“ಲಂಬೋದರ 2.0” ಚಿತ್ರದ ಶೀರ್ಷಿಕೆ ಬಿಡುಗಡೆ
ಯುವ ನಟ ಅನಿಲ್ ಶೆಟ್ಟಿ ನಟಿಸುತ್ತಿರುವ ಹೊಸ ಚಿತ್ರ “ ಲಂಬೋದರ 2.0 ಚಿತ್ರದ ಶೀರ್ಷಿಕೆ ಬಿಡುಗಡೆ ಆಗಿದ್ದು ಕುತೂಹಲ ಹೆಚ್ಚಿಸಿದೆ.

ಗಣೇಶನ ಹೆಸರಿನಲ್ಲಿ ಸಿನೆಮಾಗಳು ಬರದೆ ಕೆಲವು ವರ್ಷ ಆಯಿತು. ನೀವು ಮತ್ತೆ ಯಾವಾಗ ಬರುತ್ತೀಯ ಎನ್ನುವ ಭಕ್ತರ ಪ್ರಶ್ನೆಗೆ ಉತ್ತರಿಸುವ ಗಣೇಶ ನಾನು ಹೈ ಟೆಕ್ ಆಗಿ ಅಪ್ಡೇಟ್ ಆಗಿದ್ದೀನಿ. ನಿಮ್ಮ ಬಳಿ ಒಬ್ಬನ್ನು ಕಳುಹಿಸುತ್ತಿದ್ದೇನೆ ಆದರೆ ನಿಮ್ಮ ಮೊಬೈಲ್ ಪಾಸ್ವರ್ಡ್ ಗೆ ನೀವೇ ಜವಾಬ್ದಾರರು ಎಂದು ಭಕ್ತರನ್ನು ಎಚ್ಚರಿಸುವ ಟೈಟಲ್ ಟೀಸರ್ ಇದೀಗ ವೈರಲ್ ಆಗಿದೆ.
ನಟ ಅನಿಲ್ ಶೆಟ್ಟಿ ನಿರ್ಮಾಣದಲ್ಲಿ “ಲಂಬೋಧರ 2.0 ಮೂಡಿಬರುತ್ತಿದೆ. ಬ್ಯಾಚುಲರ್ ಪಾರ್ಟಿ “ ಚಿತ್ರ ನಿರ್ದೇಶಕ ಅಭಿಜಿತ್ ಮಹೇಶ್ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದು ಸದ್ಯದಲ್ಲೇ ಚಿತ್ರ ತಂಡ ಘೋಷಣೆಯಾಗಲಿದೆ.

