ತಲೈವಾ ಹೊಸ ಸಿನಿಮಾ “ಧರ್ಮನ್”ಗೆ ಹಿರಿಯ ನಟ ಕಮಲ್ ಹಾಸನ್ ನಿರ್ಮಾಣ
ಸೂಪರ್ ಸ್ಟಾರ್ ಕಮಲ್ ಹಾಸನ್ ಒಡೆತನದ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ನಿರ್ಮಾಣ ಮಾಡುತ್ತಿರುವ ಬಹು ನಿರೀಕ್ಷಿತ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಿರುವ 173ನೇ ಸಿನಿಮಾ.
ಚೆನ್ನೈನಲ್ಲಿ ನಡೆದ ಪೂಜಾ ಸಮಾರಂಭದಲ್ಲಿ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಅನಾವರಣ ಮಾಡಲಾಯಿತು. ಈ ಸಿನಿಮಾಗೆ ಧರ್ಮನ್ ಎಂದು ಶೀರ್ಷಿಕೆ ಇಡಲಾಗಿದೆ.ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡದ ಜೊತೆ ತಮಿಳು ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು ಭಾಗಿಯಾಗಿದ್ದರು. ಫಸ್ಟ್ ಲುಕ್ ತುಂಬಾ ಆಕರ್ಷಕವಾಗಿದ್ದು, ಡಾಕ್ಟರ್ ಡ್ರೆಸ್ನಲ್ಲಿ ರಜನಿಕಾಂತ್ ಕೈಯಲ್ಲಿ ಒಂದು ಚಿಕ್ಕ ಬ್ಯಾಂಡೇಜ್ನೊಂದಿಗೆ, ರಕ್ತ ಸುರಿಯುವ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ರಜನಿಕಾಂತ್ ಜೊತೆಗೆ ನಟಿಯರಾದ ಸಿಮ್ರಾನ್ ಮತ್ತು ರಾಶಿ ಖನ್ನಾ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾಗೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ, ಸಂಕಲನ ಮತ್ತು ಸಾಹಸವನ್ನು ನಿಕೇತ್ ಬೊಮ್ಮಿ, ಪ್ರದೀಪ್ ಇ ರಾಗವ್ ಮತ್ತು ಅನ್ಬರಿವ್ ನಿರ್ವಹಿಸಲಿದ್ದಾರೆ. ಅಣ್ಣಾ ದೊರೈ ಕಲಾ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಕಮಲ್ ಹಾಸನ್ ಹಾಗೂ ಆರ್. ಮಹೇಂದ್ರನ್ ನಿರ್ಮಾಣ ಮಾಡುತ್ತಿರುವ ಧರ್ಮನ್ ಸಿನಿಮಾಗೆ ‘ಓ ಮೈ ಕಡವುಲೆ’ ಮತ್ತು ‘ಡ್ರ್ಯಾಗನ್’ ಖ್ಯಾತಿಯ ಅಶ್ವಥ್ ಮಾರಿಮುತ್ತು ನಿರ್ದೇಶನದ ಮಾಡುತ್ತಿದ್ದಾರೆ.

