“ದಿ” ಚಿತ್ರದ ಟ್ರೇಲರ್ ಅನಾವರಣ: ಶುಭಕೋರಿದ ಹಿರಿಯ ನಟ ಮಂಡ್ಯ ರಮೇಶ್
ವಿಭಿನ್ನ ಕಥಾಹಂದರ “ದಿ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರ ಮೇ 16 ರಂದು ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಹಿರಿಯ ನಟ ಮಂಡ್ಯ ರಮೇಶ್ ಚಿತ್ರದ ಟ್ರೇಲರ್ ಅನಾವರಣ ಮಾಡಿ, ಚಿತ್ರ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಹಾರೈಸಿದರು.

“ದಿ” ಚಿತ್ರದಲ್ಲಿ ಮಂಡ್ಯ ರಮೇಶ್ ಅವರ ಪುತ್ರಿ ದಿಶಾ ರಮೇಶ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.ವಿನಯ್ ವಾಸುದೇವ್ ನಿರ್ದೇಶನದ ಜೊತೆಗೆ ನಾಯಕನಾಗೂ ನಟಿಸಿದ್ದಾರೆ.
ನಾಯಕ ಹಾಗೂ ನಿರ್ದೇಶಕ ವಿನಯ್ ವಾಸುದೇವ್ ಮಾತನಾಡಿ ಚಿತ್ರಕ್ಕೆ “ದಿ” ಎಂದು ಹೆಸರಿಡಲು ಮೂರು ಜನ ಮುಖ್ಯ ಕಾರಣ. ಒಂದು ನಟ ಕಿಚ್ಚ ಸುದೀಪ್. ಇನ್ನಿಬ್ಬರು ನನ್ನ ಗುರುಗಳು. ಸುದೀಪ್ ಅಭಿಮಾನಿ ಹಾಗೂ ಇನ್ನಿಬ್ಬರು ಗುರುಗಳ ಹೆಸರಿನಲ್ಲೂ ದಿ ಅಕ್ಷರವಿದೆ ಮತ್ತು ಚಿತ್ರದಲ್ಲೂ ನಾಯಕನ ಹೆಸರು ದೀಪು. “ದಿ” ಚಿತ್ರದ ನಾಯಕಿ ಹೆಸರು ದಿಶಾ ರಮೇಶ್. ಎಲ್ಲಾ ಕಾರಣಗಳಿಂದ ಚಿತ್ರಕ್ಕೆ “ದಿ” ಎಂದು ಶೀರ್ಷಿಕೆ ಇಡಲಾಗಿದೆ ಎನ್ನುವ ವಿವರಣೆ ನೀಡಿದರು

ಇಂಗ್ಲೀಷ್ “ದಿ” ಅಲ್ಲ. ಕನ್ನಡದ “ದಿ”. ಚಿತ್ರದ ಶೇಕಡಾ ಶೇಕಡಾ 80 ರಷ್ಟು ಭಾಗದ ಚಿತ್ರೀಕರಣ ಕಾಡಿನಲ್ಲೇ ನಡೆಯುತ್ತದೆ. ದೇವರಾಯನ ದುರ್ಗ, ದೇವರಮನೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಚಿತ್ರೀಕರಣವಾದ ಸ್ಥಳಗಳ ಹೆಸರಿನಲ್ಲೂ ದ ಅಕ್ಷರವಿದೆ. ಹೀಗೆ ಹಲವು ವಿಶೇಷಗಳಿರುವ ಚಿತ್ರಕ್ಕೆ ನಾನೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದೇನೆ ಜೊತೆಗೆ ನಾಯಕನಾಗೂ ನಟಿಸಿದ್ದೇನೆ. ಚಿತ್ರತಂಡದ ಎಲ್ಲರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಇದೇ ಮೇ 16 ರಂದು ತೆರೆ ಕಾಣಲಿದೆ. ಎಲ್ಲರೂ ನೋಡಿ. ಪೆÇ್ರೀತ್ಸಾಹ ನೀಡಿ ಎಂದರು
ನಾಯಕಿ ದಿಶಾ ರಮೇಶ್ ಮಾತನಾಡಿ ಚಿತ್ರದ ಕಥೆ ಇಷ್ಟವಾಯಿತು. ಟೀಸರ್ ನೋಡಿದ ಮೇಲಂತೂ ನಿರ್ದೇಶಕರು ಹೇಳಿದಕ್ಕಿಂತ ಇನ್ನೂ ಚೆನ್ನಾಗಿ ಮೂಡಿ ಬಂದಿತ್ತು. ಒಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿಯಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ತಿಳಿಸಿದರು.
ನಟಿ ಹರಿಣಿ ಶ್ರೀಕಾಂತ್, ನಟರಾದ ನಾಗೇಂದ್ರ ಅರಸ್, ಡಾಲಾ ಶರಣ್, ಕಲಾರತಿ ಮಹಾದೇವ್, ಛಾಯಾಗ್ರಾಹಕ ಅಲೆನ್ ಭರತ್ , ಸಂಕಲನಕಾರ ಸಿದ್ದಾರ್ಥ್ ಆರ್ ನಾಯಕ್ ಮತ್ತು ಸಂಗೀತ ನಿರ್ದೇಶಕ ಯು.ಎಂ.ಸ್ಟೀವನ್ ಸತೀಶ್ ಮುಂತಾದವರು ” ದಿ” ಚಿತ್ರದ ಕುರಿತು ಮಾತನಾಡಿದರು.


