India won Test seris againist Bangladesh
ಬಾಂಗ್ಲಾ ವಿರುದ್ದ ಭಾರತಕ್ಕೆ ಸರಣಿ
ಢಾಕಾದಲ್ಲಿ ನಡೆದ ದ್ವಿತೀಯ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ದ ಭಾರತ 3 ವಿಕೆಟ್‍ಗಳ ಜಯ ಸಾಧಿಸಿದೆ. ಈ ಮೂಲಕ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ವೈಟ್ ವಾಶ್ ಮಾಡಿದೆ.
ಏಷ್ಯಾ ಖಂಡದಲ್ಲಿ ಭಾರತಕ್ಕೆ ಸಿಕ್ಕ 16ನೇ ಟೆಸ್ಟ್ ಸರಣಿ ಇದಾಗಿದೆ. ಬಾಂಗ್ಲಾದೇಶ ಒಡ್ಡಿದ 145 ರನ್ ಗೆಲುವಿನ ಗುರಿ ಬೆನ್ನತ್ತಿದ ಭಾರತ ತಂಡ 7 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಈ ಮೂಲಕ ಟೆಸ್ಟ್ ಪಂದ್ಯ ನಾಲ್ಕೇ ದಿನಕ್ಕೆ ಮುಕ್ತಾಯವಾಗಿದೆ.
ಬಾಂಗ್ಲಾದೇಶ ಮೊದಲ ಇನ್ಸಿಂಗ್ಸ್‍ನಲ್ಲಿ 227 ಮತ್ತು ಎರಡನೇ ಇನ್ಸಿಂಗ್ಸ್ ನಲ್ಲಿ 231 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಮೊದಲ ಇನ್ಸಿಂಗ್ಸ್ ನಲ್ಲಿ 314 ರನ್ ಮತ್ತು ಎರಡನೇ ಇನ್ಸಿಂಗ್ಸ್ ನಲ್ಲಿ 145 ರನ್ ಗಳಿಸಿ ಸರಣಿಯನ್ನು ತನ್ನದಾಗಿಸಿಕೊಂಡಿತು.