ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ’ : ಜೀ಼ ಕನ್ನಡದ ಹೊಸ ಅಧ್ಯಾಯ ಆರಂಭ

ಕನ್ನಡಿಗರ ನೆಚ್ಚಿನ ಜೀ಼ ಕನ್ನಡ ವಾಹಿನಿ ಒಂದು ತಿಂಗಳಲ್ಲಿ 12.2ಮಿಲಿಯನ್ ಮನೆಗಳ 45 ಕ್ಕೂ ಅಧಿಕ ಮಿಲಿಯನ್ ವೀಕ್ಷಕರನ್ನು ತಲುಪಿದ್ದು, ಈಗ ‘ಸದಾ ನಿಮ್ಮೊಂದಿಗೆ’ ಎಂಬ ಬ್ರಾಂಡ್ ಟ್ಯಾಗ್ ಲೈನ್ ಮೂಲಕ ಹೊಸತನದೊಂದಿಗೆ ನಿಮ್ಮ ಮುಂದೆ ಬರಲಿದೆ.
ಕರುನಾಡಿನ ಸಂಸ್ಕೃತಿ ಮತ್ತು ಒಗ್ಗಟ್ಟು ಬಿಂಬಿಸುವ ಜೊತೆಗೆ
‘ಕೂಡಿ ಬಾಳಿದರೆ ಸ್ವರ್ಗ ಸುಖ’ ಎಂಬ ಬಲವಾದ ಅಂಶವನ್ನು ಇಟ್ಟುಕೊಂಡಿದೆ.ಜೀ಼ ಕನ್ನಡದ ಬ್ರಾಂಡ್ ಫಿಲಂ ನಲ್ಲಿ ಕನ್ನಡಿಗರ ವಿಶ್ವಾಸ, ಪ್ರೀತಿ, ಒಗ್ಗಟ್ಟು ಹಾಗು ಹಳೆಯ ಮತ್ತು ಶ್ರೇಷ್ಠವಾದ ಪರಂಪರೆಯನ್ನು ತುಂಬಾ ಸುಂದರವಾಗಿ ಕಂಡುಬಂದಿದೆ.
ಮಂಡ್ಯದ ಕಣ್ಣುಕುಕ್ಕುವ ಪ್ರಕೃತಿ ಸೌಂದರ್ಯದ ನಡುವೆ ಸೆರೆಹಿಡಿಯಲಾದ ಚಿತ್ರದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಮದುವೆ ಕಂಡುಬರುತ್ತದೆ. ಇಲ್ಲಿ ಕಾಣಿಸುವ ಪುರಾತನ ದೇವಸ್ಥಾನ , ರಂಗುರಂಗಾದ ರಂಗೋಲಿ, ಚಪ್ಪರ, ಅರಶಿನ ಶಾಸ್ತ್ರ ಸೇರಿ ಬಗೆ ಬಗೆಯ ಸಾಂಸ್ಕೃತಿಕ ಅಂಶಗಳು ಸುಂದರವಾದ ದೃಶ್ಯಕಾವ್ಯವೇ ಸರಿ!
ಮಗಳ ಮದುವೆಯ ಹಿಂದಿನ ದಿನ ಕರ್ತವ್ಯ ನಿಷ್ಠೆಯ ನಿಮಿತ್ತ ಮತ್ತೆ ಸೈನ್ಯಕ್ಕೆ ಹೋಗುವ ಅಪ್ಪನ ಭಾಗಣೆಗಳನ್ನು ಈ ಚಿತ್ರದಲ್ಲಿ ತುಂಬಾ ಭಾವನಾತ್ಮಕವಾಗಿ ತೋರಿಸಲಾಗಿದೆ. ತಂದೆಯ ಅನುಪಸ್ಥಿತಿಯಲ್ಲಿ ಇಡೀ ಗ್ರಾಮವೇ ತಾಯಿಯ ಬೆಂಬಲಕ್ಕೆ ಬಂದು ಮದುವೆಯ ಒಂದೊಂದು ಜವಾಬ್ದಾರಿಯನ್ನು ಒಬ್ಬೊಬ್ಬರು ಹೊತ್ತುಕೊಂಡು ಸಲೀಸಾಗಿ ಮಗಳ ಮದುವೆಯನ್ನು ನೆರವೇರಿಸಲು ಸಹಾಯ ಮಾಡುತ್ತಾರೆ.
ಸೈನಿಕ ವಾಪಾಸಾದಾಗ ಆತನ ಹೆಂಡತಿ “ಇಷ್ಟು ದೊಡ್ಡ ಕುಟುಂಬವೇ ನಮ್ಮ ಜೊತೆ ಇದ್ದ ಮೇಲೆ, ನಮಗೇನು ಚಿಂತೆ” ಎನ್ನುತ್ತಾಳೆ. “ಕೂಡಿ ಬಾಳಿದರೆ ಸ್ವರ್ಗ ಸುಖ” ಎಂಬುದು ಈ ಅಭಿಯಾನದ ಮುಖ್ಯ ಅಂಶ.
ಜೀ಼ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ ” ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ ಅಭಿಯಾನ ನಾವು ನಮ್ಮ ವೀಕ್ಷಕರ ಜೊತೆಗೆ ಹೊಂದಿರುವ ಭಾವನೆಗಳ ಸಂಭ್ರಮಾಚರಣೆ. ಜೀ಼ ಕನ್ನಡದ ಬ್ರಾಂಡ್ ಫಿಲಂ ಕರ್ನಾಟಕದ ಪರಂಪರೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬಿಂಬಿಸುತ್ತದೆ. ಇದು ಬರೀ ರಿಬ್ರ್ಯಾಂಡಿಂಗ್ ಆಗಿರದೆ ವೀಕ್ಷಕರ ಜೊತೆಗೆ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಮಾಡಲಿದೆ” ಎಂದಿದ್ದಾರೆ.

ಎಲ್ಲಾ ಏಳು ಭಾಷೆಯಲ್ಲಿ ಅಭಿಯಾನ ಏಕಕಾಲದಲ್ಲಿ ಪ್ರದರ್ಶನಗೊಳ್ಳುವುದರೊಂದಿಗೆ ಒಂದೇ ಸಮಯದಲ್ಲಿ ಏಳು ವಿಭಿನ್ನ ಧ್ವನಿಗಳ ಮೂಲಕ ಒಂದೇ ಕಲ್ಪನೆಯನ್ನು ಅನುಭವಿಸುವ ವಿಭಿನ್ನ ಅವಕಾಶ ಪ್ರೇಕ್ಷಕರಿಗೆ ದೊರಕಿದೆ.
ಜೀ಼ ಕನ್ನಡದ ‘ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ’ ಅಭಿಯಾನ ಪ್ರಸಾರ ಆದ ನಂತರ, ಧಾರಾವಾಹಿಗಳು, ನಾನ್ ಫಿಕ್ಷನ್ ಷೋಗಳಲ್ಲಿ ಅಭಿಯಾನದ ಮುಖ್ಯ ದ್ಯೇಯವನ್ನು ಕಥೆ, ಸ್ಕಿಟ್ ಗಳ ಮೂಲಕ ವೀಕ್ಷಕರಿಗೆ ಇನ್ನಷ್ಟು ತಲುಪಿಸುವ ಪ್ರಯತ್ನ ಮಾಡಲಾಗುತ್ತದೆ ‘ಸದಾ ನಿಮ್ಮೊಂದಿಗೆ ನಿಮ್ಮ ಜೀ಼ ಕನ್ನಡ’ ಅಭಿಯಾನದಿಂದ ಜೀ಼ ಕನ್ನಡ ಬರೀ ಕಂಟೆಂಟ್ ಪ್ರೊವೈಡರ್ ಆಗಿರದೇ, ಒಗ್ಗಟ್ಟು, ಮೌಲ್ಯಗಳು, ಸಾಂಸ್ಕೃತಿಕ ಹಾಗು ಕನ್ನಡನಾಡಿನ ಪರಂಪರೆಯನ್ನು ಎತ್ತಿಹಿಡಿದಿದೆ.