Release of party song "Madhupanada Hospatha".

ಸ್ನೇಹಿತರಿಂದ ಸ್ನೇಹಿತರಿಗಾಗಿ “ಮಧುಪಾನ ದ ಹೊಸಪಾಠ” - CineNewsKannada.com

ಸ್ನೇಹಿತರಿಂದ ಸ್ನೇಹಿತರಿಗಾಗಿ “ಮಧುಪಾನ ದ ಹೊಸಪಾಠ”

ಹೊಸವರ್ಷಕ್ಕೆ ಬಂತು ಹೊಸ ಪಾರ್ಟಿ ಸಾಂಗ್.

ಅವರೆಲ್ಲಾ ಸುಮಾರು ಇಪ್ಪತ್ತಕ್ಕೂ ಅಧಿಕ ವರ್ಷಗಳ ಸ್ನೇಹಿತರು. ಅಂತಹ ಸ್ನೇಹವೃಂದದಿಂದ “ಮಧುಪಾನದ ಹೊಸಪಾಠ” ಎಂಬ ಪಾರ್ಟಿ ಸಾಂಗ್ ಹೊಸವರ್ಷದ ಹೊಸ್ತಿಲಿನಲ್ಲಿ ಬಿಡುಗಡೆಯಾಗಿದೆ. ಈ ಕರಿತು ಆಲ್ಬಂ ಸಾಂಗ್ ತಂಡದ ಸದಸ್ಯರು ಮಾಧ್ಯಮದ ಮುಂದೆ ಮಾಹಿತಿ ನೀಡಿದರು.

ನನಗೆ ಕೆಲವುವರ್ಷಗಳಿಂದ rap singer ಆಗಬೇಕೆಂದು ಕನಸು. ಎಷ್ಟೋ ಜನ ಖ್ಯಾತ rap singers ನನಗೆ ಸ್ಪೂರ್ತಿ. ಇಪ್ಪತ್ತು ವರ್ಷಗಳಾದರೂ ನಾನು ಒಂದು ಆಲ್ಬಂ ಸಾಂಗ್ ಬಿಡುಗಡೆ ಮಾಡಲು ಆಗಿರಲಿಲ್ಲ. ಆನಂತರ ನನ್ನ ಗೆಳೆಯ ದಕ್ಷಿಣಮೂರ್ತಿ ಸಿಗುತ್ತಾರೆ. ಈ ಆಲ್ಬಂ ಸಾಂಗ್ ಮಾಡುವ ವಿಚಾರ ತಿಳಿಸುತ್ತಾರೆ. ಆಗ ” ಮಧುಪಾನದ ಹೊಸಪಾಠ” ಆಲ್ಬಂ ಸಾಂಗ್ ನಿರ್ಮಾಣವಾಗುತ್ತದೆ ಎಂದರು ಹಾಡನ್ನು ಬರೆದು‌ ಹಾಡಿರುವ, ಜೊತೆಗೆ ಅಭಿನಯವನ್ನೂ ಮಾಡಿರುವ ಕಂಗ್ಲೀಷ್ ಡ್ಯಾಡಿ ಚಿಕ್ಕು.(ಚಿಕ್ಕ ವೆಂಕಟ ರಾಮು).

ನನಗೆ ಮೊದಲಿನಿಂದಲೂ ಕಲಾವಿದನಾಗಬೇಕೆಂಬ ಕನಸು. ಅದು ಆಗಿರಲಿಲ್ಲ.‌ ಚಿಕ್ಕು ಅವರು ಈ ಹಾಡಿನ ಬಗ್ಗೆ ಹೇಳಿದಾಗ, ಹಾಡು ಇಷ್ಟವಾಯಿತು ನಿರ್ಮಾಣ ಮಾಡಿದ್ದೆ. ನಾನು ಈ ಹಾಡಿನಲ್ಲಿ ಅಭಿನಯಿಸಿದ್ದೇನೆ. ಆರವ್ ರಿಶಿಕ್ ಸಂಗೀತ ನೀಡಿದ್ದಾರೆ.

ಈ ಆಲ್ಬಂ ಹಾಡಿಗೆ ಆರ್ಟಿಸ್ಟಿಕ್ ಡೈರೆಕ್ಟರ್ ಆಗಿ ಶಕ್ತಿ ಆರ್, ನೃತ್ಯ ನಿರ್ದೇಶಕ ಹಾಗೂ ಸಂಕಲನಕಾರರಾಗಿ ಶಿವಾಸ್ ಕೆ ಫಣಿ ಹಾಗೂ ಛಾಯಾಗ್ರಾಹಕರಾಗಿ ನಿರಂಜನ್ ಬೋಪ್ಪಣ್ಣ ಕಾರ್ಯ ನಿರ್ವಹಿಸಿದ್ದಾರೆ. ಸ್ನೇಹಿತರೆ ಸೇರಿ ಮಾಡಿರುವ ಈ ಹಾಡಿಗೆ ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕ ಹಾಗೂ ನಟ ದಕ್ಷಿಣಮೂರ್ತಿ.

ಖ್ಯಾತ ಗಾಯಕ ಅವಿನಾಶ್ ಚೆಬ್ಬಿ ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಕೋರಿದರು.ಸಂಗೀತ ನಿರ್ದೇಶಕ ಆರವ್ ರಿಶಿಕ್, ಆರ್ಟಿಸ್ಟಿಕ್ ಡೈರೆಕ್ಟರ್ ಶಕ್ತಿ ಹಾಗೂ ಸಂಕಲನಕಾರ – ನೃತ್ಯ ನಿರ್ದೇಶಕ ಶಿವಾಸ್ ಕೆ ಫಣಿ “ಮಧುಪಾನದ ಹಿಸಪಾಠ” ದ ಬಗ್ಗೆ ಮಾತನಾಡಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin