Hey Bro song released
“ಹೇ ಬ್ರೋ” ಹಾಡು ಬಿಡುಗಡೆ
ಸೂರಜ್ ಮುಖೇಶ್ ನಟನೆಯ “ಹೇ ಬ್ರೋ” ಎಂಬ ಆಲ್ಬಂ ಹಾಡನ್ನು ನಟ ನೀನಾಸಂ ಸತೀಶ್,ನಟ ಪ್ರಮೋದ್ ವಿಡಿಯೋ ಹಾಡ£ ಬಿಡುಗಡೆ ಮಾಡಿದರು. ಧನ್ಯ ರಾಮಕುಮಾರ್, ಅನನ್ಯ ಶೆಟ್ಟಿ, ಶರಣ್ಯ ಶೆಟ್ಟಿ ಹಾಗೂ ಆನಂದ್ ಆಡಿಯೋದ ಆನಂದ್ ಮುಂತಾದವರು ಸಾಕ್ಷಿಯಾದರು.
ಸೂರಜ್ ಮುಖೇಶ್ ಮಾಹಿತಿ ನೀಡಿ ಅಭಿನಯದಲ್ಲಿ ಆಸಕ್ತಿ. ತಂದೆ – ತಾಯಿ ಆಸೆ ಈಡೇರಿಸಿದ್ದಾರೆ. ಮೊದಲ ಹೆಜ್ಜೆಯಾಗಿ ಈ ಹಾಡಿನಲ್ಲಿ ಅಭಿನಯಿಸಿದ್ದೇನೆ. ಸಿನಿಮಾದಲ್ಲಿ ನಟಿಸುವ ಆಸೆ ಇದೆ ಎಂದರು.
ನಿರ್ಮಾಪಕ ಮುಖೇಶ್ ಮಾತನಾಡಿ ಒಳ್ಳೆಯ ಕಥೆ ಸಿಕ್ಕರೆ, ಸಿನಿಮಾ ಕೂಡ ಮಾಡುತ್ತೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕಿ ಸುಮಿತ್ರ ಮುಖೇಶ್ ಇದ್ದರು
“ಹೇ ಬ್ರೋ” ಹಾಡನ್ನು ರಿಕ್ಕಿ ಗೌತಮ್ ಬರೆದು, ನಿರ್ದೇಶನ ಮಾಡಿದ್ದಾರೆ. ವಿಜೇತ್ ಕೃಷ್ಣ ಸಂಗೀತ ನೀಡಿ ಹಾಡಿದ್ದಾರೆ.