2021 State Film Awards announced: “Doddatti Borogawda” Best Film: Rakshit Shetty, Archana Jois win Best Actor, Actress awards

2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: “ದೊಡ್ಡಟ್ಟಿ ಬೊರೋಗೌಡ” ಅತ್ಯುತ್ತಮ ಚಿತ್ರ: ರಕ್ಷಿತ್ ಶೆಟ್ಟಿ, ಅರ್ಚನಾ ಜೋಯಿಸ್‍ಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ - CineNewsKannada.com

2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: “ದೊಡ್ಡಟ್ಟಿ ಬೊರೋಗೌಡ” ಅತ್ಯುತ್ತಮ ಚಿತ್ರ: ರಕ್ಷಿತ್ ಶೆಟ್ಟಿ, ಅರ್ಚನಾ ಜೋಯಿಸ್‍ಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ

2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದೆ. ಕೆ,ಎಂ ರಘು ನಿರ್ದೇಶನದ “ದೊಡ್ಡಟ್ಟಿ ಬೋರೇಗೌಡ” ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

ಸಧಬಿರುಚಿಯ ಮತ್ತು ನೈಜ ಸಮಸ್ಯೆ ಮುಂದಿಟ್ಟುಕೊಂಡು ತೆರೆಗೆ ತಂದಿದ್ದ ಚಿತ್ರಕ್ಕೆ ಪ್ರಶಸ್ತಿ ಒಲಿದು ಬಂದಿದೆ, ಇದೇ ವೇಳೆ ಅತ್ಯುತ್ತಮ ಚಿತ್ರಕಥೆಗಾಗಿ ನಿರ್ದೇಶಕ ಕೆ.ಎಂ ರಘುಗೆ ಪ್ರಶಸ್ತಿ ಬಂದಿದೆ. ಚಾರ್ಲಿ -777 ಚಿತ್ರದ ನಟನೆಗಾಗಿ ರಕ್ಷಿತ್ ಶೆಟ್ಟಿ ಮತ್ತು ಮ್ಯೂಟ್ ಚಿತ್ರದ ನಟನೆಗಾಗಿ ಅರ್ಚನಾ ಜೋಯಿಸ್ ಅವರಿಗೆ ಅತ್ಯುತ್ತಮ ನಟ, ನಟ ಪ್ರಶಸ್ತಿ ಒಲಿದೆ.

ಚಾರ್ಲಿ- 777 ಚಿತ್ರ ಒಟ್ಟು ನಾಲ್ಕು ಪ್ರಶಸ್ತಿ ಪಡೆದು ಪ್ರಶಸ್ತಿ ವಿಭಾಗದಲ್ಲಿ ಸಿಂಹ ಪಾಲು ಪಡೆದಿದೆ. ಉಳಿದಂತೆ ದೊಡ್ಡಟ್ಟಿ ಬೋರೇಗೌಡ, ಬಿಸಿಲು ಕುದುರೆ, ಕೇಕ್, ರತ್ನನ್ ಪ್ರಪಂಚ, ತಾಯಿ ಕಸ್ತೂರ್ ಗಾಂಧಿ, ಭಜರಂಗಿ-2 ಚಿತ್ರಗಳು ತಲಾ 2ಪ್ರಶಸ್ತಿ ತನ್ನದಾಗಿಸಿಕೊಂಡಿವೆ

