Actor Kiccha Sudeep Lucky: Brat movie will be a hit: Director Shashank

ನಟ ಕಿಚ್ಚ ಸುದೀಪ್ ಲಕ್ಕಿ: ಬ್ರಾಟ್ ಚಿತ್ರ ಹಿಟ್ ಆಗುತ್ತೆ- ನಿರ್ದೇಶಕ ಶಶಾಂಕ್ ವಿಶ್ವಾಸ - CineNewsKannada.com

ನಟ ಕಿಚ್ಚ ಸುದೀಪ್ ಲಕ್ಕಿ: ಬ್ರಾಟ್ ಚಿತ್ರ ಹಿಟ್ ಆಗುತ್ತೆ- ನಿರ್ದೇಶಕ ಶಶಾಂಕ್ ವಿಶ್ವಾಸ

“ನಟ ಕಿಚ್ಚ ಸುದೀಪ್ ನನಗೆ ಹಾಗೂ ಕೃಷ್ಣ ಇಬ್ಬರಿಗೂ ಬಹಳ ಲಕ್ಕಿ. ಏಕೆಂದರೆ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಬಂದ ಹಿಂದಿನ ಚಿತ್ರ “ಕೌಸಲ್ಯ ಸುಪ್ರಜ ರಾಮ” ಚಿತ್ರದ ಟ್ರೇಲರ್ ಅನ್ನು ಸುದೀಪ್ ಅವರೆ ಅನಾವರಣ ಮಾಡಿದ್ದರು ಚಿತ್ರ ಹಿಟ್ ಆಗಿತ್ತು, “ಬ್ರಾಟ್” ಚಿತ್ರ ಕೂಡ ಹಿಟ್ ಆಗುತ್ತೆ..”

ಹೀಗಂತ ಹೇಳಿದರು ನಿರ್ದೇಶಕ ಶಶಾಂಕ್, “ಬ್ರ್ಯಾಟ್” ಚಿತ್ರದ ಟ್ರೇಲರ್ ಅನ್ನು ಸುದೀಪ್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರ ಅಂತಲೇ ನಿರ್ಮಾಣ ಮಾಡಿದ್ದು. ತರಹ ಈವರೆಗೂ ಟೀಸರ್ ಹಾಗೂ ಹಾಡುಗಳನ್ನು ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡಿಕೊಂಡು ಬಂದಿದ್ದೇವೆ. ಆದರೆ ಟ್ರೇಲರ್ ಇಂದು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದೆ ಎಂದರು

ಬೇರೆ ಭಾಷೆಗಳ ಟ್ರೇಲರ್ ಅನಾವರಣವಾಗಲಿದೆ. ಚಿತ್ರತಂಡದ ಸಹಕಾರದಿಂದ “ಬ್ರ್ಯಾಟ್” ಒಂದೊಳ್ಳೆ ಚಿತ್ರವಾಗಿ ನಿರ್ಮಾಣವಾಗಿದೆ. ಇದೇ ಅಕ್ಟೋಬರ್ 31 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಎಲ್ಲರ ಪ್ರೋತ್ಸಾಹವಿರಲಿ ಎಂದು ಕೇಳಿಕೊಂಡರು

ಕಿಚ್ಚ ಸುದೀಪ್ ಮಾತನಾಡಿ ನಿರ್ದೇಶಕ ಶಶಾಂಕ್ ಒಬ್ಬರು ಒಳ್ಳೆಯ ಕಥೆಗಾರ. ಅವರ ನಿರ್ದೇಶನದ ಚಿತ್ರ ಎಂದ ಮೇಲೆ ಚೆನ್ನಾಗಿರುತ್ತದೆ. ಡಾರ್ಲಿಂಗ್ ಕೃಷ್ಣ ಕೂಡ ಉತ್ತಮ ನಟ. ಇವರಿಬ್ಬರ ಕಾಂಬಿನೇಶನ್ ನಲ್ಲಿ ಮೂಡಿಬಂದಿದ್ದ “ಕೌಸಲ್ಯ ಸುಪ್ರಜ ರಾಮ” ಚಿತ್ರ ಕೂಡ ಬಿಗ್ ಹಿಟ್ ಆಗಿತ್ತು. ಈ ಚಿತ್ರ ಕೂಡ ಸೂಪರ್ ಹಿಟ್ ಆಗಲಿ ಎಂದು ಹಾರೈಸಿದರು.

ನಾಯಕ ಡಾರ್ಲಿಂಗ್ ಕೃಷ್ಣ ಮಾತನಾಡಿ “ಕೌಸಲ್ಯ ಸುಪ್ರಜ ರಾಮ” ಚಿತ್ರದ ನಂತರ ಶಶಾಂಕ್ ನಾಲ್ಕೈದು ಕಥೆಗಳನ್ನು ಹೇಳಿದರು. ಈ ಕಥೆ ನನಗೆ ಬಹಳ ಇಷ್ಟವಾಯಿತು. ಈಗಾಗಲೇ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳು ಹಾಗೂ ಚಿತ್ರದ ಟೀಸರ್ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದರು

ನಿರ್ಮಾಪಕ ಮಂಜುನಾಥ್ ಕಂದಕೂರ್ ಮಾತನಾಡಿ ಕ್ರಿಕೆಟ್ ಕುರಿತಾದ “ಬ್ರ್ಯಾಟ್” ಚಿತ್ರದ ಟ್ರೇಲರ್ ಸುದೀಪ್ ಅವರಿಂದ ಬಿಡುಗಡೆಯಾಗಿದ್ದು ಬಹಳ ಸಂತೋಷವಾಗಿದೆ. ಚಿತ್ರದ ನಾಯಕ ಡಾರ್ಲಿಂಗ್ ಕೃಷ್ಣ ಅವರು ಸಹ ಒಳ್ಳೆಯ ಕ್ರಿಕೆಟ್ ಆಟಗಾರರು ಚಿತ್ರವನ್ನು ಶಶಾಂಕ್ ಅವರು ಬಹಳ ಚೆನ್ನಾಗಿ ನಿರ್ದೇಶಿಸಿದ್ದಾರೆ. ಅದಕ್ಕೆ ಸಂಪೂರ್ಣ ಚಿತ್ರತಂಡ ಸಾಥ್ ನೀಡಿದ್ದಾರೆ ಎಂದರು

ನಾಯಕಿ ಮನಿಶಾ ಕಂದಕೂರ್ ಸಹ ಚಿತ್ರ ಹಾಗೂ ತಮ್ಮ ಪಾತ್ರದ ಕುರಿತು ಮಾತನಾಡಿದರು.

ಚಿತ್ರದಲ್ಲಿ ನಟಿಸಿರುವ ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು, ಆನಂದ್ ಆಡಿಯೋ ಆನಂದ್, ಗಾಯಕ ಬಾಳು ಬೆಳಗುಂದಿ, ಗಾಯಕಿ ಲಹರಿ, ನಿರ್ಮಾಪಕರ ಸಹೋದರ ಬದರಿನಾಥ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin