ಜಪಾನ್ ನಲ್ಲಿ ಮಂಡ್ಯ ರಿಪಬ್ಲಿಕನ್ ಸೆಂಟ್ರಲ್ ಸ್ಕೂಲ್ ಮಕ್ಕಳ ಸಾಧನೆ: ಜಿಲ್ಲೆ,ರಾಜ್ಯಕ್ಕೆ ಹೆಮ್ಮೆ
ಜಪಾನ್ ನ ಇಥಮಿ ನಗರದಲ್ಲಿ ಸಕ್ಕರೆ ನಾಡಿನ ಸೆಂಟ್ರಲ್ ರಿಪಬ್ಲಿಕ್ ಸ್ಕೂಲ್ ನ ಮಕ್ಕಳು ಕರ್ನಾಟಕದ ಬಾವುಟವನ್ನು ವಿದೇಶದಲ್ಲಿ ಹಾರಿಸಿದ್ದಾರೆ. ಇಂತಹ ಅಪರೂಪದ ಸಾಧನೆಯ ಹಿರಿಮೆ ಗರಿಮೆ, ಮಂಡ್ಯ ವಿದ್ಯಾರ್ಥಿಗಳ ಪಾಲಾಗಿದೆ. ವಿದ್ಯಾರ್ಥಿಗಳ ಈ ಸಾಧನೆ ಶಾಲೆಯ ಜೊತೆಗೆ ಪೋಷಕರ ಸಂತಸಕ್ಕೆ ಕಾರಣವಾಗಿದೆ.
ಮಂಡ್ಯ ತಾಲ್ಲೂಕಿನ ಸಿದ್ದಯ್ಯನ ಕೊಪ್ಪಲು ಗ್ರಾಮದ ರಿಪಬ್ಲಿಕನ್ ಸೆಂಟ್ರಲ್ ಸ್ಕೂಲ್ ನ ಇಬ್ಬರು ವಿದ್ಯಾರ್ಥಿಗಳಾದ ಧನ್ಯ ಜಿ ಗೌಡ ಮತ್ತು ಶಾನ್ ಸ್ಟೀವನ್ ಡಾಲ್ಮೇಡ ಜಪಾನ್ ಇಥಮಿ ನಗರದಲ್ಲಿ ಕನ್ಮಡದ ಕಂಪು ಪಸರಿಸಿದ್ದಾರೆ. ಜೊತೆಗೆ ಮಂಡ್ಯ ಜಿಲ್ಲೆಯ ಸಂಸ್ಕತಿಯ ಕೀರ್ತಿ ಪತಾಕೆ ಹಾರಿಸುವ ಜೊತೆಗೆ ಅಲ್ಲಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಶಹಬ್ಬಾಸ್ ಗಿರಿ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸ್ಪೂರ್ತಿ, ಬೆನ್ಮೆಲುಬಾಗಿ ನಿಂತವರು ಶಾಲೆಯ ಅಧ್ಯಕ್ಷ ಮಂಜು. ಮಕ್ಕಳ ಈ ಸಾಧನೆ ಮತ್ತು ಸೆಂಟ್ರಲ್ ರಿಪಬ್ಲಿಕ್ ಸ್ಕೂಲ್ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪ್ರಮುಖ ಕಾರಣಕರ್ತರು.
ಮಂಜು ಅವರ ಜೊತೆ ಶಾಲೆಯ ಇಡೀ ಬಳಗ. ಈ ಕಾರಣದಿಂದಲೇ ಜಪಾನ್ ನಲ್ಲಿ ಮಂಡ್ಯದ ಸೊಗಡಿನ ಜೊತೆಗೆ ರಾಜ್ಯ, ದೇಶದ ಸಂಸ್ಕೃತಿ,,ಆಚಾರ, ವಿಚಾರ ಪರಿಚಯ ಮಾಡುವ ಮೂಲಕ ಸಕ್ಕರೆ ನಾಡಿನ ಹಿರಿಮೆ ಗರಿಮೆಯನ್ನು ದೂರದ ಜಪಾನ್ ನ ಇಥಮಿ ನಗರದಲ್ಲಿ ಅಲ್ಲಿನ ಮಕ್ಕಳೊಂದಿಗೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ.
ಜಪಾನ್ ನಲ್ಲಿ ಇಥಮಿಯಲ್ಲಿ ನಡೆದ ಅಂತರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಲ್ಲಿ ಮಂಡ್ಯದ ರಿಪಬ್ಲಿಕ್ ಸೆಂಟ್ರಲ್ ಶಾಲೆಯ ಇಬ್ಬರು ಶಾಲಾ ಮಕ್ಕಳು ಕನ್ನಡದ ಕಂಪನ್ನು ಅಂತರಾಷ್ಟ್ಟೀಯ ಮಟ್ಟದಲ್ಲಿ ಪಸರಿಸುವ ಮೂಲಕ ಕನ್ನಡದ ಬಾವುಟ ಹಾರಿಸಿದ್ದಾರೆ. ಈ ಮೂಲಕ ಕರ್ನಾಟಕದ ಸಂಸ್ಥೃತಿ,ಆಚಾರ, ವಿಚಾರ, ಭಾಷೆ, ಊಟ, ತಿಂಡಿ, ಉಡುಗೆ ,ತೊಡುಗೆ, ಕಲೆ, ಸಂಸ್ಕೃತಿ ,ಕನ್ನಡದ ಸೊಗಡು, ಭಾಷೆಗಿರುವ ಇತಿಹಾಸ ಸೇರಿದಂತೆ ಮತ್ತಿತರ ವಿಷಯಗಳ ಕುರಿತು ಜಪಾನ್ ಮಕ್ಕಳೊಂದಿಗೆ ಹಂಚಿಕೊಂಡಿದ್ದಾರೆ.
ತಮ್ಮ ಶಾಲೆಯ ಮಕ್ಕಳೊಂದಿಗೆ ಜಪಾನ್ ನ ಅಂತರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಭೇಟಿ ನೀಡಿರುವ ಶಾಲೆಯ ಅಧ್ಯಕ್ಷ ಮಂಜು ಅವರು ಜಪಾನ್ ನ ಇಥಮಿ ನಗರದಿಂದಲೇ ವಿದ್ಯಾರ್ಥಿಗಳ ಸಾಧನೆಯನ್ನು ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ಸಾರೆ.
ಜಪಾನಿನ ಇಥಮಿ ನಗರದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಇಬ್ಬರೂ ವಿದ್ಯಾರ್ಥಿಗಳು ಜಪಾನ್ ನ ವಿದ್ಯಾರ್ಥಿಗಳ ಮನೆಗಳಲ್ಲಿ ಅಲ್ಲಿನ ಸಂಪ್ರದಾಯದಂತೆ ಅವರ ಸಾಂಪ್ರದಾಯಿಕ ಬಟ್ಟೆ ತೊಟ್ಟು ಅ ವಿದ್ಯಾರ್ಥಿಗಳ ಮನೆಯಲ್ಲಿ ಉಳಿದುಕೊಂಡು ಅವರ ಸಂಸ್ಕೃತಿ ,ಆಚಾರ ವಿಚಾರ ಕಲಿಯುವ ಪ್ರಯತ್ನ ಮಾಡುವ ಜೊತೆಗೆ ಕನ್ನಡದ ಕಂಪನ್ನು ಮತ್ತು ಇಲ್ಲಿನ ಆಚಾರ ವಿಚಾರ, ಕಲೆ, ಸಂಸ್ಕೃತಿಯನ್ನು ಹೇಳಿಕೊಡುವ ಕೆಲಸ ಮಾಡಿದ್ದಾರೆ ಎಂದು ಶಾಲೆಯ ಅಧ್ಯಕ್ಷ ಮಂಜು ಮಾಹಿತಿ ನೀಡಿದ್ದಾರೆ.
ಕನ್ನಡದ ಸಂಸ್ಕೃತಿ ಹಾಗೂ ಮಂಡ್ಯದ ಸೊಡಗನ್ನು ಅರ್ಥಪೂರ್ಣವಾಗಿ ಜಪಾನ್ ನಲ್ಲಿ ಹಂಚಿಕೊಳ್ಳಲಾಯಿತು. ಇದರ ಜೊತೆಗೆ ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಪಾನಿನ ತಂತ್ರಗಾರಿಕೆ ವಿದ್ಯಾಭ್ಯಾಸದ ಗುಣಮಟ್ಟವನ್ನು ಮಕ್ಕಳು ಅರಿತುಕೊಂಡಿದ್ದಾರೆ.ಇದರಿಂದ ಭಾಷೆ,ಸಂಸ್ಕೃತಿ,ಆಚಾರ ವಿಚಾರ ಕಲಿಕೆಗೆ ಸಹಕಾರಿಯಾಗಿದೆ ಎಂದಿದ್ದಾರೆ.
ಪಿಥಮಿ ಶಾಲೆಯ ವಿವಿಧ ತರಗತಿಯ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಅವಕಾಶ ದೊರಕಿತ್ತು.ಅಲ್ಲಿನ ಮಕ್ಕಳೊಂದಿಗೆ ಬೆರೆತು ನಮ್ಮ ಕನ್ನಡದ ಸಂಸ್ಕೃತಿಯ ಬಗ್ಗೆ ವಿಸ್ತರಿಸಿ ಹೇಳಲಾಯಿತು ಎಂದಿದ್ದಾರೆ.
ಅಂತರಾಷ್ಡ್ರೀಯ ಮಟ್ಟದಲ್ಲಿ ಶಿಕ್ಷಣ, ತಂತ್ರಜ್ಞಾನ,ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಪ್ರಮುಖ ವೇದಿಕೆಯಾಗಿದೆ. ಇದರ ಜೊತೆಗೆ ಕನ್ನಡದ ಸಂಸ್ಕೃತಿಯನ್ನು ಅಲ್ಲಿನ ಮಕ್ಕಳಿಗೆ ಹೇಳಿ ಅಲ್ಲಿನ ಸಂಸ್ಕೃತಿ ಕಲಿಯುವ ಉದ್ದೇಶ ಇದಾಗಿತ್ತು ಎಂದಿದ್ದಾರೆ.
ಸಾಕಷ್ಟು ಶಾಲೆಯ ಪೈಪೋಟಿಯ ನಡುವೆ ಅಂತರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ರಿಪಬ್ಲಿಕ್ ಸೆಂಟಲ್ ಶಾಲೆಯ ಮಕ್ಕಳು ಆಯ್ಕೆ ಯಾದದ್ದು ಇಡೀ ಆಡಳಿತ ಮಂಡಳಿ,ಶಿಕ್ಷಕರು, ಖುಷಿ ಪಟ್ಟಿದ್ದೆವು.ಜಪಾನ್ ನಲ್ಲಿ ಭಾಗವಹಿಸಿ ವಿಚಾರ ವಿನಿಮಯ ಮಾಡಿಕೊಂಡಿರುವುದು ಖುಷಿಕೊಟ್ಟಿದೆ ಎಂದಿದ್ದಾರೆ.
ವಿದೇಶದಲ್ಲಿ ಕನ್ನಡದ ಕಂಪನ್ನು ಪರಿಸುವ ಮೂಲಕ ಮಂಡ್ಯ ಜಿಲ್ಲೆಯ ಸೆಂಟ್ರಲ್ ರಿಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಕರ್ನಾಟಕ ಮತ್ತು ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಮೂಲಕ ರಿಪಬ್ಲಿಕ್ ಸೆಂಟ್ರಲ್ ಶಾಲೆಯ ಕೀರ್ತಿ ಪತಾಕೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ. ಇದರಿಂದ ಮಂಡ್ಯ ಜಿಲ್ಲೆಯಲ್ಲಿ ಶಾಲೆಯ ಬೆಳವಣಿಗೆಗೆ ಇದು ಮತ್ತಷ್ಡು ಪೂರಕವಾಗಿದೆ.