“ವೈಲ್ಡ್ ಟೈಗರ್ ಸಫಾರಿ” ಮೂಲಕ ಮಂಗಳೂರಿನ ಗ್ಯಾಂಗ್‍ಸ್ಟರ್ ಕಥೆ ಅನಾವರಣ
“ವೈಲ್ಡ್ ಟೈಗರ್ ಸಫಾರಿ” ಮೂಲಕ ಮಂಗಳೂರಿನ ಗ್ಯಾಂಗ್ ಸ್ಟಾರ್ಸ್ ಕಥೆ ಹೇಳಲು ನಿರ್ದೇಶಕ ಚಂದ್ರಮೌಳಿ ಸಜ್ಜಾಗಿದ್ದು ಚಿತ್ರದ ಮೂಲಕ ಸುಶಾಂತ್ ಪೂಜಾರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣ ಕೊನೆ ಹಂತಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಖಳನಟನ ಫಸ್ಟ್ ಲುಕ್ ಅನಾವರಣ ಮಾಡಿದೆ,

ಶಿಥಿಲ್ ಪೂಜಾರಿ ನಾಯಕನಾಗಿ ಅಭಿನಯ ಮಾಡುತ್ತಿರುವ “ವೈಲ್ಡ್ ಟೈಗರ್ ಸಫಾರಿ” ಚಿತ್ರದಲ್ಲಿ ಸುಶಾಂತ್ ಪೂಜಾರಿ ಖಳನಾಯಕನಾಗಿ ಅಭಿನಯಿಸುತ್ತಿದ್ದಾರೆ, ಸುಶಾಂತ್, ಅಮರ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಪೆÇೀಸ್ಟರ್ ಸಖತ್ ವೈಲ್ಡ್ ಆಗಿದ್ದು ಕ್ರೂರತೆ ಎದ್ದು ಕಾಣ್ತಿದೆ. ಇಡೀ ಸಿನಿಮಾದಲ್ಲಿ ಹೆಚ್ಚು ಕ್ರೂರತ್ವ ತುಂಬಿರುವ ಪಾತ್ರ ಇದಾಗಿದ್ದು ಹುಲಿಗಳ ಸಾಮ್ರಾಜ್ಯದಲ್ಲಿ ಅತೀ ಹೆಚ್ಚು ಕ್ರೂರ ಹುಲಿ ಅಂದ್ರೆ ಇದೇ ಅನ್ನೋನರೀತಿಯಲ್ಲಿ ಈ ಪಾತ್ರದ ಪರಿಚಯ ಮಾಡ್ತಾರೆ ನಿರ್ದೇಶಕ ಚಂದ್ರಮೌಳಿ .
ಕನ್ನಡ ಸೇರಿದಂತೆ ಬಾಲಿವುಡ್ ಸ್ಟಾರ್‍ಗಳು ಕೂಡ ಅಭಿನಯ ಮಾಡುತ್ತಿದ್ದಾರೆ..ವೈಲ್ಡ್ ಟೈಗರ್ ಸಫಾರಿ ಸಿನಿಮಾ ಕನ್ನಡ ಹಾಗೂ ಹಿಂದಿ ಎರಡು ಭಾಷೆಯಲ್ಲಿ ತೆರೆಗೆ ಬರಲಿದೆ. ಚಿತ್ರದಲ್ಲಿ ಶಿಥಿಲ್ ಪೂಜಾರಿ ಸೇರಿದಂತೆ ಬಾಲಿವುಡ್‍ನ ಜನಪ್ರಿಯ ಡ್ಯಾನ್ಸರ್ ಗಳಾದ ಸುಶಾಂತ್ ಪೂಜಾರಿ, ಧರ್ಮೇಶ್ ಇನ್ನು ಅನೇಕರು ಅಭಿನಯಿಸಿದ್ದಾರೆ

ಚಿತ್ರಕ್ಕೆ ನಿಮಿಕಾ ರತ್ನಾಕರ್ ನಾಯಕಿಯಾಗಿದ್ದಾರೆ. ಚಿತ್ರಕ್ಕೆ ಚಂದ್ರಮೌಳಿ .ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡುತ್ತಿದ್ದಾರೆ. ಸಚಿನ್ ಬಸರೂರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ..ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ ಸಿನಿಮಾಗಿದೆ..
ವಿನೋದ್ ಕುಮಾರ್ ನಿರ್ಮಾಣ ಮಾಡುತ್ತಿದ್ದು ಗುರುದತ್ತ ಗಾಣಿಗ ಹಾಗೂ ಕಿಶೋರ್ ಕುಮಾರ್ ಸಹ ನಿರ್ಮಾಪಕರಾಗಿದ್ದಾರೆ. ಸದ್ಯ ಬಹುತೇಕ ಚಿತ್ರೀಕರಣ ಕಂಪ್ಲೀಟ್ ಮಾಡಿರೋ ವೈಲ್ಡ್ ಟೈಗರ್ ಸಫಾರಿ ಸಿನಿಮಾ ತಂಡ ಶೀಘ್ರದಲ್ಲೇ ಚಿತ್ರೀಕರಣ ಮುಗಿಸಿ ತೆರೆಗೆ ಬರಲಿದೆ.