ಹಿರಿಯ ಸಿನಿಮಾ ಪತ್ರಕರ್ತ ಸದಾಶಿವ ಶಣೈ ನೇತೃತ್ವದ ಆಯ್ಕೆ ಸಮಿತಿ ಪ್ರಶಸ್ತಿಗಾಗಿ ಬಂದಿದ್ದ 58 ಚಿತ್ರಗಳ ಪೈಕಿ ಕನ್ನಡದ ಫೀಸಿಕ್ಸ್ ಟೀಚರ್, ಪುಟ್ಟನ ಸ್ವರ್ಗ, ಸಾವಿತ್ರಿ ಚಿತ್ರಗಳು 2021ರಲ್ಲಿ ಸೆನ್ಸಾರ್ ಆಗಿ ಮತ್ತೆ 2022ರಲ್ಲಿ ಮರು ಸೆನ್ಸಾರ್ ಆದ ಹಿನ್ನೆಲೆಯಲ್ಲಿ ಹಾಗು ಡಿಯರ್ ವಿಕ್ರಮ್ ಚಿತ್ರದ ಹೆಸರಿನಲ್ಲಿ ಸೆನ್ಸಾರ್ ಪ್ರಮಾಣ ಪತ್ರ ಇಲ್ಲದ ಹಿನ್ನೆಲೆಯಲ್ಲಿ ಮತ್ತು ಏಕಚಕ್ರ ಚಿತ್ರಗಳನ್ನು ತಾಂತ್ರಿಕ ಕಾರಣಗಳಿಂದ ಸಮಿತಿ ವೀಕ್ಷಣೆ ಮಾಡಿಲ್ಲ, ಇನ್ನುಳಿದ 53 ಚಿತ್ರಗಳನ್ನು ವೀಕ್ಷಿಸಿ ಅವುಗಳನ್ನು ವೀಕ್ಷಣೆ ಮಾಡಿ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದೆ.

ಪ್ರಶಸ್ತಿಗಳ ವಿವರ:

• ದೊಡ್ಡಟ್ಟಿ ಬೊರೋಗೌಡ :

ಅತ್ಯುತ್ತಮ ಮೊದಲ ಚಿತ್ರ ಪ್ರಶಸ್ತಿ: ನಿರ್ಮಾಪಕ ಕೆಸಿಎನ್ ಗೌಡ ಪ್ರಶಸ್ತಿ ಕೆ.ಎಂ ಲೊಕೇಶ್ ಅವರಿಗೆ ಮತ್ತು ನಿರ್ದೇಶಕ ಎಚ್.ಎಲ್ ಎನ್ ಸಿಂಹ ಪ್ರಶಸ್ತಿ ನಿರ್ದೇಶಕ ಕೆ.ಎಂ ರಘು ಅವರಿಗೆ ಸಿಕ್ಕಿದೆ. ಎರಡೂ ಪ್ರಶಸ್ತಿಯೂ ತಲಾ 50 ಗ್ರಾಂ ಚಿನ್ನದ ಪಕದ ಮತ್ತು 1 ಲಕ್ಷ ನಗದು ಬಹುಮಾನ ಹೊಂದಿದೆ

• ಎರಡನೇ ಅತ್ಯುತ್ತುಮ ಚಿತ್ರ : ಚಾರ್ಲಿ -777:

ನಿರ್ಮಾಪಕ : ರಕ್ಷಿತ್ ಶೆಟ್ಟಿ, ನಿರ್ದೇಶಕ ಕಿರಣ್ ರಾಜ್ ಅವರಿಗೆ ತಲಾ 75 ಸಾವಿರ ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ ಒಳಗೊಂಡಿದೆ

• ಮೂರನೇ ಅತ್ಯುತ್ತಮ ಚಿತ್ರ : ಬಿಸಿಲು ಕುದುರೆ:

ನಿರ್ಮಾಪಕ : ಮೆಟಾಫರ್ ಮೀಡಿಯಾ ಹೌಸ್, ಹೃದಯ ಶಿವ ಮತ್ತು ನಿರ್ದೇಶಕ ಹೃದಯ ಶಿವ ಅವರಿಗೆ ತಲಾ 50 ಸಾವಿರ ನಗದು ಮತ್ತು 100 ಗ್ರಾಂ ಬೆಳ್ಳಿಯ ಪದಕ

• ವಿಶೇಷ ಸಾಮಾಜಿಕ ಕಾಳಜಿ ಚಿತ್ರ: ಭಾರತದ ಪ್ರಜೆಗಳಾದ ನಾವು

ನಿರ್ಮಾಪಕ: ಜೈ ಭೀಮ್ ಪ್ರೊಡಕ್ಷನ್, ಡಾ. ಕೃಷ್ಣಮೂರ್ತಿ ಚಮರಂ, ನಿರ್ದೇಶಕ : ಡಾ. ಕೃಷ್ಣಮೂರ್ತಿ ಚಮರಂ ಅವರಿಗೆ ತಲಾ 75 ಸಾವಿರ ನಗದು ಮತ್ತು 100 ಗ್ರಾಂ ಬೆಳ್ಳಿಯ ಪದಕ

