Yediyurappa graces the occasion of Janardhan Reddy's grand daughter naming ceremony
ಜನಾರ್ಧನ ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ಗಣ್ಯರ ಹಾಜರಿ

ನಿನ್ನೆ ಬಹಳ ವಿಶೇಷವಾದ ದಿನ ಶುಭ ಶುಕ್ರವಾರದಂದು ಗಾಲಿ ಜನಾರ್ದನ್ ರೆಡ್ಡಿ ಅವರ ಎರಡನೇ ಮೊಮ್ಮಗಳ ನಾಮಕರಣ ಬೆಂಗಳೂರಿನಲ್ಲಿ ನಡೆಯಿತು.
ಪ್ರೀತಿಯ ಮೊಮ್ಮಗಳಿಗೆ ಸಂಸ್ಕೃತದಲ್ಲಿ ತಾಯಿ ಲಕ್ಷ್ಮಿಯ ಮತ್ತೊಂದು ಹೆಸರು “ರಿಧಿರ” ಎಂದು ಹಾಗಾಗಿ ಮೊಮ್ಮಗಳ ಹೆಸರನ್ನು ‘ರಿಧಿರ ರೆಡ್ಡಿ’ ಎಂದು ನಾಮಕರಣ ಮಾಡಲಾಗಿದೆ.
ನಿನ್ನೆ ಬೆಳಗ್ಗಿನಿಂದ ವಿಶೇಷ ಹೋಮ, ಪೂಜೆಯ ಮೂಲಕ ನಿಕಟಪೂರ್ವ ಮುಖ್ಯಮಂತ್ರಿಗಳು ಸನ್ಮಾನ್ಯ ಯಡಿಯೂರಪ್ಪನವರ ಸಮ್ಮುಖದಲ್ಲಿ, ಜೊತೆಗೆ ಸಹೋದರರಾದ ಕರುಣಾಕರ ರೆಡ್ಡಿ, ಸೋಮಶೇಖರ್ ರೆಡ್ಡಿ ಹಾಗೂ ಅನೇಕ ರಾಜಕೀಯ ಮುಖಂಡರು, ಅಭಿಮಾನಿಗಳು ಸ್ನೇಹಿತರು, ಅಧಿಕಾರಿಗಳು, ಗುರು ಹಿರಿಯರು ಸಮಾರಂಭಕ್ಕೆ ಬಂದು ಆಶೀರ್ವದಿಸಿದ್ದಾರೆ.