New comers come together in Vicharane
ಹೊಸಬರ ‘ವಿಚಾರಣೆ’
ಹೊಸ ತಂಡದ ವಿಚಾರಣೆ ಚಿತ್ರ ಆರಂಭವಾಗಿದೆ. ಆರ್. ಭಾಗ್ಯ ನಿರ್ಮಾಣದ ಚಿತ್ರಕ್ಕೆ ಎನ್. ಅಕುಲ್ ಆಕ್ಷನ್‍ಕಟ್ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕರು ಅಮಾಯಕನೊಬ್ಬ ಪೋಲೀಸರ ಕೈ ಗೆ ಸಿಕ್ಕಿ ಬೀಳುತ್ತಾನೆ. ಯಾವುದೇ ತಪ್ಪು ಮಾಡದಿದ್ದರೂ, ಪೋಲೀಸರಿಂದ ಚಿತ್ರಹಿಂಸೆ ಅನುಭವಿಸುತ್ತಾನೆ. ಅವನು ತಪ್ಪು ಮಾಡಿದ್ದು ಏನು ಅನ್ನೋದು ಸಸ್ಪೆನ್ಸ್.
ಅಮಾಯಕನನ್ನು ಮದುವೆಯಾದ ಹುಡುಗಿ, ಈ ಘಟನೆಯಿಂದ ಎಷ್ಟೆಲ್ಲಾ ತೊಂದರೆ ಅನುಭವಿಸುತ್ತಾಳೆ. ಕೊನೆಗೆ ಆ ಹುಡುಗ ಪೆÇಲೀಸರ ಕೈಯಿಂದಹೊರ ಬರುತ್ತಾನಾ ಇಲ್ಲವಾ ಎನ್ನವುದು ಚಿತ್ರದ ತಿರುಳು. ಪ್ರೀತಿ, ದೌರ್ಜನ್ಯ, ಎಮೋಷನಲ್, ಕಾಮಿಡಿ ಹಾಗು ಸೆಂಟಿಮೆಂಟ್ ಕೂಡ ಇದೆ ಎಂದರು.
ಮಡೆನೂರು ಮನು ಹೀರೋ. ಜಾನು ನಾಯಕಿ. ಇವರಿಗೆ ಮೊದಲ ಅನುಭವ. ಉಳಿದಂತೆ ನಾಗೇಂದ್ರ ಅರಸ್, ಪ್ರಮೋದ್ ಶೆಟ್ಟಿ, ಆದಿ ಕೇಶವ್, ಮಹೇಶ್ ಇತರರು ಇದ್ದಾರೆ. ಚಿತ್ರಕ್ಕೆ ಜಿ.ವಿ.ರಮೇಶ್ ಛಾಯಾಗ್ರಹಣ. ಸತೀಶ್ ಬಾಬು ಸಂಗೀತವಿದೆ.