• ಅತ್ಯುತ್ತಮ ಮನರಂಜನೆಯ ಚಿತ್ರ: ಯುವರತ್ನ”

ನಿರ್ಮಾಪಕ : ವಿಜಯ್ ಕಿರಂಗದೂರು: ನಿರ್ದೇಶಕ ಸಂತೋಷ್ ಆನಂದ್ ರಾಮ್: ತಲಾ 50 ಸಾವಿರ ನಗದು ಮತ್ತು 100 ಗ್ರಾಮ್ ಬೆಳ್ಳಿಯ ಪದಕ

• ಅತ್ಯುತ್ತಮ ಮಕ್ಕಳ ಚಿತ್ರ: ಕೇಕ್:

ನಿರ್ಮಾಪಕ: ಪರೀಕ್ಷಿತ್ ಎಂ, ನಿರ್ದೇಶಕ: ಕಿಶೋರ್ ಮೂಡಬಿದ್ರಿ: ತಲಾ 50 ಸಾವಿರ ನಗದು ಮತ್ತು 100 ಗ್ರಾಮ್ ಬೆಳ್ಳಿಯ ಪದಕ

• ಅತ್ಯುತ್ತಮ ಪ್ರಥಮ ನಿರ್ದೇಶನದ ಚಿತ್ರ: ಬಡವ ರಾಸ್ಕಲ್

ನಿರ್ಮಾಪಕ : ಡಾಲಿ ಧನಂಜಯ , : ನಿರ್ದೇಶಕ : ಶಂಕರ್ ಎಚ್. ( ಶಂಕರ್ ಗುರು) : ತಲಾ 50 ಸಾವಿರ ನಗದು ಮತ್ತು 100 ಗ್ರಾಮ್ ಬೆಳ್ಳಿಯ ಪದಕ

• ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ: ನಾಡ ಪದ ಆಶಾ (ಕೊಡವ)

ನಿರ್ಮಾಪಕ : ಹರಿಣಿ ಜಿ.ಸಿ, ನಿರ್ದೇಶಕ : ಪ್ರಕಾಶ್ ಕಾರ್ಯಪ್ಪ : ತಲಾ 50 ಸಾವಿರ ನಗದು ಮತ್ತು 100 ಗ್ರಾಮ್ ಬೆಳ್ಳಿಯ ಪದಕ

ಪ್ರಮುಖ ಪ್ರಶಸ್ತಿಗಳು

• ಅತ್ಯುತ್ತಮ ನಟ : ರಕ್ಷಿತ್ ಶೆಟ್ಟಿ- ಚಾರ್ಲಿ- 777
• ಅತ್ಯುತ್ತಮ ನಟಿ: ಅರ್ಚನಾ ಜೊಯಿಸ್: ಮ್ಯೂಟ್
• ಅತ್ಯುತ್ತಮ ಪೋಷಕ ನಟ- ಪ್ರಮೋದ್: ರತ್ನನ್ ಪ್ರಪಂಚ
• ಅತ್ಯುತ್ತಮ ಪೋಷಕ ನಟಿ; ಉಮಾಶ್ರೀ: ರತ್ನನ್ ಪ್ರಪಂಚ
• ಅತ್ಯುತ್ತಮ ಕತೆ: ಮಂಜುನಾಥ್ ಮುನಿಯಪ್ಪ : ಚಿತ್ರ- 9 ಸುಳ್ಳು ಕಥೆಗಳು
• ಅತ್ಯುತ್ತಮ ಚಿತ್ರಕಥೆ: ಕೆ.ಎಂ ರಘು: ಚಿತ್ರ- ದೊಡ್ಡಟ್ಟಿ ಬೋರೇಗೌಡ
• ಅತ್ಯುತ್ತಮ ಸಂಭಾಷಣೆ: ಬರಗೂರು ರಾಮಚಂದ್ರಪ್ಪ “ ತಾಯಿ ಕಸ್ತೂರ್ ಗಾಂಧಿ
• ಅತ್ಯುತ್ತಮ ಛಾಯಾಗ್ರಾಹಕ: ಭುವನೇಶ್ ಪ್ರಭು: ಅಮ್ಟ್ ಸಂಸಾರ ( ಕೊಂಕಣಿ)
• ಅತ್ಯುತ್ತಮ ಸಂಗೀತ: ಇಮ್ತಿಯಾಜ್ ಸುಲ್ತಾನ್ : ಬಿಸಿಲು ಕುದುರೆ
• ಅತ್ಯುತ್ತಮ ಸಂಕಲನ: ಪ್ರತಿಕ್ ಶೆಟ್ಟಿ: ಚಿತ್ರ- ಚಾರ್ಲಿ 777
• ಅತ್ಯುತ್ತಮ ಬಾಲನಟ; ಮಾಸ್ಟರ್ ಅತೀಶ್ ಶೆಟ್ಟಿ : ಚಿತ್ರ- ಕೇಕ್
• ಅತ್ಯುತ್ತಮ ಬಾಲನಟಿ : ಬೇಬಿ ಭೈರವಿ: ಚಿತ್ರ- ಭೈರವಿ
• ಅತ್ಯುತ್ತಮ ಕಲಾ ನಿರ್ದೇಶಕ; ರವಿ ಸಂತೆಹಕ್ಲು : ಚಿತ್ರ ಭಜರಂಗಿ-2
• ಅತ್ಯುತ್ತಮ ಗೀತರಚನೆ: ನಾಗಾರ್ಜು ಶರ್ಮಾ- ಚಿತ್ರ – ಚಾರ್ಲಿ-777 ಹಾಡು : ಮಡಿಲಿನಷ್ಟು ಹನಿಗಳಿದ್ದರು..
• ಅತ್ಯುತ್ತಮ ಹಿನ್ನೆಲೆ ಗಾಯಕ: ಅನೀಶ್ ಕೇಶವ ರಾವ್: ಚಿತ್ರ- ಶ್ರೀ ಜಗನ್ನಾಥ್ ದಾಸರು : ಹಾಡು- ರಾಮ ದೂತನ ಪಾದ
• ಅತ್ಯುತ್ತಮ ಹಿನ್ನೆಲೆ ಗಾಯಕಿ : ಸಹನಾ ಎಂ ಭರಧ್ವಜ್ : ಚಿತ್ರ ದಂಡಿ: ಹಾಡು- ಮುಗಿಲೇ ಮಾತಾಡು ಮನಸಾಗಿ
• ತೀರ್ಪುಗಾರರ ಪ್ರಶಸ್ತಿ:
ತೀರ್ಪುಗಾರರ ವಿಶೇಷ ಚಿತ್ರ: ಭೈರವಿ; ನಿರ್ಮಾಪಕ ಗಣೇಶನ್ ಕುಪ್ಪನ್
ವಸ್ತ್ರ ವಿನ್ಯಾಸ: ಯೋಗಿ ಜಿ ರಾಜ್: ಚಿತ್ರ – ಭಜರಂಗಿ-2
ಪ್ರಸಾದನ: ಶಿವಕುಮಾರ್: ಚಿತ್ರ- ತಾಯಿ ಕಸ್ತೂರ್ ಗಾಂಧಿ
• ಅತ್ಯುತ್ತಮ ನಿರ್ಮಾಣ ನಿರ್ವಾಹಕ: ಶಿವಕುಮಾರ್ ಎಸ್ ( ಶಿವಾರ್ಜುನ್) : ಚಿತ್ರ – ಪೊಗರು

ಅತ್ಯುತ್ತಮ ನಟ ಪ್ರಶಸ್ತಿಯಿಂದ ಹಿಡಿದು ಅತ್ಯುತ್ತಮ ನಿರ್ಮಾಣ ನಿರ್ವಾಹಕ ಪ್ರಶಸ್ತಿ ತನಕ ತಲಾ 20 ಸಾವಿರ ನಗದು ಮತ್ತು 100 ಗ್ರಾಮ್ ಬೆಳ್ಳಿಯ ಪದಕ ಒಳಗೊಂಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin