"Jinugo Male" romantic album song released

ಜಿನುಗೋ ಮಳೆ” ರೊಮ್ಯಾಂಟಿಕ್ ಆಲ್ಬಂ ಹಾಡು ಬಿಡುಗಡೆ - CineNewsKannada.com

ಜಿನುಗೋ ಮಳೆ” ರೊಮ್ಯಾಂಟಿಕ್ ಆಲ್ಬಂ ಹಾಡು ಬಿಡುಗಡೆ

ದೀಪ್ತಿ ಆಕಾಶ್ ನಿರ್ಮಿಸಿರುವ, ಬಿಗ್ ಬಾಸ್ ಖ್ಯಾತಿಯ ಧನುಷ್ ಗೌಡ ಹಾಗೂ ಸ್ಪಂದನಾ ಸೋಮಣ್ಣ ಅಭಿನಯದ ‘ಜಿನುಗೋ ಮಳೆ’ ಎಂಬ ಆಲ್ಬಂ ಸಾಂಗ್ ಬಿಡುಗಡೆಯಾಗಿದೆ. ಚಿತ್ರಕ್ಕೆ ಆಕಾಶ್ ನಿರ್ದೇಶನವಿದೆ.

ನಾಯಕ ಧನುಷ್ ಗೌಡ ಮಾತನಾಡಿ ಪಿಆರ್ ಕೆ ಸಂಸ್ಥೆಯಡಿ ಕೆಲಸ ಮಾಡಬೇಕು ಎನ್ನುವುದು ನನಗೆ ಬಹಳ ದಿನಗಳಿಂದ ಆಸೆ ಇತ್ತು. ಅದು ಆಲ್ಬಂ ಹಾಡಿನ ಮೂಲಕ ನೆರವೇರಿದೆ. ಮೂಡಿಗೆರೆಯಲ್ಲಿ 3 ದಿನಗಳ ಕಾಲ ಈ ಹಾಡನ್ನು ಶೂಟ್ ಮಾಡಿದ್ದೇವೆ. ಶೂಟಿಂಗ್ ಟೈಮಲ್ಲಿ ಎಲ್ಲರೂ ಫ್ಯಾಮಿಲಿ ಥರ ಸೇರಿ ಕೆಲಸ ಮಾಡಿದ್ದೇವೆ. ಇದೊಂದು ರೊಮ್ಯಾಂಟಿಕ್ ಸಾಂಗ್ ಆಗಿದ್ದು, ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದರು.

ಸ್ಪಂದನಾ ಸೋಮಣ್ಣ ಮಾತನಾಡಿ ಜಿನುಗೋ ಮಳೆ ಒಂದು ರೊಮ್ಯಾಂಟಿಕ್ ಹಾಡ, ಧನುಷ್ ಗೌಡ ಲೀಡ್ ರೋಲ್ ಮಾಡಿದ್ದೇವೆ. ಆಕಾಶ್‍ಈ ಹಾಡಿನ ನಿರ್ದೇಶನದ ಜತೆಗೆ ನಿರ್ಮಾಣ ಸಹ ಮಾಡಿದ್ದಾರೆ. ಉಪೇಂದ್ರ ಜತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಹೋದರ ಅವಿನಾಶ್ ಈ ಹಾಡಿಗೆ ರಾಗಸಂಯೋಜನೆ ಮಾಡಿದ್ದಾರೆ. ಸಿನಿಮಾ ಕ್ವಾಲಿಟಿಯಲ್ಲಿ ಈ ಹಾಡನ್ನು ಮಾಡಿದ್ದೇವೆ, ಎಲ್ಲರೂ ಹರಸಿ ಎಂದರು.

ನಿರ್ದೇಶಕ ಹಾಗೂ ನಿರ್ಮಾಪಕ ಆಕಾಶ್ ಮಾತನಾಡಿ ಆರಂಭದಲ್ಲಿ ಇದೇ ಕಾನ್ಸೆಪ್ಟ್ ಇಟ್ಟುಕೊಂಡು ಶಾರ್ಟ್ ಫಿಲಂ ಮಾಡಬೇಕು ಎಂದುಕೊಂಡಿದ್ದೆ. ಇದಕ್ಕೆ ನಾಗಾರ್ಜುನ ಶರ್ಮಾ ಅವರಿಂದಲೇ ಲಿರಿಕ್ ಬರೆಸಬೇಕು ಎಂದುಕೊಂಡಿದ್ದೆ. ಅವರು ಬ್ಯುಸಿ ಇದ್ದರೂ ಒಳ್ಳೆ ಲೈನ್ ಇಟ್ಟುಕೊಂಡು ಹಾಡು ರಚಿಸಿದ್ದಾರೆ. ಹಾಡಿನ ಪ್ರತಿಯೊಂದು ಸಾಲಿನಲ್ಲೂ ಅರ್ಥವಿದೆ. ರೀಲ್ಸ್ , ಡಾನ್ಸ್ ಮಾಡುವವರಿಗೆ ಒಳ್ಳೆ ಹುಕ್ ಸ್ಟೆಪ್ಟ್ ಈ ಹಾಡಲ್ಲಿದೆ. ರೀಲ್ಸ್ ಮಾಡಿದವರಿಗೆ ಗಿಫ್ಟ್ ಕೂಡ ಇದೆ. ನಮ್ಮ ತಂಡದ ಪ್ರತಿಯೊಬ್ಬರೂ ಶೃದ್ದೆಯಿಂದ ಕೆಲಸ ಮಾಡಿದ್ದಾರೆ ಎಂದರು.

ಸಂಗೀತ ನಿರ್ದೇಶಕ ಅವಿನಾಶ್ ಮಾತನಾಡಿ ಬೇರೆ ಭಾಷೆಗಳಲ್ಲಿ ಸಿಂಗಲ್ಸ್ ದೊಡ್ಡಮಟ್ಟದಲ್ಲಿ ಹೆಸರು ಮಾಡ್ತಿವೆ. ಇತ್ತೀಚೆಗೆ ಕನ್ನಡದಲ್ಲೂ ಸಹ ಆ ಟ್ರೆಂಡ್ ಸೃಷ್ಟಿಯಾಗಿದೆ. ನಿರ್ದೇಶಕ ಆಕಾಶ್ ಸಿನಿಮಾ ಮಾಡುವ ಆಸಕ್ತಿ ಇಟ್ಟುಕೊಂಡು ಬಂದವರು. ಸದ್ಯದಲ್ಲೇ ಮಾಡುತ್ತಾರೆ ಎಂದು ಹೇಳಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin