಮೀನಾಳ ಮದುವೆ ತಯಾರಿ ನಡಿಯುತ್ತಿದೆ. ತಪ್ಪದೇ ವೀಕ್ಷಿಸಿ “ಆಸೆ” ಧಾರಾವಾಹಿಯ ರಸಭರಿತ ಸಂಚಿಕೆಗಳು ಸೋಮ-ಶನಿ ರಾತ್ರಿ 7.30ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ನಟ ರಮೇಶ್ ಅರವಿಂದ್ ಪ್ರತಿಕ್ರಿಯೆ ನೀಡಿ, “ಆಸೆ” ನನ್ನ ಮನಸಿಗೆ ತುಂಬಾ ಇಷ್ಟವಾಗಿರೋ ಧಾರಾವಾಹಿ, ಯಾಕಂದ್ರೆ ಸಾಮಾನ್ಯ ಜನರ ಅಸಮಾನ್ಯ ಕಥೆಯಂತಿರೋ ಈ ಸೀರಿಯಲ್ ನಂಗೆ ನ್ಯಾಚುರಲ್ ಫೀಲ್ ಕೊಡ್ತಿದೆ, ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಸಣ್ಣ ಪುಟ್ಟ ವಿಚಾರವನ್ನು ಈ ಕಥೆಯಲ್ಲಿ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಹೀಗಾಗಿ ‘ಆಸೆ’ ಸೀರಿಯಲ್ ನಂಗೆ ತುಂಬಾ ಅಚ್ಚು ಮೆಚ್ಚು ಎಂದಿದ್ದಾರೆ.