`ಸೂಪರ್ ಸಂಡೆ ವಿತ್ ಸುದೀಪ್’ : ಬಿಗ್‍ಬಾಸ್ ಮನೆಯಲ್ಲಿ ಕಿಚ್ಚು
ಭಾನುವಾರದ
ಸೂಪರ್ ಸಂಡೆ ವಿತ್ ಸುದೀಪ್' ಎಪಿಸೋಡಿನಲ್ಲಿ ಮಡಿಕೆ ಒಡೆಯುವ
ಅಗ್ರೆಸಿವ್’ ಆಕ್ಟಿವಿಟಿ ನಡೆಸಿದ್ದ ಸ್ಪರ್ಧಿಗಳ ಕಿಚ್ಚು ಇನ್ನೂ ಆರಿದಂತಿಲ್ಲ. ಬದಲಿಗೆ ಹೊಸ ವಾರದ ಮೊದಲ ದಿನ ಅದು ಜೊರಾಗೇ ಭಗಭಗಿಸುತ್ತಿದೆ. ಅದರ ಪರಿಣಾಮ ಹೇಗಿದೆ ಎನ್ನುವುದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಬಿಂಬಿತವಾಗಿದೆ.
ಬಿಗ್‍ಬಾಸ್ ಮನೆಯ ಸುದ್ದಿಗಳು ನ್ಯೂಸ್ ಚಾನಲ್‍ಗಳಲ್ಲಿ ಪ್ರಸಾರವಾಗುವುದು, ಚರ್ಚೆಯಾಗುವುದನ್ನು ದಿನವೂ ನೋಡುತ್ತೇವೆ. ಆದರೆ ಈ ವಾರ ಬಿಗ್‍ಬಾಸ್ ಮನೆಯೊಳಗೇ ಒಂದು ಸ್ಪೆಷಲ್ ಇದೆ. `ನಮಸ್ಕಾರ, ಬಿಗ್‍ಬಾಸ್ ನ್ಯೂಸ್‍ಗೆ ಸ್ವಾಗತ ಸುಸ್ವಾಗತ ಹೆಡ್‍ಲೈನ್ಸ್’ ಎಂಬ ಧ್ವನಿ ಬಿಗ್‍ಬಾಸ್ ಮನೆಯೊಳಗೇ ಮೊಳಗಿದೆ.
ಅಂದಹಾಗೆ, ಇದು ಈ ವಾರ ಬಿಗ್‍ಬಾಸ್, ಮನೆಯ ಸದಸ್ಯರಿಗೆ ನೀಡಿದ ಹೊಸ ಟಾಸ್ಕ್. ಈ ಟಾಸ್ಕ್‍ನ ಅನ್ವಯ ಸ್ಪರ್ಧಿಗಳು ಬಿಗ್‍ಬಾಸ್ ಮನೆಯೊಳಗಿನ ಘಟನಾವಳಿಗಳು, ಸ್ಪರ್ಧಿಗಳ ವರ್ತನೆಗಳು, ಅವರ ಕುರಿತಾದ ಅಭಿಪ್ರಾಯಗಳನ್ನು ಸುದ್ದಿರೂಪದಲ್ಲಿ ಓದುತ್ತಾರೆ.
ಅದರ ಬಗ್ಗೆ ಪ್ಯಾನಲ್ ಡಿಸ್ಕಶನ್‍ಗಳು ನಡೆಯಲಿವೆ. ತಮ್ಮ ಹೇಳಿಕೆಗಳಿಗೆ ಸ್ಪರ್ಧಿಗಳು ಸ್ಪಷ್ಟೀಕರಣ ನೀಡುತ್ತಾರೆ. ಅದರ ವಿರುದ್ಧವಾಗಿರುವವರು ಅದಕ್ಕೆ ಕೌಂಟರ್ ಕೊಡುತ್ತಾರೆ. ಒಟ್ಟಾರೆ ಇಷ್ಟು ದಿನ ಬಿನ್ ಬ್ಯಾಗ್‍ಗಳಲ್ಲಿ, ಕಿಚನ್‍ನಲ್ಲಿ, ಬೆಡ್‍ರೂಮ್‍ನಲ್ಲಿ, ಜೈಲ್ ಬಾಗಿಲಲ್ಲಿ ನಡೆಯುತ್ತಿದ್ದ ಗುಸುಗುಸು ಪಿಸಪಿಸ ಮಾತುಗಳನ್ನು, ಚರ್ಚೆಗಳನ್ನು ಸ್ಪರ್ಧಿಗಳು ಉಳಿದ ಸ್ಪರ್ಧಿಗಳ ಎದುರಿಗೇ ಆಡಬೇಕಿದೆ. ವಾದ ವಾಗ್ವಾದ ಮಾಡಬೇಕಿದೆ.
ಏನಿದು ಟಾಸ್ಕ್ ಇದರ ಪರಿಣಾಮಗಳೇನು ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‍ಗೆ ಇದು ಹೇಗೆ ಪೂರಕವಾಗಲಿದೆ
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲು ಬಿಗ್‍ಬಾಸ್ ವೀಕ್ಷಿಸಿ.
ಬಿಗ್‍ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಜಿಯೋ ಸಿನಿಮಾದದಲ್ಲಿ ಉಚಿತವಾಗಿ ನೋಡಿ.
ಪ್ರತಿದಿನದ ಎಪಿಸೋಡ್‍ಗಳನ್ನು ಕಲರ್ಸ್ ಕನ್ನಡ ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದಾಗಿದೆ.