ಯುವ ಪುಟ್‍ಬಾಲ್ ಆಟಗಾರರಿಗೆ ಪ್ರೋತ್ಸಾಹ; ಜನವರಿ 11 ಮತ್ತು 12 ರಂದು ಪಂದ್ಯಾವಳಿ
ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ವತಿಯಿಂದ ಇಂಟರ್-ಸಿಟಿ ಟೂರ್ನಮೆಂಟ್‍ನ ಪ್ರಥಮ ಆವೃತ್ತಿ ಘೋಷಿಸಿದೆ. ಜನವರಿ 11 ಮತ್ತು 12 ರಂದು ಎಸ್‍ಯುಎಫ್‍ಸಿಯ ಹಲಸೂರಿನಲ್ಲಿ ಪಂದ್ಯಾವಳಿ ನಡೆಯಲಿದ್ದು ಬೆಂಗಳೂರು ಮತ್ತು ಪುಣೆ ಕೇಂದ್ರಗಳಿಂದ ಆರು ವಯೋಮಾನದ ವಿಭಾಗಗಳಲ್ಲಿ 250ಕ್ಕೂ ಹೆಚ್ಚು ಆಟಗಾರರು ಭಾಗಿಯಾಗಲಿದ್ದಾರೆ
ಪಂದ್ಯಾವಳಿ ಮೂಲಕ ತಳಮಟ್ಟದ ಫುಟ್ಬಾಲ್ ಆಟಗಾರಿಗೆ ವೇದಿಕೆ ಒದಗಿಸುವ ಉದ್ದೇಶ ಹೊಂದಲಾಗಿದೆ. ಜೊತೆಗೆ ಉದಯೋನ್ಮುಖ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಪಂದ್ಯಾವಳಿ ಆಯೋಜಿಸಲಾಗಿದೆ.
ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಇಂಟರ್-ಸಿಟಿ ಪಂದ್ಯಾವಳಿ ಅಂಡರ್-7, ಅಂಡರ್-9, ಅಂಡರ್-11, ಅಂಡರ್-13, ಅಂಡರ್-15, ಮತ್ತು ಅಂಡರ್-17 ಸೇರಿ ಆರು ವಯೋಮಾನದ ವಿಭಾಗಗಳಲ್ಲಿ ಪಂದ್ಯಾವಳಿ ನಡೆಯಲಿದೆ.
ಮೊದಲ ದಿನ ರೌಂಡ್- ರಾಬಿನ್ ಪಂದ್ಯಗಳು ಮತ್ತು ಎರಡನೇ ದಿನ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿದೆ. ಜೊತೆಗೆ ಹಿರಿಯ ಆಟಗಾರೊಂದಿಗೆ ಚರ್ಚೆ, ಸಂವಾದವನ್ನೂ ಒಳಗೊಂಡಿದೆ.ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರು ಸ್ಕಾಲರ್ ಶಿಪ್ ಗೆ ಆಯ್ಕೆಯಾಗುವ ಅವಕಾಶ ಪಡೆಯಲಿದ್ದಾರೆ.
ಸೌತ್ ಯುನೈಟೆಡ್ ಫುಟ್‍ಬಾಲ್ ಕ್ಲಬ್‍ನ ಸಿಇಒ ಪ್ರಣವ್ ಟ್ರೆಹಾನ್ ಮಾತನಾಡಿ “ಎಸ್‍ಯುಎಫ್‍ಸಿ ಇಂಟರ್-ಸಿಟಿ ಟೂರ್ನಮೆಂಟ್ ಭಾರತದಲ್ಲಿ ತಳಮಟ್ಟದ ಫುಟ್‍ಬಾಲ್ ಪೆÇ್ರೀತ್ಸಾಹಿಸಿಸುವುದಾಗಿದೆ. ಕೇವಲ ಸ್ಪರ್ಧೆಯಲ್ಲ, ಯುವ ಆಟಗಾರರಿಗೆ ಪಂದ್ಯದ ಅನುಭವ ಪಡೆಯಲು ಮತ್ತು ಚಿಕ್ಕ ವಯಸ್ಸಿನಿಂದಲೇ ತಂತ್ರಗ ಕಲಿಯುವ ಅವಕಾಶ ಸೃಷ್ಟಿಸುವುದಾಗಿದೆ. ಈ ಪ್ರತಿಭಾವಂತ ಕ್ರೀಡಾಪಟುಗಳ ಉಜ್ವಲ ಭವಿಷ್ಯಕ್ಕಾಗಿ ವೇದಿಕೆ ಸಿದ್ಧಪಡಿಸುವ ಅತ್ಯುತ್ತಮ ಫುಟ್‍ಬಾಲ್, ಶಿಕ್ಷಣ ಮತ್ತು ಸಮುದಾಯ ನಿರ್ಮಾಣ ಒಟ್ಟುಗೂಡಿಸುವ ವೇದಿಕೆ ಒದಗಿಸಲು ಉತ್ಸುಕರಾಗಿದ್ದೇವೆ ಎಂದಿದ್ದಾರೆ