‘ಸಿಟಿ ಲೈಟ್ಸ್’ ಚಿತ್ರದ ‘ಕಂದಮ್ಮ ಕಂದಮ್ಮ ಹಾಡು ಬಿಡುಗಡೆ : ನಿರೀಕ್ಷೆ ಹೆಚ್ಚಿಸಿದ ಸಿನಿಮಾ
ಸಲಗ, ಭೀಮ ಚಿತ್ರದ ನಂತರ ಸ್ಯಾಂಡಲ್ವುಡ್ ಸಲಗ ವಿಜಯ್ ಕುಮಾರ್ ನಿರ್ದೇಶನದ “ಸಿಟಿ ಲೈಟ್ಸ್” ಚಿತ್ರದ ಕಂದಮ್ಮ ಕಂದಮ್ಮ ಚಿತ್ರದ ಹಾಡು ಬಿಡುಗಡೆಯಾಗಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಹೆಚ್ಚು ಮಾಡಿದೆ.

ಸಿಟಿ ಲೈಟ್ಸ್ ಚಿತ್ರದ ಮೂಲಕ ವಿಜಯ್ ಕುಮಾರ್ ಅವರ ಪುತ್ರಿ ಮೋನಿಶಾ ವಿಜಯ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ, ಒಂದೇ ಚಿತ್ರದಲ್ಲಿ ಅಪ್ಪ- ಮಗಳ ಜುಗಲ್ ಬಂಧಿ ಇರಲಿದೆ,ಚಿತ್ರದಲ್ಲಿ ನಾಯಕರಾಗಿ ವಿನಯ್ ರಾಜ್ ಕುಮಾರ್ ನಟಿಸಿದ್ದಾರೆ
‘ಕಂದಮ್ಮ ಕಂದಮ್ಮ’ ಹಾಡಿಗೆ ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದು ಚರಣ್ ರಾಜ್ ಸಂಗೀತ ಹಾಗು ಸಂಚಿತ್ ಹೆಗಡೆ ಹಾಡಿಗೆ ಧ್ವನಿಯಾಗಿದ್ದಾರೆ.
ಹಾಡು ಬಿಡುಗಡೆ ಬಳಿಕ ಮಾತಿಗಿಳಿದ ನಿರ್ದೇಶಕ ವಿಜಯ್ ಕುಮಾರ್, ಚಿತ್ರೀಕರಣ ಮುಗಿದ ನಂತರ ಚಿತ್ರಕ್ಕೆ ನಿರ್ದೇಶಕರಿಗೆ ಮತ್ತೆ ಜೀವ ತುಂಬುವುದು ಸಂಗೀತ ನಿರ್ದೇಶಕ ಮತ್ತು ಸಾಹಿತಿ. ‘ಸಲಗ’ ಚಿತ್ರದಿಂದಲೂ ಚರಣ್ ರಾಜ್ ಹಾಗೂ ನಾಗಾರ್ಜುನ ಶರ್ಮಾ ಉತ್ತಮ ಸಾಹಿತ್ಯ-ಸಂಗೀತ ನೀಡುತ್ತಿದ್ದಾರೆ ಎಂದರು
ಪ್ರೀತಿಯಿಂದ ‘ಚಿನ್ನಮ್ಮ, ಕಂದಮ್ಮ, ಬಂಗಾರಿ’ ಎಂದು ಕರೆಯುವ ಮುಗ್ಧ ಭಾವನೆಯನ್ನು ಆಧಾರವಾಗಿಟ್ಟುಕೊಂಡು ಈ ಹಾಡನ್ನು ರೂಪಿಸಲಾಗಿದೆ. ಹಾಡಿನ ದೃಶ್ಯಾವಳಿಯಲ್ಲಿ ಮಕ್ಕಳಿಗೆ ಜಂಕ್ ಫುಡ್ ಹಾಗೂ ಕೃತಕ ಬಣ್ಣಗಳ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸುವ ಸಣ್ಣ ಸಂದೇಶವನ್ನೂ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು

ನಟ ವಿನಯ್ ರಾಜ್ಕುಮಾರ್ ಮಾತನಾಡಿ ವಿಜಯ್ ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದು ಆರಾಮದಾಯಕವಾಗಿತ್ತು. ಸಂಚಿತ್ ಹೆಗಡೆ ಅವರ ಗಾಯನ ಹಾಗೂ ಸಾಂಗ್ನ ಭಾವನೆಗಳು ಅದ್ಭುತವಾಗಿ ಮೂಡಿಬಂದಿವೆ ಎಂದರು
ನಟಿ ಮೋನಿಷಾ ವಿಜಯ್ ಮಾತನಾಡಿ ‘ಸಿಟಿ ಲೈಟ್ಸ್’ ಆಲ್ಬಂನಲ್ಲಿ ‘ಕಂದಮ್ಮ ಕಂದಮ್ಮ’ ನೆಚ್ಚಿನ ಹಾಡು. ಸೆಟ್ನಲ್ಲಿ ತಂದೆ ಪ್ರೊಫೆಷನಲ್ ಹಾಗೂ ಕಟ್ಟುನಿಟ್ಟಾಗಿ ಅಭಿನಯ ಮಾಡಿಸಿದ್ದಾರೆ ಎಂದು ಹೇಳಿದರು
ನಾಗಾರ್ಜುನ ಶರ್ಮಾ ಮತ್ತು ಚರಣ್ ರಾಜ್ ಮಾತನಾಡಿ ವಿಜಯ್ ಸರ್ ನೀಡುವ ಸ್ವಾತಂತ್ರ್ಯ ಮತ್ತು ನಂಬಿಕೆಯಿಂದಾಗಿ ‘ಸಲಗ’, ‘ಭೀಮ’ ನಂತರ ಇಲ್ಲೂ ಒಳ್ಳೆಯ ಹಾಡುಗಳು ಮೂಡಿಬರಲು ಸಾಧ್ಯವಾಗಿದೆ ಎಂದು ಮಾಹಿತಿ ನೀಡಿದರು
ಸಮಾಜದಲ್ಲಿ ಮಂಗಳಮುಖಿಯರನ್ನು ಗೌರವಯುತವಾಗಿ ನೋಡಬೇಕು ಎಂಬ ಉದ್ದೇಶದಿಂದ ಸಿನಿಮಾದಲ್ಲಿ ಉಮಾಶ್ರೀ ಅವರೊಂದಿಗೆ ಮಂಗಳ ಮುಖಿಯರಿಗೆ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನೀಡಿರುವುದು ನಿರ್ದೇಶಕ ವಿಜಯ್ ಕುಮಾರ್ ಹೆಚ್ಚುಗಾರಿಕೆ

ಚಿತ್ರದಲ್ಲಿ ಬಹುತೇಕ ರಂಗಭೂಮಿ ಕಲಾವಿದರು ಸೇರಿದಂತೆ ಹಲವು ಹೊಸ ಮುಖಗಳಿಗೆ ಈ ಚಿತ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ
ಸಿನಿಮಾದಲ್ಲಿ ಮಾಸ್ ಹಾಡುಗಳು ಹಾಗೂ ಥೀಮ್ ಸಾಂಗ್ ಸೇರಿದಂತೆ ಒಟ್ಟು 5 ರಿಂದ 6 ಉತ್ತಮ ಹಾಡುಗಳಿವೆ

