"International Gandhada Gudi" award to the achievers on February 16 in Dubai

ಸಾಧಕರಿಗೆ”ಅಂತರರಾಷ್ಟ್ರೀಯ ಗಂಧದ ಗುಡಿ” ಪ್ರಶಸ್ತಿ ಫೆಬ್ರವರಿ 16ರಂದು ದುಬೈನಲ್ಲಿ ಪ್ರದಾನ - CineNewsKannada.com

ಸಾಧಕರಿಗೆ”ಅಂತರರಾಷ್ಟ್ರೀಯ ಗಂಧದ ಗುಡಿ” ಪ್ರಶಸ್ತಿ ಫೆಬ್ರವರಿ 16ರಂದು ದುಬೈನಲ್ಲಿ ಪ್ರದಾನ

ಕನ್ನಡ ನುಡಿಯ ತಂಪು, ಗಂಧದ ಗುಡಿಯ ಕಂಪನ್ನು ದುಬೈ ನಲ್ಲಿ ಮೆರೆಸಲು ಅಚ್ಚ ಕನ್ನಡದ ತಂಡ ಓವರ್ ಸೀಸ್ ಎಂಟರ್‌ಟೈನ್‌ಮೆಂಟ್ , ಜಿ,ಕೆಡಿ ಇನ್ ವೆಸ್ಟ್ ಮೆಂಟ್ ಎಲ್ ಎಲ್ ಸಿ ಸಹಕಾರದೊಂದಿಗೆ “ಅಂತರಾಷ್ಟ್ರೀಯ ಗಂಧದ ಗುಡಿ ಪ್ರಶಸ್ತಿ ” ಫೆಬ್ರವರಿ 16 ರಂದು ದುಬೈನಲ್ಲಿ ನಡೆಯಲಿದೆ.

ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟಿ‌ ತಾರಾ ಅನುರಾಧ, ನಟ ಸುಚೇಂದ್ರ ಪ್ರಸಾದ್, ನಟ ವಿಜಯ ರಾಘವೇಂದ್ರ ಹಾಗೂ ಸಮಾರಂಭದ ಆಯೋಜಕ ಪೀಟರ್ ಪತ್ರಿಕಾಗೋಷ್ಢಿಯಲ್ಲಿ ಉಪಸ್ಥಿತರಿದ್ದರು.

ಆಯೋಜಕ ಪೀಟರ್ ಮಾತನಾಡಿ ಕನ್ನಡದ ಹೆಮ್ಮೆಯ ಸಾಧಕರನ್ನು, ಅವರ ಅಪ್ರತಿಮ ಸಾಧನೆಯನ್ನ ಗುರುತಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವಿಸುವ ಅಂತರಾಷ್ಟ್ರೀಯ ಕನ್ನಡ ಸಾಂಸ್ಕೃತಿಕ ಅಲೆಯನ್ನ ದುಬೈ ನಲ್ಲಿ ಹುಟ್ಟು ಹಾಕೋ ಆಕಾಂಕ್ಷೆಯಿಂದ ಸಮಾರಂಭವನ್ನು ಆಯೋಜಿಸಿದ್ದೇವೆ ಎಂದು ಹೇಳಿದರು.

ದುಬೈ ಕನ್ನಡಿಗರನ್ನೆಲ್ಲ ಒಟ್ಟುಗೂಡಿಸಿ, ಒಂದು ಕಡೆ ಸೇರಿಸಿ ಕನ್ನಡ ಸಂಸ್ಕೃತಿಯ ಸೆಲೆಯನ್ನ, ಕನ್ನಡ ಚಂದನವನದ ಕಲೆಯನ್ನು ಸಂಭ್ರಮಿಸುವ ಉದ್ದೇಶವೂ ಹೌದು. ಫೆಬ್ರವರಿ 16 ರಂದು ದುಬೈನಲ್ಲಿ ಅದ್ದೂರಿ‌ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಆತಿಥ್ಯವನ್ನ ಜನಪ್ರಿಯ ನಾಯಕರಾದ ಶಿವರಾಜ್ ತಂಗಡಗಿ, ಡಿಕೆ ಸುರೇಶ್, ಸಂಸದ ಹಾಗೂ ರಾಜ ವಂಶಸ್ಥರಾದ ಯದುವೀರ್ ಕೃಷ್ಣರಾಜ ಒಡೆಯರ್, ಅಶ್ವಿನಿ ಪುನೀತ್ ರಾಜಕುಮಾರ್ , ಆರತಿ ಕೃಷ್ಣ ಹಾಗು ಕೆಪಿ ಶ್ರೀಕಾಂತ್ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು

ನಿರೂಪಕಿ ಅನುಶ್ರೀ ಹಾಗೂ ಕನ್ನಡದ ಹೆಸರಾಂತ ನಾಯಕ ವಿಜಯ್ ರಾಘವೇಂದ್ರ ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಚಿತ್ರರಂಗ, ಕ್ರೀಡಾ ಕ್ಷೇತ್ರ, ಸಾಹಿತ್ಯದಲ್ಲಿ, ಪತ್ರಿಕೋದ್ಯಮದಲ್ಲಿ, ವೈದ್ಯಕೀಯ ಸೇವೆ, ಶಿಕ್ಷಣ, ಕಾನೂನು ಹೇಗೆ ಹಲವು ಕ್ಷೇತ್ರದ ಸಾಧಕರಿಗೆ ವಿಶೇಷ ಗೌರವ ಸನ್ಮಾನ ನೀಡಿ ಗೌರವಿಸಲಾಗುವುದು. ಈ ಬಾರಿ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನಟಿ‌ ತಾರಾ ಅನುರಾಧ ಅವರಿಗೆ ನೀಡಲಾಗುತ್ತಿದೆ
ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಮತ್ತು ತಂಡದವರಿಂದ ಕನ್ನಡದ ಸುಪ್ರಸಿದ್ಧ ಹಾಡುಗಳ ಸಂಗೀತ ರಸಸಂಜೆ ಸಮಾರಂಭವಿರಲಿದೆ ಎಂದರು.

ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾತನಾಡಿ ದುಬೈನಲ್ಲಿ ನನ್ನ ನಿರ್ಮಾಣದ ಚಿತ್ರಗಳು ಸೇರಿದಂತೆ ಅನೇಕ ಕನ್ನಡ ಚಿತ್ರಗಳನ್ನು ಪ್ರದರ್ಶನ ಮಾಡಿದ್ದಾರೆ. ಈಗ “ಅಂತರಾಷ್ಟ್ರೀಯ ಗಂಧದ ಗುಡಿ ಪ್ರಶಸ್ತಿ ”ಯನ್ನು ಕನ್ನಡಿಗರಿಗಾಗಿ ದುಬೈನಲ್ಲಿ ಅದ್ದೂರಿಯಾಗಿ ಆಯೋಜಿಸುತ್ತಿದ್ದಾರೆ ಸಮಾರಂಭ ಯಶಸ್ವಿಯಾಗಲಿ ಎಂದು ಹಾರೈಸಿದರು.

ಹಿರಿಯ ನಟಿ ತಾರಾ ಅನುರಾಧ ಮಾತನಾಡಿ “ಜೀವಮಾನದ ಸಾಧನೆ” ಪ್ರಶಸ್ತಿ ನೀಡುತ್ತಿದ್ದಾರೆ‌‌. ಸಂತೋಷ. ಆದರೆ, ಸಾಧನೆ ಮಾಡಬೇಕಾಗಿರುವುದು ಬಹಳ ಇದೆ. ಕನ್ನಡ ಶಾಲೆಗಳನ್ನು ಜೀರ್ಣೋದ್ಧಾರ ಮಾಡುತ್ತಿರುವ ವಿಷಯ ತಿಳಿದು ಇನ್ನೂ ಸಂತೋಷವಾಯಿತು ಎಂದು ತಿಳಿಸಿದರು.

ಹಿರಿಯ ನಟ ಸುಚೇಂದ್ರ ಪ್ರಸಾದ್. ನಟ ವಿಜಯ್ ರಾಘವೇಂದ್ರ ಮಾತನಾಡಿ ಕನ್ನಡಿಗರಿಗಾಗಿ ಆಯೋಜಿಸುತ್ತಿರುವ ಸಮಾರಂಭದ ಆಯೋಜಿಸಲಾಗಿರುವುದು ಖುಷಿಯಾಗಿದೆ ಎಂದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin