Arun Karthik's new film "Justice Reloaded" in multilingual

ಬಹುಭಾಷೆಯಲ್ಲಿ ಆರೂನ್ ಕಾರ್ತಿಕ್ ನಿರ್ದೇಶನ ಹೊಸ ಚಿತ್ರ “ಜಸ್ಟೀಸ್ ರೀಲೋಡೆಡ್” - CineNewsKannada.com

ಬಹುಭಾಷೆಯಲ್ಲಿ ಆರೂನ್ ಕಾರ್ತಿಕ್ ನಿರ್ದೇಶನ ಹೊಸ ಚಿತ್ರ “ಜಸ್ಟೀಸ್ ರೀಲೋಡೆಡ್”

ಕನ್ನಡದಲ್ಲಿ ವಿಭಿನ್ನ ಬಗೆಯ ಸಿನಿಮಾ ನೀಡಿರುವ ಪ್ರತಿಭಾನ್ವಿತ ನಿರ್ದೇಶಕ ಆರೂನ್ ಕಾರ್ತಿಕ್ ಇದೀಗ ಕನ್ನಡ, ಹಿಂದಿ, ತೆಲುಗು, ತಮಿಳು ಬಹುಭಾಷೆಯಲ್ಲಿ ” ಜಸ್ಟೀಸ್ ರೀಲೋಡೆಡ್ ” ಚಿತ್ರ ಕೈಗೆತ್ತಿಕೊಂಡಿದ್ದಾರೆ

ಬಹುಭಾಷೆಯ ಚಿತ್ರಕ್ಕೆ ಕಾರ್ತಿಕ್ ವೈ ರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ ಗೋವಾ, ಮುಂಬೈ, ಬೆಂಗಳೂರು, ಬ್ಯಾಂಕಾಕ್, ರಷ್ಯಾ ದಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ಹೊಂದಿದ್ದಾರೆ.

ಹೊಸ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ರೀರೇಕಾರ್ಡಿಂಗ್ ಮತ್ತು ಸಾಹಿತ್ಯ ಸಹ ಆರೋನ್ ಕಾರ್ತಿಕ್ ಅವರದು. “ಜಸ್ಟೀಸ್ ರಿಲೋಡೆಡ್” ಚಿತ್ರದಲ್ಲಿ ಹಲವು ಹಿರಿ ಕಿರಿಯ ಕಲಾವಿದರು ತಂತ್ರಜ್ಞರ ದೊಡ್ಡ ತಂಡವೇ ಇದೇ.ಇದು ಸಹಜವಾಗಿ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಮತ್ತು ಕುತೂಹಲ ಹೆಚ್ಚುವಂತೆ ಮಾಡಿದೆ.

ಚಿತ್ರದಲ್ಲಿ ಕಾರ್ತಿಕ್.ವೈ. ರೆಡ್ಡಿ, ಸರ್ಕಾರ್ ಸಾಹಿಲ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚೇತನ್ ಕೃಷ್ಣ, ಮಾಯಾ ಭಾಸ್ಕರ್, ಕೃತಿ ವರ್ಮಾ, ಜಾನಿ ಲಿವರ್, ಶಬಾಜ್ ಖಾನ್,ರವಿ ಕಾಳೆ, ನಾನಾ ಬಚ್ಚನ್, ಮನೋಜ್ ಮಲ್ಹೋತ್ರಾ, ಗಣೇಶ್ ರಾವ್, ಮನಮೋಹನ್ ರೈ, ಸಾಮ್ರಾಟ್ ಸುರೇಶ್ ಬಾಬು, ವಿಮರ್ಶೆ ನವಾಜ್, ಟಿಕ್‍ಟಾಕ್ ನಾಸಿರ್, ಚೇತನ್ ಕೃಷ್ಣ ಸೇರಿದಂತೆ ಕಲಾವಿದರ ದಂಡು ಚಿತ್ರದಲ್ಲಿದೆ.

ಕಾಟೇರ ಚಿತ್ರ ಖ್ಯಾತಿಯ ಭೂಷಣ್ ಮತ್ತು ಕೃತಿ ವರ್ಮಾ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಮೈಸೂರು ಸ್ವಾಮಿ ಛಾಯಾಗ್ರಾಹಣವಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin